ಮುಂಬೈ: ವಾರಣಾಸಿಯಲ್ಲಿ (Varanasi) ಪ್ರಿಯಾಂಕಾ ಗಾಂಧಿ (Priyanka Gandhi) ಸ್ಪರ್ಧಿಸಿದರೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಲಬಹುದು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ (Sanjay Raut) ಹೇಳಿಕೆ ನೀಡಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಪ್ರತಿನಿಧಿಸುವ ಕ್ಷೇತ್ರವಾದ ವಾರಣಾಸಿಯಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ, ಆಘಾತಕಾರಿ ಫಲಿತಾಂಶಗಳು ಬರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಶಿಮ್ಲಾದಲ್ಲಿ ದೇವಾಲಯ ಕುಸಿತ – 9 ಸಾವು, ಹಲವರು ಸಿಲುಕಿರುವ ಶಂಕೆ
ಭಾರತದಲ್ಲಿ ರಾಜಕೀಯ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ಕಾಂಗ್ರೆಸ್ ಜನರಿಂದ ಬೆಂಬಲ ಪಡೆಯುತ್ತಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ, ಪ್ರಧಾನಿ ಮೋದಿ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ. ಮೋದಿ ಅವರನ್ನು ಪ್ರಿಯಾಂಕಾ ಸೋಲಿಸಬಹುದು ಎಂದು ಮಾತನಾಡಿದ್ದಾರೆ.
2014 ರಲ್ಲಿ ಠಾಕ್ರೆ ಮೈತ್ರಿ ಮುರಿದುಕೊಂಡರು ಎಂದು ಮಹಾರಾಷ್ಟ್ರದ ಸಂಸದರ ಸಭೆಯಲ್ಲಿ ಪಿಎಂ ಮೋದಿ ಹೇಳಿದ್ದರು. ಮಹಾರಾಷ್ಟ್ರದ ಎಲ್ಲರಿಗೂ ತಿಳಿದಿರುವಂತೆ ಅವರು ಸುಳ್ಳು ಹೇಳುತ್ತಿದ್ದಾರೆ. ಆಗಿನ ಬಿಜೆಪಿ ನಾಯಕ ಏಕನಾಥ್ ಖಾಡ್ಸೆ ಅವರು ಠಾಕ್ರೆ ಅವರಿಗೆ ಕರೆ ಮಾಡಿ ಮೈತ್ರಿ ಮುರಿಯುವ ಬಿಜೆಪಿಯ ನಿರ್ಧಾರವನ್ನು ತಿಳಿಸಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 10,000 ಪೊಲೀಸರು.. ಆ್ಯಂಟಿ ಡ್ರೋನ್ ಸಿಸ್ಟಮ್, ಅತ್ಯಾಧುನಿಕ ಕ್ಯಾಮೆರಾ – ಸ್ವಾತಂತ್ರ್ಯೋತ್ಸವಕ್ಕೆ ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]