ಬರ್ಲಿನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಹಿಳೆಯಾಗಿದ್ದರೆ, ಉಕ್ರೇನ್ ಮೇಲೆ ಯುದ್ಧವನ್ನು ಘೊಷಿಸುತ್ತಿರಲಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೆ ನೀಡಿದ್ದಾರೆ.
ಜರ್ಮನಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಾನ್ಸನ್, ಪುಟಿನ್‌ಗೆ ಒಬ್ಬ ಮಹಿಳೆಗೆ ಇರುವ ಮನಸ್ಥಿತಿ ಖಂಡಿತವಾಗಿಯೂ ಇಲ್ಲ. ಒಂದು ವೇಳೆ ಆತ ಮಹಿಳೆಯಾಗಿದ್ದರೆ, ಖಂಡಿತವಾಗಿಯೂ ಈ ರೀತಿ ಆಕ್ರಮಣ, ಹಿಂಸಾಚಾರದ ಹುಚ್ಚುತನವನ್ನು ಪ್ರಾರಂಭಿಸುತ್ತಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಗ್ನಿಪಥ್ ಯೋಜನೆ – ಇಲ್ಲಿಯವರೆಗೆ 1.83 ಲಕ್ಷ ನೋಂದಣಿ
ಉಕ್ರೇನ್ ಮೇಲೆ ಪುಟಿನ್ ಅವರ ಆಕ್ರಮಣ ವಿಷಕಾರಿ ಪುರುಷತ್ವದ ಪರಿಪೂರ್ಣ ಉದಾಹರಣೆಯಾಗಿದೆ. ಪ್ರಪಂಚದಾದ್ಯಂತ ಮಹಿಳೆಯರಿಗೆ ಅಧಿಕಾರಗಳಲ್ಲಿ ಉತ್ತಮ ಸ್ಥಾನಗಳನ್ನು ನೀಡುವಂತೆ ಬೋರಿಸ್ ಜಾನ್ಸನ್ ಕರೆ ನೀಡಿದರು. ಇದನ್ನೂ ಓದಿ: ಬೈಡನ್ ಪತ್ನಿ, ಮಗಳು ಸೇರಿದಂತೆ 23 ಅಮೆರಿಕನ್ನರಿಗೆ ನಿಷೇಧ ಹೇರಿದ ರಷ್ಯಾ
ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವನ್ನು ಜನರು ಕೊನೆಗೊಳಿಸಬೇಕೆಂದು ಬಯಸುತ್ತಾರೆ. ಆದರೆ ಯಾವುದೇ ಒಪ್ಪಂದಗಳಿಲ್ಲದೇ ಪುಟಿನ್ ಶಾಂತಿಯುತ ಮಾತುಕತೆಗೆ ಮುಂದಾಗುತ್ತಿಲ್ಲ. ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳು ಉಕ್ರೇನ್ ಅನ್ನು ಬೆಂಬಲಿಸಬೇಕು. ಮಾಸ್ಕೊದೊಂದಿಗೆ ಶಾಂತಿಯುತ ಮಾತುಕತೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.