ದಾವಣಗೆರೆ: ಯಾರೋ ಇಬ್ಬರು ರಾಜೀನಾಮೆ ನೀಡ್ತಾರೆ ಅಂದ ಮಾತ್ರಕ್ಕೆ ಪಕ್ಷವೇ ಮುಳುಗಿ ಹೋಗಲ್ಲ. 11 ಕೋಟಿ ಕಾರ್ಯಕರ್ತರನ್ನು ಹೊಂದಿರುವ ಪಕ್ಷ ನಮ್ಮದು ಎಂದು ದಾವಣಗೆರೆಯ ಸಂಸದ ಜಿ.ಎಂ.ಸಿದ್ದೇಶ್ವರ ಉಡಾಫೆ ಉತ್ತರ ನೀಡಿದ್ದಾರೆ.
ದಾವಣಗೆರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಸರಣಿ ರಾಜೀನಾಮೆ ನೀಡಿದ ವಿಚಾರವಾಗಿ ಮಾತನಾಡಿದ ಅವರು, ರಾಜೀನಾಮೆ ಕೊಡುವ ಮುನ್ನ ಜಿಲ್ಲಾಧ್ಯಕ್ಷರು, ಶಾಸಕರೊಂದಿಗೆ ಮಾತನಾಡಬೇಕು. ಆದರೆ ಇದುವರೆಗೆ ಯಾರೊಬ್ಬರೂ ಪಕ್ಷಕ್ಕೆ ರಾಜೀನಾಮೆ ಕೊಟ್ಟಿಲ್ಲ. ಟಿವಿಯಲ್ಲಿ ಬರಬೇಕಂತಲೇ ರಾಜೀನಾಮೆ ಕೊಟ್ಟಿದ್ದೇವೆ ಎಂದು ಹೇಳಿರಬೇಕು. ಎಲ್ಲರನ್ನು ಮಾತನಾಡಿಸಿ ಸಮಾಧಾನ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಾಧನೆ ಶಿಖರವೇರಿದ ಸಂಕೇತ್ – ಪಾನ್‌ಬೀಡಾ ಮಾರುತ್ತಿದ್ದ ಹುಡುಗನ `ಬೆಳ್ಳಿ’ ಸಾಧನೆ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 32 ಹತ್ಯೆಗಳಾಗಿದ್ದವು. ನಮ್ಮ ಸರ್ಕಾರದಲ್ಲಿ ಇಬ್ಬರ ಹತ್ಯೆಯಾಗಿದೆ. ಮುಖ್ಯಮಂತ್ರಿಗಳು ಕಾನೂನುಬದ್ಧವಾಗಿ, ಸಂವಿಧಾನಾತ್ಮಕವಾಗಿ ಕ್ರಮ ತೆಗೆದುಕೊಳ್ಳುತ್ತಾರೆ. ಯಾರೋ ಹೇಳಿದ್ದಾರೆಂದು ಎನ್ಕೌಂಟರ್ ಮಾಡಿದ್ರೆ ನೀವೇ ಗುಂಡಿಕ್ಕಿ ಕೊಂದದ್ದು ಎಂದು ಸುದ್ದಿ ಮಾಡಿ ಸರ್ಕಾರ ಬೀಳಿಸುತ್ತೀರಾ? ಹಾಗಾಗಿ ಕಾನೂನುಬದ್ಧವಾಗಿಯೇ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.