-ಆರೋಗ್ಯ ಕುರಿತಾದ ವದಂತಿ ತಳ್ಳಿ ಹಾಕಿದ ಒಡಿಶಾ ಸಿಎಂ
ಭುವನೇಶ್ವರ: ಒಡಿಶಾ ಸಿಎಂ ನವೀನ್ ಪಟ್ನಾಯಕ್ (Naveen Patnaik) ಆರೋಗ್ಯದ ಕುರಿತು ಮೋದಿ (Narendra Modi) ಹೇಳಿಕೆಗೆ ಸ್ವತಃ ಪಟ್ನಾಯಕ್ ಪ್ರತಿಕ್ರಿಯೆ ನೀಡಿದ್ದು, ಮೋದಿಗೆ ನನ್ನ ಮೇಲೆ ಕಾಳಜಿಯಿದ್ದರೆ ಕರೆ ಮಾಡಿ ಆರೋಗ್ಯ ವಿಚಾರಿಸಬಹುದಿತ್ತು ಎಂದು ತಿರುಗೇಟು ನೀಡಿದ್ದಾರೆ.
Advertisement
ಪ್ರಧಾನಿ ಮೋದಿ ಒಡಿಶಾದಲ್ಲಿ (Odisha) ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ನವೀನ್ ಪಟ್ನಾಯಕ್ ಅವರಿಗೆ ಅನಾರೋಗ್ಯ ಇದ್ದು, ಇದರ ಹಿಂದೆ ಪಿತೂರಿ ನಡೆಯುತ್ತಿದೆ. ಬಿಜೆಪಿ ಸರ್ಕಾರ ಒಡಿಶಾದಲ್ಲಿ ಅಸ್ತಿತ್ವಕ್ಕೆ ಬಂದಲ್ಲಿ ಈ ಪಿತೂರಿ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುವುದಾಗಿ ಹೇಳಿದ್ದರು. ಪ್ರಧಾನಿಯ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನವೀನ್ ಪಟ್ನಾಯಕ್, ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಅವರ ಉತ್ತಮ ಸ್ನೇಹಿತ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಈ ರೀತಿ ಇದ್ದಾಗ ತಮಗೆ ಅವರು ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಬಹುದಿತ್ತು. ಆದರೆ ಒಡಿಶಾದಲ್ಲಿರುವ ಹಲವು ಬಿಜೆಪಿಗರು ಹಾಗೂ ದೆಹಲಿಯಲ್ಲಿರುವವರು ನನ್ನ ಆರೋಗ್ಯದ ಬಗ್ಗೆ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕನ್ಯಾಕುಮಾರಿಯಲ್ಲಿನ ಮೋದಿ ಧ್ಯಾನಕ್ಕೆ ದೀದಿ ಕಟು ಟೀಕೆ
Advertisement
Advertisement
Advertisement
ನಾನು ಪರಿಪೂರ್ಣ ಆರೋಗ್ಯ ಹೊಂದಿದ್ದೇನೆ ಮತ್ತು ಕಳೆದ ಒಂದು ತಿಂಗಳಿನಿಂದ ನಾನು ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದೇನೆ ಎಂದು ಪ್ರಧಾನಿಗೆ ಭರವಸೆ ನೀಡುತ್ತೇನೆ ಎಂದು ಪಟ್ನಾಯಕ್ ತಿಳಿಸಿದರು. ಇದನ್ನೂ ಓದಿ: ಪೆನ್‌ಡ್ರೈವ್ ಹಂಚಿಕೆ ಪ್ರಕರಣ- ನವೀನ್ ಗೌಡ, ಚೇತನ್ ಗೌಡ 3 ದಿನ SIT ವಶಕ್ಕೆ
ಚುನಾವಣಾ ರ‍್ಯಾಲಿಯೊಂದರಲ್ಲಿ ನವೀನ್ ಪಟ್ನಾಯಕ್ ಅವರ ಕೈ ನಡುಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪಾಟ್ನಾಯಕ್ ಅವರ ಆರೋಗ್ಯ ಹದಗೆಟ್ಟಿದೆ ಎಂಬ ಊಹಾಪೋಹಗಳು ಎಲ್ಲೆಡೆ ಹಬ್ಬಿತ್ತು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ನವೀನ್ ಪಟ್ನಾಯಕ್ ತೆರೆ ಎಳೆದಿದ್ದಾರೆ. ಇದನ್ನೂ ಓದಿ: ಕಾಲೇಜಿನಲ್ಲಿ ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ ಮಾರಾಮಾರಿ- 17ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ FIR
ಮೋದಿ ಹೇಳಿದ್ದೇನು?
ಒಡಿಶಾದ ಮಯೂರ್‌ಭಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇತ್ತೀಚಿನ ದಿನಗಳಲ್ಲಿ ನವೀನ್ ಬಾಬು ಅವರ ಎಲ್ಲಾ ಹಿತೈಷಿಗಳು ತುಂಬಾ ಚಿಂತಿತರಾಗಿದ್ದಾರೆ. ಕಳೆದ ವರ್ಷ ನವೀನ್ ಬಾಬು ಅವರ ಆರೋಗ್ಯವು ಹೇಗೆ ಹದಗೆಟ್ಟಿದೆ ಎಂಬುದನ್ನು ನೋಡಿ ಅವರು ತುಂಬಾ ಚಿಂತಿತರಾಗಿದ್ದಾರೆ. ನವೀನ್ ಬಾಬು ಅವರ ಆಪ್ತರು ನನ್ನನ್ನು ಭೇಟಿಯಾದಾಗಲೆಲ್ಲಾ ನವೀನ್ ಬಾಬು ಅವರ ಆರೋಗ್ಯದ ಬಗ್ಗೆ ಚರ್ಚಿಸುತ್ತಾರೆ. ನವೀನ್ ಬಾಬು ಅವರು ಸ್ವಂತವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ. ಅವರು ಎಲ್ಲದಕ್ಕೂ ಬೇರೆಯವರ ಮೇಲೆ ಅವಲಂಬಿತರಾಗಬೇಕಾಗಿದೆ. ನವೀನ್ ಬಾಬು ಅವರ ಅನಾರೋಗ್ಯದ ಹಿಂದೆ ಕೆಲವರ ಷಡ್ಯಂತ್ರವಿದೆ ಎಂಬ ಅನುಮಾನ ನಮಗಿದೆ. ಇದನ್ನೂ ಓದಿ: ಹಗ್ಗಜಗ್ಗಾಟದಲ್ಲಿ ಚೀನಿಯರನ್ನು ಸೋಲಿಸಿದ ಭಾರತೀಯ ಸೈನಿಕರು
ಈ ನಿಗೂಢವನ್ನು ಬಯಲಿಗೆಳೆಯುವುದು ಮುಖ್ಯವಾದ್ದರಿಂದ ಜೂನ್ 10ರಂದು ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ನವೀನ್ ಬಾಬು ಅವರ ಆರೋಗ್ಯ ಏಕಾಏಕಿ ಹದಗೆಡಲು ಕಾರಣವೇನು ಎಂದು ತನಿಖೆ ನಡೆಸಲಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಸಹೋದರನನ್ನು ಮದುವೆಯಾಗಿದ್ದಕ್ಕೆ ಮಹಿಳೆಯ ಕುಟುಂಬವನ್ನೇ ನಾಶಗೈದ!