ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಅವರ ಅಪ್ಪ ಇಲ್ಲ. ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಬೊಮ್ಮಾಯಿ ಅಲ್ಲ, ಪಿಎಂ ನರೇಂದ್ರ ಮೋದಿ ನಿತ್ಕೊಂಡ್ರು ನಾನು ಸ್ಪರ್ಧೆ ಮಾಡ್ತೀನಿ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸವಾಲು ಹಾಕಿದರು.
Advertisement
ದಾವಣಗೆರೆಯಲ್ಲಿ ನಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಪರಿಶೀಲಿಸಲು ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊನ್ನೆ ಸಿದ್ದರಾಮಯ್ಯ ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ ಹರಿಹರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ಶಾಸಕ ಎಸ್.ರಾಮಪ್ಪ ಹಾಗೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಮೂರ್ನಾಲ್ಕು ಕ್ಷೇತ್ರಗಳಿಂದ ನಿಲ್ತಾರೆ ಎಂದು ಹೇಳಲಾಗುತ್ತಿದೆ. ಚುನಾವಣೆ ಹತ್ತಿರ ಬಂದ ಬಳಿಕ ನೋಡೋಣ ಎಂದು ತಿಳಿಸಿದರು. ಇದನ್ನೂ ಓದಿ: ಭರಚುಕ್ಕಿಯಲ್ಲಿ ಪ್ರವಾಸಿಗರ ಹುಚ್ಚಾಟ – ಸಾವಿನ ದವಡೆಯಲ್ಲಿ ಮೋಜು-ಮಸ್ತಿ
Advertisement
Advertisement
ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಬಿಜೆಪಿಯವರು ಅವರ ಕಾಲಿನ ಮೇಲೆ ಅವರೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. 40% ಕಮಿಷನ್ ಅಂದ್ರೇ ಸಾಕು ಸಿಟ್ಟಾಗುವ ಬಿಜೆಪಿಯವರು, ಕೋಟಿಗಟ್ಟಲೆ ಅನುದಾನ ದಾವಣಗೆರೆಗೆ ತಂದಿದ್ದು ನಾನು. ಅದ್ರೇ ಅದನ್ನು ಈ ಬಿಜೆಪಿಯವರು ಮಜಾ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
Advertisement
ಬಿಜೆಪಿ ಅವಧಿಯಲ್ಲಿ ಕಳಪೆ ಕಾಮಗಾರಿಗಳಾಗಿವೆ. ಕೆಲ ಕಾಮಗಾರಿಗಳ ಬಗ್ಗೆ ಇವರಿಗೆ ಆಸಕ್ತಿ ಇಲ್ಲ. ಯಾವುದೇ ಕೆಲಸ ಮಾಡಿದ್ರೇ ಆಸಕ್ತಿಯಿಂದ ಮಾಡ್ಬೇಕಾಗುತ್ತದೆ. ಗ್ಲಾಸ್ ಹೌಸ್‍ನ್ನು ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಗ್ಲಾಸ್ ಹೌಸ್ ಬಳಿ ಒಳ್ಳೆ-ಒಳ್ಳೆ ವಿದೇಶ ಗಿಡಗಳನ್ನು ತಂದು ಅಭಿವೃದ್ಧಿ ಮಾಡಿದ್ದೆವು. ಅದ್ರೇ ಇದೀಗ ಇವರು ಪೇರಲೆ ಗಿಡ, ಜಾಲಿ ಗಿಡಗಳನ್ನು ಹಾಕ್ತಿವಿ ಎಂದು ಹೇಳಿದ್ರೆ ನಾವ್ ಏನ್ ಮಾಡ್ಬೇಕು ಎಂದು ಟೀಕಿಸಿದರು. ಇದನ್ನೂ ಓದಿ: ಈ ಚುನಾವಣೆ ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ನಿರ್ಧರಿಸುತ್ತೆ: ಯಶವಂತ್ ಸಿನ್ಹಾ
ನಾವು ಒಂದು ಫೋನ್‍ನಲ್ಲಿ ಹೇಳಿದ್ರೇ ಕೆಲಸ ಆಗುತ್ತೆ. ಅದ್ರೇ ಬಿಜೆಪಿಯವರು ಎರಡು ಜೊತೆ ಕ್ಯಾರ ಹರಿದ್ರು ಕೆಲಸ ಆಗಲ್ಲ. 40% ಕಮಿಷನ್ ಕೊಟ್ರೇ ಅವರ ಕೆಲಸ ಆಗುತ್ತೇ ಎಂದು ವಾಗ್ದಾಳಿ ನಡೆಸಿದರು.