ನವದೆಹಲಿ: ಭಾರತವು ಪಿತ್ರಾರ್ಜಿತ ಆಸ್ತಿ ತೆರಿಗೆ (Inheritance Tax) ವಿಧಿಸಿದರೆ, ಅಂಬಾನಿ ಮತ್ತು ಅದಾನಿಯಂಥ ಶ್ರೀಮಂತರು ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ದುಬೈನಂತರ ದೇಶಗಳಿಗೆ ವಲಸೆ ಹೋಗುತ್ತಾರೆ ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಮತ್ತು ಲೇಖಕ ಗೌತಮ್ ಸೇನ್ (Gautam Sen) ಹೇಳಿದ್ದಾರೆ.
ಭಾರತದಲ್ಲಿ ಪಿತ್ರಾರ್ಜಿತ ಆಸ್ತಿಗೆ ತೆರಿಗೆ ವಿಧಿಸುವ ಕಾಂಗ್ರೆಸ್‌ನ ಪ್ರಸ್ತಾವನೆಯು ದೇಶದ ಅತಿ ಶ್ರೀಮಂತರು, ಅಂಬಾನಿ ಮತ್ತು ಅದಾನಿಯಂಥವರು ತೆರಿಗೆ ಪಾವತಿಸುವುದನ್ನು ತಪ್ಪಿಸಲು ದುಬೈನಂತಹ ದೇಶಗಳಿಗೆ ತಮ್ಮ ನೆಲೆಗಳನ್ನು ಸ್ಥಳಾಂತರಿಸಲು ಕಾರಣವಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಪೂರ್ವ ಭಾರತದ ಜನರು ಚೀನಿಯರಂತೆ, ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ: ಸ್ಯಾಮ್ ಪಿತ್ರೋಡಾ
Advertisement
Advertisement
ಅಂಬಾನಿ, ಅದಾನಿ ಮತ್ತು ಟಾಟಾದಂತಹ ಭಾರತದ ಶ್ರೀಮಂತ ವ್ಯಕ್ತಿಗಳು ತೆರಿಗೆ ವಿಧಿಸದ ಸ್ವರ್ಗಗಳಿಗೆ ವಲಸೆ ಹೋಗುತ್ತಾರೆ. ಇದರಿಂದಾಗಿ ಭಾರತಕ್ಕೆ ಗಣನೀಯ ಪ್ರಮಾಣದ ಸಂಪತ್ತು ನಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
Advertisement
ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿಯಾದರೆ ಭಾರತೀಯ ಆರ್ಥಿಕತೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ದೇಶವನ್ನು ತೊರೆಯುತ್ತಿರುವ ಹೆಚ್ಚಿನ ಭಾರತೀಯ ಮಿಲಿಯನೇರ್‌ಗಳು ದುಬೈಗೆ ಹೋಗಿದ್ದಾರೆ. ಏಕೆಂದರೆ ದುಬೈಗೆ ಆದಾಯ ತೆರಿಗೆ ಇಲ್ಲ. ಅವರು ಯುಎಇಯಲ್ಲಿ ತಮ್ಮ ವ್ಯವಹಾರಗಳನ್ನು ಮರು-ನೋಂದಣಿ ಮಾಡಿಕೊಳ್ಳುತ್ತಾರೆ. ಇದರರ್ಥ ಭಾರತವು ಅವರಿಂದ ಕಾರ್ಪೊರೇಟ್ ತೆರಿಗೆಗಳನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಅನಾರೋಗ್ಯ ಕಾರಣ ನೀಡಿ ಸಿಬ್ಬಂದಿ ಸಾಮೂಹಿಕ ರಜೆ – ಏರ್ ಇಂಡಿಯಾದ 86 ವಿಮಾನ ಹಾರಾಟ ರದ್ದು
Advertisement
ಇದರಿಂದ ಭಾರತಕ್ಕೆ ಅಪಾರ ಪ್ರಮಾಣದ ಸಂಪತ್ತು ನಷ್ಟವಾಗಲಿದೆ. ಈಗ ಬೇರೆ ದೇಶಗಳ ಬಗ್ಗೆ ಯೋಚಿಸಿದರೆ ಸ್ವೀಡನ್‌ಗೆ ಬಹಳ ಮಹತ್ವದ ಪಿತ್ರಾರ್ಜಿತ ತೆರಿಗೆ ಇತ್ತು. ಸ್ವೀಡನ್ ಇತಿಹಾಸದಲ್ಲಿ ವಿಶ್ವದ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಒಂದಾಗಿದೆ. ಆದರೆ ಸ್ವೀಡನ್ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ತೆಗೆದುಹಾಕಿತು. ಏಕೆಂದರೆ ಅನೇಕ ಶ್ರೀಮಂತರು ಪಲಾಯನ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.