ಬೀದರ್: ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಮೊಬೈಲ್ ಟ್ರ್ಯಾಕ್ ಮಾಡಿದರೆ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಬಗ್ಗೆ ಎಲ್ಲವೂ ಗೊತ್ತಾಗುತ್ತೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೊಸ ಬಾಂಬ್ ಸಿಡಿಸಿದ್ದಾರೆ.
ಬೀದರ್‌ನಲ್ಲಿ (Bidar) ಮಾತನಾಡಿದ ಅವರು, ಯಾರ‍್ಯಾರು ರೆಕಮೆಂಡ್ ಮಾಡಿದ್ರು? ಏನೇನ ಮಾಡಿದ್ರೂ ಎಲ್ಲವೂ ಕ್ಲೀನ್ ಆಗಿ ಗೊತ್ತಾಗುತ್ತದೆ. ಪ್ರಜ್ವಲ್ ರೇವಣ್ಣನ (Prajwal Revanna) ಬಿಟ್ಟೋರು ಸಿದ್ದರಾಮಯ್ಯ. ಕೇಳೋದು ಮೋದಿನಾ? ರಾಜ್ಯದಲ್ಲಿ ಪೊಲೀಸ್ ಇದ್ದಾರಾ ಸತ್ತೋಗಿದ್ದಾರಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿಡಿಯೋ ಬಿಡುಗಡೆ ಮಾಡಲು ನನಗೆ ಹುಚ್ಚು ಹಿಡಿದಿದ್ಯಾ? ಟೆಂಟ್‌ನಲ್ಲಿ ಬ್ಲೂ ಫಿಲಂ ಬಿಡುಗಡೆ ಮಾಡುವವರಿಂದ ರಿಲೀಸ್ : ಹೆಚ್‌ಡಿಕೆ
ಎಲ್ಲಾ ಎಪಿಸೋಡ್‌ಗಳನ್ನ ನೋಡಿದಾಗ ಸಿದ್ದರಾಮಯ್ಯನವರೇ ವಿದೇಶಕ್ಕೆ ಕಳಿಸಿದ್ದಾರೆ ಅನಿಸುತ್ತೆ. ಕಾನೂನು ಸುವ್ಯವಸ್ಥೆ ಇರೋದು ರಾಜ್ಯ ಸರ್ಕಾರದ ಕೈಯಲ್ಲಿ. ಪ್ರಜ್ವಲ್ ರೇವಣ್ಣ ಮತ ಹಾಕಿ ವಿದೇಶಕ್ಕೆ ಹೋಗೋದು ಸರ್ಕಾರಕ್ಕೆ ಗೊತ್ತಿರಲಿಲ್ವಾ ಪ್ರಶ್ನಿಸಿದ್ದಾರೆ.
ದೇವೇಗೌಡರಿಗೆ ಅವಮಾನ ಮಾಡಬೇಕು ಅಂತಾ ಮಾಡಿರೋ ಸ್ಕೀಮ್ ಇದು. ರೇವಣ್ಣ ಮಾಡಿರೋದು ತಪ್ಪು ಅಂತಾ ಗೊತ್ತಿದ್ರೂ ಸರ್ಕಾರ ಯಾಕೇ ಸುಮ್ಮನಿತ್ತು? ಘಟನೆ ನಡೆದು 15 ದಿನ ಆದ್ರೂ ಪ್ರಕರಣ ದಾಖಲಿಸಲಿಲ್ವಾ? ಇಂಟಿಲೆಜೆನ್ಸ್‌ನವರು ಏನ್ ಮಾಡ್ತಾ ಇದ್ರು? ನಿಮ್ಮ ಕಾನೂನು ಸುವ್ಯವಸ್ಥೆ ಕೇಂದ್ರ ಸರ್ಕಾರಕ್ಕೆ ಅಂತಾ ಬರೆದುಕೊಡಿ. ರಾಜ್ಯ ಸರ್ಕಾರದ ತಪ್ಪು ಇಟ್ಕೊಂಡು ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಯಾವುದೇ ದೇಶಕ್ಕೆ ಹೋಗಿರಲಿ, ಹಿಡಿದು ತರ್ತೀವಿ: ಗುಡುಗಿದ ಸಿಎಂ