ಕಲಬುರಗಿ: ಜೆಡಿಎಸ್ (JDS) ಅಧಿಕಾರಕ್ಕೆ ಬಂದ್ರೆ ಈ ಬಾರಿಯೂ ಸಾವಿರಾರು ರೈತರ (Farmers) ಸಾಲ ಮನ್ನಾ ಮಾಡುವುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಭರವಸೆ ನೀಡಿದ್ದಾರೆ.
ಕಲಬುರ್ಗಿ ಜಿಲ್ಲೆಯ ಆಳಂದ ಕ್ಷೇತ್ರದ ಖಜೂರಿಯಲ್ಲಿ ಪಂಚರತ್ನ ರಥಯಾತ್ರೆಯನ್ನು ಮಹಾಜನತೆ ಅದ್ದೂರಿಯಾಗಿ ಬರಮಾಡಿಕೊಂಡರು. ಈ ಭಾಗದ ಮಣ್ಣಿನಮಕ್ಕಳು ತೊಗರಿ ಹಾರ ಹಾಕುವ ಮೂಲಕ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದರು.
ಕ್ಷೇತ್ರದ @JanataDal_S ಅಭ್ಯರ್ಥಿ ಶ್ರೀಮತಿ ಮಹೇಶ್ವರಿ ವಾಲಿ ಸೇರಿದಂತೆ ಅನೇಕರು ಹಾಜರಿದ್ದರು.#ಪಂಚರತ್ನ_ರಥಯಾತ್ರೆ pic.twitter.com/wSHxopsPH2
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 9, 2023
Advertisement
ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಪಂಚರತ್ನ ಯಾತ್ರೆಗೆ (Pancharatna Yatra) ಚಾಲನೆ ನೀಡಿ, ಮಾತನಾಡಿದ ಅವರು, ಕೆಲವರ ಕಪಿಮುಷ್ಠಿಯಲ್ಲಿ ಖಜೂರಿ ರಾಜಕಾರಣ ಇದೆ. ಅದರಿಂದ ಖಜೂರಿ ಗ್ರಾಮವನ್ನು ಮುಕ್ತಗೊಳಿಸಬೇಕಿದೆ. ಆಳಂದ ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ಮುಂದೆ ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಶರಣಾಗಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಟ ಸಲ್ಮಾನ್ ಖಾನ್ ಸ್ಯಾಡಿಸ್ಟ್ : ಮಾಜಿ ಗೆಳತಿ ಬಿಚ್ಚಿಟ್ಟ ರಹಸ್ಯ
Advertisement
Advertisement
ರಾಜ್ಯದ ರೈತರನ್ನು ಕಷ್ಟಕ್ಕೆ ದೂಡಲು ನಮ್ಮ ಪಕ್ಷ ಬಿಡುವುದಿಲ್ಲ. ಇಡೀ ರಾಜ್ಯ ಹಾಗೂ ರೈತರ ದಿಕ್ಕನ್ನು ಬದಲಿಸಲು ಪಂಚರತ್ನ ಯೋಜನೆಗಳನ್ನ ಜಾರಿ ಮಾಡಲಾಗಿದೆ. ನನ್ನ ಮುಖ್ಯಮಂತ್ರಿ ಅವಧಿಯಲ್ಲಿ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಆದ್ರೆ ಬಿಜೆಪಿ (BJP) ಸರ್ಕಾರ ಸುಮಾರು 7 ಸಾವಿರ ಕೋಟಿ ಹಣವನ್ನ ಡೈವರ್ಟ್ ಮಾಡಿದೆ ಎಂದು ಆರೋಪಿಸಿದ್ದಾರೆ.
Advertisement
ಇದೇ ವೇಳೆ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಇನ್ನೂ ಸಾವಿರಾರು ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ತುನಿಷಾ ಆತ್ಮಹತ್ಯೆ : ಬಾಯ್ ಫ್ರೆಂಡ್ ಶಿಜಾನ್ ಡ್ರಗ್ಸ್ ವ್ಯಸನಿ ಆಗಿದ್ದ ಎಂದು ಆರೋಪ
ಪಂಚರತ್ನ ಯಾತ್ರೆ ವೇಳೆ ಆಳಂದ ಕ್ಷೇತ್ರದ ಆಕಾಂಕ್ಷಿ ಮಹೇಶ್ವರಿ ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k