ಚಿಕ್ಕಬಳ್ಳಾಪುರ: ಆರ್‌ಎಸ್‌ಎಸ್ (RSS) ಭಯೋತ್ಪಾದಕ ಚಟುವಟಿಕೆ ಮಾಡಿದ್ದರೆ ತೋರಿಸಲಿ ಸರ್ಕಾರ (Government) ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಎಂಟಿಬಿ ನಾಗರಾಜ್ (MTB Nagaraj) ತಿಳಿಸಿದ್ದಾರೆ.
Advertisement
ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಎಂಟಿಬಿ ನಾಗರಾಜ್, ಆರ್‌ಎಸ್‌ಎಸ್ ನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಲ್ಲ. ಪಿಎಫ್‌ಐ (PFI) ಇತ್ತೀಚೆಗೆ ಹುಟ್ಟಿರೋದು. ಆದರೆ ಪಕ್ಷ ಸಂಘಟನೆಗಾಗಿ 100 ವರ್ಷಗಳ ಹಿಂದೆ ಹುಟ್ಟಿದ ಸಂಘಟನೆ. ಪಕ್ಷದ ಹೆಸರಲ್ಲಿ ಭಯೋತ್ಪಾದಕ ಚಟುವಟಿಕೆ ಮಾಡ್ತಾರಾ? ಆರ್‌ಎಸ್‌ಎಸ್ ಆ ರೀತಿ ಚಟುವಟಿಕೆ ಮಾಡಿದ್ದರೆ ತೋರಿಸಲಿ, ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ
Advertisement
Advertisement
ಇದೇ ವೇಳೆ ಪಿಎಫ್‌ಐ ಸಂಘಟನೆ ಬ್ಯಾನ್ (PFI Ban) ವಿಚಾರ ಸಂಬಂಧಿಸಿದಂತೆ ಮಾತನಾಡಿ, ಪಿಎಫ್‌ಐ ಸಂಘಟನೆ ತಾತ್ಕಾಲಿಕವಾಗಿ ಬ್ಯಾನ್ ಮಾಡಿದ್ದಾರೆ. ಆದರೆ ಸಂಘಟನೆ ಹೆಸರಲ್ಲಿ ಬೇರೆ ಬೇರೆ ಕೃತ್ಯಗಳನ್ನು ಮಾಡ್ತಿರುವ ಮಾಹಿತಿ ಸಿಕ್ಕಿದೆ. 13 ರಾಜ್ಯಗಳಲ್ಲಿ 250 ಜನರನ್ನ ಬಂಧಿಸಿದ್ದಾರೆ. ಪಿಎಫ್‌ಐ ಸಂಘಟನೆ ಹೆಸರಿನಲ್ಲಿ ಬೇರೆ ಬೇರೆ ಚಟುವಟಿಕೆ ಮಾಡುತ್ತಿದ್ದಾರಾ? ಇಲ್ಲವಾ ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.