ಕೋಲಾರ: ಸಚಿವ ಸಂಪುಟ ಪುನರ್ ರಚನೆ (Cabinet Reshuffle) ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಯಾರ ಮನೆ ಬಾಗಿಲಿಗೂ ಹೋಗಿ ಕೇಳಿಕೊಳ್ಳಲ್ಲ. ಒಂದು ವೇಳೆ ಸಚಿವ ಸ್ಥಾನ ಕೊಟ್ಟರೆ ತೆಗೆದುಕೊಳ್ಳುವೆ ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಸ್ಪಷ್ಟಪಡಿಸಿದರು.
ಕೋಲಾರದ ತಾಲೂಕು ಕಚೇರಿಯಲ್ಲಿ ದರಕಾಸ್ತು ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಬಗ್ಗೆ ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯ ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನಮಾನ ಬೇಕೋ ಅವರು ಹೈಕಮಾಂಡ್ ಬಳಿ ಹೋಗುತ್ತಾರೆ. ಸಚಿವ ಸ್ಥಾನ ಕೇಳುವುದು ಅವರ ಜವಾಬ್ದಾರಿ ಎಂದರು. ಇದನ್ನೂ ಓದಿ: ಸಂತ ಚಿನ್ಮಯ್ ಕೃಷ್ಣದಾಸ್‌ರಿಂದ ಅಂತರ ಕಾಯ್ದುಕೊಂಡ ಇಸ್ಕಾನ್
ಇನ್ನು ಚನ್ನಪಟ್ಟಣ ಫಲಿತಾಂಶ ಏರುಪೇರಾಗುತ್ತೆ ಎಂದು ಮೊದಲೇ ಹೇಳಿದ್ದೆ. ಆದರೆ ಜನ ನಮ್ಮ ಮೇಲೆ ನಿರೀಕ್ಷೆ ಇಟ್ಟಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ. ನಾನು ಸಹ ಕೋಲಾರದಲ್ಲಿ ಗೆಲ್ಲುತ್ತೇನೆ ಎಂದುಕೊಂಡಿರಲಿಲ್ಲ. ಜನ ನನ್ನನ್ನು ಗೆಲ್ಲಿಸಿದ್ದಾರೆ. ಗೆಲುವಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಉತ್ತಮ ಕೆಲಸವೇ ಕಾರಣ ಎಂದರು. ಇದನ್ನೂ ಓದಿ: ನ.30ರಂದು ನಿಖಿಲ್ ಕುಮಾರಸ್ವಾಮಿ ಕೃತಜ್ಞತಾ ಸಭೆ
ನಾವು ಜನ ಸಾಮಾನ್ಯರು, ರೈತರ, ಅಭಿವೃದ್ಧಿಯ ಪರವಾಗಿದ್ದೇವೆ ಎಂಬುದಕ್ಕೆ ಈ ಫಲಿತಾಂಶವೇ ಕಾರಣ. ನಾವು ಹಣದಿಂದ ಗೆದ್ದಿದ್ದೇವೆ ಅನ್ನೋದಾದರೆ ತೋರಿಸಲಿ. ದುಡ್ಡು ಕೊಟ್ಟಿದ್ದರೆ ತೋರಿಸಲಿ, ನಾವು ತಪ್ಪೊಪ್ಪಿಕೊಳ್ಳುತ್ತೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಆರ್.ಅಶೋಕ್
ಸರ್ಕಾರ ಪ್ರಭಾವ ಬಳಸಿದೆ ಅನ್ನೋದಾದರೆ 2019ರಲ್ಲಿ ಮಂಡ್ಯದಲ್ಲಿ ಸೋಲು ಏಕೆ? ಜನ ತೀರ್ಮಾನ ಮಾಡಿದರೆ ಮುಗೀತು. ಅವರ ತೀರ್ಮಾನದಂತೆ ಫಲಿತಾಂಶ ಬಂದಿದೆ. ಇನ್ನು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು ಒಂದೇ ಒಂದು ಕೆಡಿಪಿ ಸಭೆ ಮಾಡಿಲ್ಲ. ಅಲ್ಲಿ ಲೋಕಲ್ ವರ್ಸಸ್ ನಾನ್ ಲೋಕಲ್ ಬಂದಿತ್ತು. ಸಿಪಿವೈ ಲೋಕಲ್ ಆದರೆ ನಿಖಿಲ್ ಕುಮಾರಸ್ವಾಮಿ ಹೊರಗಿನವರು. ಹಾಗಾಗಿ ಸಿಪಿವೈಗೆ ಗೆಲುವು ಸುಲಭವಾಯಿತು ಎಂದು ಹೇಳಿದರು. ಇದನ್ನೂ ಓದಿ: ರಾಜ್ಯಾಧ್ಯಕ್ಷ ಹೋಗಿ ಡಿಕೆಶಿ ಬಳಿ 20 ಪತ್ರಕ್ಕೆ ಸಹಿ ಹಾಕಿಸಿಕೊಂಡ ವಿಡಿಯೋ ನನ್ನ ಬಳಿ ಇದೆ: ಯತ್ನಾಳ್ ಬಾಂಬ್