ಕೋಲಾರ: ನವೀನ್ ಬೆಳಗ್ಗೆ 6 ಗಂಟೆಗೆ ನಮ್ಮ ಜೊತೆ ಬರುತ್ತಿದ್ದರೆ ಉಳಿಯುತ್ತಿದ್ದ. 10 ಗಂಟೆಗೆ ನವೀನ್ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಅನ್ನೋದನ್ನು ಕೇಳಿ ಅತೀವ ದುಃಖವಾಯಿತು ಎಂದು ಉಕ್ರೇನ್‍ನಿಂದ ವಾಪಸ್ ಆದ ಕೋಲಾರದ ವರ್ಷಿತಾ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ನವೀನ್ ಒಳ್ಳೆಯ ಸ್ನೇಹಿತರು. ಇಬ್ಬರೂ ವಾಪಸ್ ಭಾರತಕ್ಕೆ ಬರುವ ಬಗ್ಗೆ ಮಾತನಾಡಿಕೊಂಡಿದ್ದವು. ಎಲ್ಲದರಲ್ಲೂ ನವೀನ್ ತುಂಬಾ ಒಳ್ಳೆಯ ಸ್ನೇಹಿತನಾಗಿದ್ದ. ಎಲ್ಲರೊಂದಿಗೆ ಸಂತೋಷದಿಂದ, ತಮಾಷೆ ಮಾಡಿಕೊಂಡು ನಗುನಗುತ್ತಾ ಇರ್ತಿದ್ದ. ನವೀನ್‍ಗೆ ಯಾರೂ ವಿರೋಧಿಗಳಿರಲಿಲ್ಲ. ಎಲ್ಲರೊಂದಿಗೆ ಕುಟುಂಬಸ್ಥರಂತೆ ಬೆರೆಯುತ್ತಿದ್ದ ಎಂದು ಹೇಳಿದರು.
Advertisement
Advertisement
ನಾನು ರೈಲ್ವೇ ನಿಲ್ದಾಣದಲ್ಲಿದ್ದಾಗ ನವೀನ್ ಇಲ್ಲಾ ಅನ್ನೋ ವಿಷಯ ಕೇಳಿ ದು:ಖವಾಯಿತು. ನನಗೆ ಹೆಚ್ಚಾಗಿ ಉಕ್ರೇನ್‍ನಲ್ಲಿ ಏನೂ ಗೊತ್ತಿರಲಿಲ್ಲ, ಎಲ್ಲವನ್ನೂ ತೋರಿಸಿ ನನ್ನ ಜೊತೆಗಿದ್ದವನು ನವೀನ್. ಇಂದಿಗೂ ನವೀನ್ ಇಲ್ಲಾ ಅನ್ನೋದನ್ನ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್
Advertisement
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ, ರಾಯಭಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಪೋಲ್ಯಾಂಡ್ ಗಡಿಯಿಂದ ನಮ್ಮ ಮನೆಯವರೆಗೆ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. ಬಾಂಬ್ ದಾಳಿ, ಗುಂಡಿನ ದಾಳಿ ನೋಡಿದರೆ ನಾನು ವಾಪಸ್ ಬರುತ್ತೇನೆ ಅನ್ನೋ ನಂಬಿಕೆ ಇರಲಿಲ್ಲ. ತಂದೆ-ತಾಯಿ ಧೈರ್ಯ ಹೇಳಿದ ಮೇಲೆ ಎಲ್ಲಾ ಕಷ್ಟವನ್ನು ಎದುರಿಸಿಕೊಂಡು ಇಂದು ವಾಪಸ್ಸಾಗಿದ್ದೇನೆ. ಅಷ್ಟು ದೂರದಿಂದ ಇಲ್ಲಿಗೇಕೆ ಬಂದೆ ಎನ್ನಿಸಿತ್ತು. ಆದರೆ ತಂದೆ ಹೇಳಿದ ಧೈರ್ಯದ ಮಾತುಗಳಿಂದ ನಾನು ವಾಪಸ್ಸಾಗಿದ್ದೇನೆ ಎಂದರು.
ಕೇಂದ್ರ ಸರ್ಕಾರ ಜವಬ್ದಾರಿ ವಹಿಸಿದ್ದಕ್ಕೆ ನಾನು ಇಂದು ಸುರಕ್ಷಿತವಾಗಿ ವಾಪಸ್ಸಾಗಿದ್ದೇನೆ. ಎಲ್ಲ ವ್ಯವಸ್ಥೆಗಳನ್ನು ಮಾಡಿ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ವರ್ಷಿತಾ ತಿಳಿಸಿದರು. ಇದನ್ನೂ ಓದಿ: ಭಾರತೀಯರಿಗೆ ಎರಡು ಮಾರ್ಗ ತೆರೆದ ರಷ್ಯಾ