ಕೋಲ್ಕತ್ತಾ: ಜೀವನ ನಿರ್ವಹಣೆಗೆ ಸಾಕಾಗುವಷ್ಟು ವೇತನ ಹೊಂದಿದ ಮಹಿಳೆಗೆ ಪತಿಯಿಂದ ಜೀವನಾಂಶ ಪಡೆಯುವ ಅಗತ್ಯವಿಲ್ಲ ಎಂದು ಕೋಲ್ಕತಾ ಹೈ ಕೋರ್ಟ್ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ.
ವಿಚ್ಛೇದನ ಕೋರಿ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪತಿಯಿಂದ ಜೀವನ ನಿರ್ವಹಣೆಗೆ ಜೀವನಾಂಶವನ್ನು ಕೋರಿ ಪತಿಯ ಸಂಪಾದನೆ ಮಾಹಿತಿ ನೀಡಿದ್ದರು. ಅಲ್ಲದೇ ಇದೇ ವೇಳೆ ತಮ್ಮ ವೇತನ ಮಾಹಿತಿಯನ್ನು ಕೋರ್ಟಿಗೆ ಸಲ್ಲಿಸಿದ್ದರು.
Advertisement
Advertisement
ಅರ್ಜಿಯ ವಿಚಾರಣೆ ನಡೆಸಿದ ಹೈ ಕೋರ್ಟ್ ನ್ಯಾ. ಬಿಸ್ವಾಜಿತ್ ಬಸು ಅವರು, ಮಹಿಳೆಯ ವೇತನ 74 ಸಾವಿರಕ್ಕಿಂತ ಕಡಿಮೆ ಇಲ್ಲ. ಇದು ಅವರ ಜೀವನ ನಿರ್ವಹಣೆಗೆ ಸಾಕಾಗುತ್ತದೆ. ಅವರ ಜೀವನ ನಿರ್ವಹಣೆಗೆ ಕೇಳಿರುವ 50 ಸಾವಿರ ರೂ. ಗಳನ್ನು ಗಳಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Advertisement
ಮಹಿಳೆಗೆ ಜೀವನಾಂಶ ಪಡೆಯಲು ಹೈ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ಕೆಳ ನ್ಯಾಯಾಲಯದಲ್ಲಿ ಮಧ್ಯಂತರ ಜೀವನಾಂಶ ಪಡೆಯಲು ಮಹಿಳೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅರ್ಜಿಯನ್ನ ತಿರಸ್ಕರಿಸಿತ್ತು. ಇದಕ್ಕೂ ಮುನ್ನ 2016 ಮಾರ್ಚ್ ರಂದು ನಲ್ಲಿ ಟ್ರಯಲ್ ಕೋರ್ಟ್ ಮಹಿಳೆಗೆ ದಾವೆ ವೆಚ್ಚವಾಗಿ 30 ಸಾವಿರ ರೂ. ಗಳನ್ನು ನೀಡುವಂತೆ ಪತಿಗೆ ಆದೇಶ ನೀಡಿತ್ತು.
Advertisement
ಹೈ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಪತಿ ವಾರ್ಷಿಕ 83 ಲಕ್ಷ ಆದಾಯವನ್ನು ಪಡೆಯುತ್ತಿದ್ದು, ಪತಿಯ ಆದಾಯಕ್ಕನುಗುಣವಾಗಿ ಜೀವನಾಂಶ ನೀಡಬೇಕು. ನನ್ನ ಆದಾಯವು ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಹೀಗಾಗಿ ಪ್ರತ್ಯೇಕವಾದ ಪತಿಯಿಂದ ಪ್ರತಿ ತಿಂಗಳು 50 ಸಾವಿರ ಜೀವನಾಂಶ ಕೊಡಿಸಬೇಕು. ಇದರಲ್ಲಿ ಮನೆ ನಿರ್ವಹಣೆಗೆ 10 ಸಾವಿರ ರೂ., ಪಾಕೆಟ್ ಮನಿ 4 ಸಾವಿರ ರೂ., 22 ಸಾವಿರ ರೂ. ಸರಕು, ಬಟ್ಟೆ ದಿನ ನಿತ್ಯದ ಖರ್ಚಿಗೆ ಮತ್ತು 14 ಸಾವಿರ ರೂ. ಕಾನೂನು ಹೋರಾಟದ ವೆಚ್ಚವನ್ನು ನೀಡಬೇಕೆಂದು ಕೋರಿದ್ದರು.
ಇದೇ ವೇಳೆ ಕೋರ್ಟಿಗೆ ಮಹಿಳೆ ತನ್ನ ವೇತನದ ಲೆಕ್ಕಪತ್ರಗಳನ್ನು ಸಲ್ಲಿಕೆ ಮಾಡಿದ್ರು. ಡಿ.2018, ಜ.2019 ಮತ್ತು ಮಾ.2019 ರಲ್ಲಿ ಮಹಿಳೆಯ ವೇತನ 74,624 ರಷ್ಟಿತ್ತು. ಕಳೆದ ತಿಂಗಳು 81,219 ವೇತನ ಪಡೆಯುತ್ತಿದ್ದಾರೆ ಎಂದು ದೃಢಪಟ್ಟಿತ್ತು. ಈ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಮಹಿಳೆಯ ಅವಶ್ಯಕತೆಗಳಿಗೆ 50 ಸಾವಿರ ಸಾಕಾಗುತ್ತದೆ ಎಂದು ತಿಳಿಸಿದೆ.