ಮಡಿಕೇರಿ: ಜನಾರ್ದನ ರೆಡ್ಡಿ ಬಿಜೆಪಿ ಲೀಡರ್ ಅಲ್ಲ. ಒಂದು ವೇಳೆ ಅವರು ವೇದಿಕೆ ಏರಿದರೆ ನನಗೆ ವಾಟ್ಸಪ್ ಮಾಡಿ ಎಂದು ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನಾರ್ದನರೆಡ್ಡಿ ಬಿಜೆಪಿಯ ತಾರಾ ಪ್ರಚಾರಕರಲ್ಲ. ರೆಡ್ಡಿ ಕೋರ್ಟ್ ನಿಂದ ನಿರಾಪರಾಧಿ ಆಗೋವರೆಗೂ ಬಿಜೆಪಿಗೆ ಎಂಟ್ರಿಯಿಲ್ಲ. ಜನಾರ್ದನ ರೆಡ್ಡಿ ಬಿಜೆಪಿ ಪರ ಪ್ರಚಾರಕ್ಕೂ, ನಮಗೂ ಸಂಬಂಧವಿಲ್ಲ ಎಂದು ಅವರು ತಿಳಿಸಿದರು.
Advertisement
ಶಾಸಕ ಸೋಮಶೇಖರ್ ರೆಡ್ಡಿ 20 ವರ್ಷಗಳಿಂದ ಪಕ್ಷದಲ್ಲಿದ್ದಾರೆ, ಶ್ರೀರಾಮುಲು, ಸೋಮಶೇಖರ್ ರೆಡ್ಡಿಯವರನ್ನ ಸಿದ್ದರಾಮಯ್ಯ ಅವಮಾನಿಸೋದು ಯಾಕೆ? ಜನಾರ್ದನ ರೆಡ್ಡಿಯಿಂದಾಗಿಯೇ ಇವರು ಯಾರು ನಾಯಕರಾದವರಲ್ಲ, ಬಿಜೆಪಿಯ ಯಾವುದೇ ವೇದಿಕೆಯನ್ನ ಜನಾರ್ದನ ರೆಡ್ಡಿ ಏರಲ್ಲ, ಒಂದು ವೇಳೆ ಅವರು ವೇದಿಕೆ ಏರಿದರೆ ನನಗೆ ವಾಟ್ಸಪ್ ಮಾಡಿ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುರುಳೀಧರ್ ರಾವ್ ಹೇಳಿದರು.
Advertisement
ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದರು. ಟಿಪ್ಪು ಯಾರು ಎನ್ನುವುದು ಕೊಡಗಿನವರಿಗೆ ಗೊತ್ತಿದೆ. ಅದರೂ ಟಿಪ್ಪು ಜಯಂತಿ ತಂದು ಅನೇಕ ಘಟನೆಗಳಿಗೆ ಕಾರಣವಾಗಿದ್ದಾರೆ ಎಂದು ದೂರಿದರು.
Advertisement
ಮೋದಿ, ಅಮಿತ್ ಶಾ ಹೊರಗಿನನವರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಹಾಗಾದರೆ ರಾಹುಲ್ ಗಾಂಧಿ ಎಲ್ಲಿಂದ ಬಂದಿದ್ದಾರೆ? ದೇವಾಲಯ, ಮಠಗಳ ಸಂರಕ್ಷಣೆ, ಮಲೆನಾಡು-ಕರಾವಳಿ ಭಾಗದ ರಕ್ಷಣೆ ನಮ್ಮ ಪ್ರಮುಖ ಅಜೆಂಡಾ. ಎರಡು ದಿನಗಳಲ್ಲಿ ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಈ ಬಾರಿ ನಾವು 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.