ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಅವರನ್ನು ಸಿಎಂ (CM) ಮಾಡುತ್ತೇವೆ ಅಂತ ಅವತ್ತು ಕುಮಾರಸ್ವಾಮಿ (HD Kumaraswamy) ಅವರು ಹೇಳಿದ್ದರೆ ನಾವು ಖಂಡಿತಾ ಬರುತ್ತಿದ್ದೆವು. ಆದರೆ ಕುಮಾರಸ್ವಾಮಿ ಅವರು ಫೋನ್‌ನಲ್ಲಿ ಮಾತನಾಡುವಾಗ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡುವ ವಿಚಾರ ಪ್ರಸ್ತಾಪ ಮಾಡಲೇ ಇಲ್ಲ. ಹಾಗಾಗಿ ನಾವು ಬರಲಿಲ್ಲ ಎಂದು ಶಾಸಕ ಎಸ್‌ಟಿ ಸೋಮಶೇಖರ್ (ST Somashekar) ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈನಲ್ಲಿ ಇದ್ದಾಗ ನಮಗೆ ಕರೆ ಬಂದಿದ್ದು ಹೌದು. ಮುಖ್ಯಮಂತ್ರಿ ಕುಮಾರಸ್ವಾಮಿ ಕಚೇರಿಯಿಂದ ಕರೆ ಬಂತು. ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡುತ್ತೇವೆ ಬನ್ನಿ. ಕುಮಾರಸ್ವಾಮಿ ಅವರು ನಿಮ್ಮ ಹತ್ತಿರ ಮಾತನಾಡುತ್ತಾರೆ ಅಂತ ಕರೆ ಬಂದಿತ್ತು. ಒಕ್ಕಲಿಗರ ಸರ್ಕಾರ ತಗೆದು ಲಿಂಗಾಯತರ ಸರ್ಕಾರ ತರುತ್ತೀರಾ ಎಂದು ಮಾತನಾಡಿದ್ದರು ಎಂದರು. ಇದನ್ನೂ ಓದಿ: ಮಾಜಿ ಎಂಎಲ್‌ಎ ರಾಜಕೀಯವಾಗಿ ಭಾಗಿಯಾಗೋದು ಅಪರಾಧವಲ್ಲ: ಯತೀಂದ್ರ ಪರ ಚಲುವರಾಯಸ್ವಾಮಿ ಬ್ಯಾಟಿಂಗ್
Advertisement
Advertisement
ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಯಾರೂ ನಮ್ಮನ್ನು ಕಳುಹಿಸಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಬೇಜಾರಾಗಿ ನಾವಾಗಿಯೇ ಹೋಗಿದ್ದು. ರಮೇಶ್ ಜಾರಕಿಹೋಳಿ ಅವನು ಯಾವ ಕ್ಯಾಪ್ಟನ್? ಅವನ ನಾಯಕತ್ವದಲ್ಲಿ ನಾವು ಹೋಗಿದ್ದಲ್ಲ. ಅವನು ಕರೆದುಕೊಂಡು ಬಂದಿದ್ದು ಕುಮಟಳ್ಳಿ ಒಬ್ಬನನ್ನೇ. ನಾವುಗಳು ಹೋಗಿದ್ದು ಬೇರೆ ಎಂದು ತಿಳಿಸಿದರು. ಇದನ್ನೂ ಓದಿ: ಅಪ್ಪ-ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ: ಹೆಚ್‌ಡಿಕೆ
Advertisement