ಮೋದಿ ವಾರಣಾಸಿಯಿಂದ ಸ್ಪರ್ಧಿಸಬಹುದಾದರೆ, ನಾನು ಅಸನ್ಸೋಲ್‍ನಿಂದ ಸ್ಪರ್ಧಿಸಬಹುದು: ಶತ್ರುಘ್ನ ಸಿನ್ಹಾ

Public TV
1 Min Read
Shatrughan Sinha

ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಸ್ಪರ್ಧಿಸಬಹುದಾದರೆ, ನಾನು ಬಂಗಾಳದ ಅಸನ್ಸೋಲ್‍ನಿಂದ ಸ್ಪರ್ಧಿಸಬಹುದು ಎಂದು ಬಿಜೆಪಿಗೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಸ್ಪರ್ಧಿಸಬೇಕಾದರೆ ಬಿಜೆಪಿ ಏನು ಮಾಡುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.

narendra modi 3

ಪ್ರಧಾನಿ ಅವರಂತಹ ರಾಷ್ಟ್ರ ನಾಯಕರೇ, ಲೋಕಸಭೆ ಚುನಾವಣೆಯಲ್ಲಿ ಎಲ್ಲಿಂದಲಾದರೂ ಸ್ಪರ್ಧಿಸುವುದನ್ನು ಒಪ್ಪಿಕೊಂಡರೆ, ನನಗೂ ಅದೇ ಅನ್ವಯಿಸುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: 2.8 ಕೋಟಿ ಸಾಗಾಟ -ಸಿಕ್ಕಿ ಬಿದ್ದ ಮಾಜಿ ಸಂಸದನ ಪತ್ನಿ

ಯಾವಾಗಲೂ ಬಂಗಾಳದ ಅಭಿವೃದ್ಧಿಗೆ ನಿಂತಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಅಸನ್ಸೋಲ್ ಮತದಾರರು ಬೆಂಬಲ ನೀಡುತ್ತಾರೆ ಎನ್ನುವುದು ನನಗೆ ಖಚಿತವಾಗಿದೆ. ನ್ಯಾಯಕ್ಕಾಗಿ ಮತ ನೀಡಿ ಬಿಜೆಪಿಯನ್ನು ಸೋಲಿಸುತ್ತಾರೆ ಎಂದರು. ಇದನ್ನೂ ಓದಿ: ‘ಶಾಸಕನ ಮೊಮ್ಮಗ’ ಎನ್ನುವುದೇ ಬೈಕ್ ನಂಬರ್ ಪ್ಲೇಟ್!

Mamata 1

ಇತ್ತೀಚೆಗೆ ಶತ್ರುಘ್ನ ಸಿನ್ಹಾ ಅವರು ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವುದರ ಕುರಿತು ಪಶ್ಚಿಮ ಬಂಗಾಳದ ಬಿಜೆಪಿ ನಾಯಕರಾದ ಸುಕಾಂತ ಮಜುಂದಾರ್ ಮತ್ತು ಅಗ್ನಿಮಿತ್ರ ಪಾಲ್ ಮಾತನಾಡಿ ರಾಜ್ಯಕ್ಕೆ ಶತ್ರುಘ್ನ ಸಿನ್ಹಾ ಅವರು ಹೊರಗಿನವರು ಎಂದು ಲೇವಡಿ ಮಾಡಿದ್ದರು.

BJP FLAG

ಇಂದು ಅಸನ್ಸೋಲ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಶತ್ರುಘ್ನ ಸಿನ್ಹಾ ಅವರು ಬಿಜೆಪಿಯ ಅಗ್ನಿಮಿತ್ರ ಪಾಲ್ ವಿರುದ್ಧ ಕಣಕ್ಕಿಳಿದಿದ್ದಾರೆ. ಅಸನ್ಸೋಲ್ ಲೋಕಸಭಾ ಕ್ಷೇತ್ರ ಮತ್ತು ಬಳ್ಳಿಗುಂಜೆ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 12 ರಂದು ಉಪಚುನಾವಣೆ ನಡೆಯಲಿದ್ದು, ಏಪ್ರಿಲ್ 16 ರಂದು ಮತ ಎಣಿಕೆ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *