ಕೊಪ್ಪಳ: ಪ್ರಧಾನಿ ಮೋದಿಗೆ ಜೀವ ಬೆದರಿಕೆ ಇದ್ರೆ ಸಾಯಲಿ ಬಿಡಿ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉಡಾಫೆಯಿಂದ ಹೇಳಿಕೆ ನೀಡಿದ್ದಾರೆ.
ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಾರುಗಳ ಮೇಲೆ ಕೆಂಪು ದೀಪ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತಂದ ಹಿನ್ನೆಲೆಯಲ್ಲಿ ಇಂದು ಕೊಪ್ಪಳದಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ ಈ ಹೇಳಿಕೆ ನೀಡಿದ್ದಾರೆ.
Advertisement
ಈ ಹೊಸ ನಿಯಮದಿಂದ ನಿಮ್ಮ ದಿನನಿತ್ಯದ ಜೀವನದಲ್ಲಿ ಏನು ಬದಲಾವಣೆಯಾಗಿದೆ ಎಂದು ಕೇಳಿದ ಪ್ರಶ್ನೆಗೆ ಉಡಾಫೆಯಾಗಿ ಉತ್ತರ ನೀಡಿದ ಅವರು, ಯಾವ ಬದಲಾವಣೆಯೂ ಇಲ್ಲ. ಬೇಕಾದ್ರೆ ಭದ್ರತೆಯನ್ನೂ ತೆಗೆದುಹಾಕಲಿ. ಮೋದಿ ಅವರಿಗೆ ಹೇಳಿಬಿಡ್ತೀನಿ. ಮೋದಿ ಅವರು ನಿಜಾಗಲೂ ಮಾಡಬೇಕಾಗಿದ್ದು ಭದ್ರತೆ ತೆಗೆಯಬೇಕು. ತಮ್ಮದು ಮೊದಲು ಮೋದಿ ತೆಗೆದುಹಾಕಲಿ. ನಾನು ರೆಡಿ ಅಂದ್ರು.
Advertisement
ಮೋದಿಯವರಿಗೆ ಸಾಕಷ್ಟು ಜೀವ ಬೆದರಿಕೆ ಇರುತ್ತದೆ. ಅವರ ಭದ್ರತೆ ತೆಗೆಯಲು ಹೇಗೆ ಸಾಧ್ಯ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೀವ ಬೆದರಿಕೆ ಇದ್ದರೆ ಸಾಯಲಿ ಬಿಡಿ. ಅಧಿಕಾರ ಬೇಕಾದ್ರೆ ಸಾಯಬೇಕಪ್ಪ. ಯಾರೇನು ಮಾಡ್ಬೇಕು ಅದಕ್ಕೆ? ಅಧಿಕಾರ ಬೇಡ ಅಂದ್ರೆ ಮನೆಯಲ್ಲಿ ಕೂರಲಿ ಅಂದ್ರು.
Advertisement
ಮೋದಿಯನ್ನು ಮಾತ್ರ ಹೇಗೆ ಸಾಯಿಸ್ತಾರೆ? ನನಗೆ ಹೊಡೆದರೆ ನಾನು ಸಾಯ್ತೀನಿ. ಏನು ಮಾಡೋಕಾಗುತ್ತೆ. ಇವೆಲ್ಲಾ ಶೋ ಆಫ್ ರೀ ಇವು… ಎಂದು ಪ್ರಧಾನಿ ಬಗ್ಗೆ ಉಡಾಫೆಯಾಗಿ ಮಾತನಾಡಿದ್ರು.
Advertisement
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದು ನೇಮಕ ಮಾಡುವುದು ಹೈ ಕಮಾಂಡಗೆ ಬಿಟ್ಟ ವಿಚಾರ, ಬೇರೆ ಯಾರಿಗಾದ್ರೂ ಕೊಟ್ಟರೂ ನನಗೆ ಅಭ್ಯಂತರವಿಲ್ಲ. ನನಗೆ ಕೊಟ್ಟರೂ ನಿಭಾಯಿಸಲು ಸಿದ್ಧ ಎಂದು ಹೇಳಿದ್ರು.