ರಾಮನಗರ: ಡಿಕೆ ಶಿವಕುಮಾರ್ (DK Shivakumar) ರೀತಿ ನಾನು ಲೂಟಿ ಮಾಡಿದ್ದರೆ ಪ್ರತಿ ತಾಲೂಕಿಗೆ 10 ಎಕರೆ ಜಾಗ ಕೊಡುತ್ತಿದ್ದೆ ಎಂದು ಡಿಸಿಎಂ ಡಿಕೆಶಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿರುಗೇಟು ಕೊಟ್ಟಿದ್ದಾರೆ.
ಚನ್ನಪಟ್ಟಣದ (Channapatna) ಸಿದ್ದಾಪುರ ಗ್ರಾಮದಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನ್ನ ತಾಲೂಕಿನಲ್ಲಿ ಶಾಲೆಗಳಿಗೆ 25 ಎಕರೆ ಭೂಮಿ ನೀಡಿದ್ದೇನೆ ಕುಮಾರಸ್ವಾಮಿ ಎಷ್ಟು ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದ ಡಿಕೆಶಿಗೆ ಪ್ರತಿಕ್ರಿಯಿಸಿ, ನಾನು ನಿಮ್ಮ ರೀತಿ ಲೂಟಿ ಮಾಡಿಲ್ಲವಲ್ಲ. ಸರ್ಕಾರಿ ಶಾಲಾ ಕಟ್ಟಡದಲ್ಲಿ ಶಿಕ್ಷಕರಿಗೆ ಹಂಚಿಕೆಯಾದ ಆದ ರೂಮ್‌ನ್ನು ಶಿಕ್ಷಕರಿಗೆ ಕೊಡದೇ ಆಟ ಆಡಿಸಿದ್ದೀರಿ. ನಿಮ್ಮ ಚೇಲಾಗಳು ಅಲ್ಲಿ ಸೇರಿಕೊಂಡು ಯಾವ ರೀತಿ ಗೂಂಡಾಗಿರಿ ಮಾಡಿದ್ದರು ಎಂದು ಗೊತ್ತಿದೆ. ನಿಮ್ಮ ಹಾಗೆ ಲೂಟಿ ಮಾಡಿದ್ದರೆ ಕೇವಲ ಒಂದು ತಾಲೂಕಿಗೆ ಮಾತ್ರವಲ್ಲ, ರಾಜ್ಯದ ಪ್ರತಿ ತಾಲೂಕಿಗೆ 10 ಎಕರೆ ಜಾಗ ಕೊಡುತ್ತಿದ್ದೆ. ನೀವು ನನ್ನನ್ನು ಏನು ಪ್ರಶ್ನಿಸುತ್ತೀರಾ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: Waqf Amendment Bill | ವಿಪಕ್ಷ ನಾಯಕರಿಂದ ಜೆಪಿಸಿ ರಾಜ್ಯ ಪ್ರವಾಸ ಬಹಿಷ್ಕಾರ
Advertisement
Advertisement
ಇವರೆಲ್ಲಾ ಯಾರಿಗೂ ಜಾಗ ಕೊಟ್ಟಿಲ್ಲ. ಬೇರೆ ಜಾಗವನ್ನು ಇವರು ಲೂಟಿ ಮಾಡುವುದೇ ಇವರ ಸರ್ಕಾರವಾಗಿದೆ. ಇವರು ಇಡೀ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಕಾರ್ಖಾನೆ ಹಾಕಲು ಬಂದವರಿಗೆ ನಮಗೆ ಪಾಲು ಎಷ್ಟು ಕೊಡುತ್ತೀರಿ ಎಂದು ಕೇಳುತ್ತಾರೆ. ಇಲ್ಲಿ ಕಾರ್ಖಾನೆಗಳ ನಿರ್ಮಾಣ ಮಾಡಲು ಯಾರು ಬರುತ್ತಾರೆ. ಬಂದವರು ಇಲ್ಲಿಂದ ಮಹರಾಷ್ಟçಕ್ಕೆ ಹೋಗಿದ್ದಾರೆ ಎಂದರು.
Advertisement
ನನ್ನ ವಿರುದ್ದ ಪ್ರಚಾರ ಮಾಡಲು 15 ದಿನ ಮಂತ್ರಿಗಳು, 40 ಶಾಸಕರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಸಿಎಂ-ಡಿಸಿಎಂ ಸಹ ಇಲ್ಲಿಯೇ ಬಿಡಾರ ಹೂಡಿ ಅವರದ್ದೇ ತಂತ್ರಗಳನ್ನ ರೂಪಿಸುತ್ತಿದ್ದಾರೆ. ಅಭಿವೃದ್ದಿ ಬಗ್ಗೆ ದಿನಾಲು ಚರ್ಚೆ ಮಾಡುತ್ತಿದ್ದಾರೆ. ದೇವೇಗೌಡರು ನೀರಾವರಿ ಯೋಜನೆಗೆ ಹೋರಾಟ ಮಾಡಿದ್ದಾರೆ. ಇನ್ನೂ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸಮನ್ವಯತೆ ಸಾಧಿಸಿಲ್ಲ. ಕೇಂದ್ರದೊಂದಿಗೆ ಕಾಲು ಕರೆದು ಜಗಳ ಮಾಡುತ್ತಿದ್ದಾರೆ. ಸೌಜನ್ಯಕ್ಕೂ ಕೇಂದ್ರ ಸರ್ಕಾರದೊಂದಿಗೆ ನಡೆದುಕೊಳ್ಳುವುದು ಗೊತ್ತಿಲ್ಲ ಕಿಡಿಕಾರಿದರು.
Advertisement
ಮೇಕೆದಾಟು ನಿರ್ಮಾಣ ಕುರಿತು ಹೆಚ್‌ಡಿಡಿ ಹೇಳಿಕೆ ವಿಚಾರವಾಗಿ ಮಾತನಾಡಿ, ಕೇಂದ್ರದಲ್ಲಿ ಮೂರನೇ ಬಾರಿ ಮೋದಿಯವರು ಪ್ರಧಾನಿಯಾಗಿ ನಾಲ್ಕು ತಿಂಗಳು ಕಳೆದಿದೆ. ನಮಗೂ ಜವಾಬ್ದಾರಿ ಇದೆ. ದೇವೇಗೌಡರ (HD Devegowda) ಹೋರಾಟ ನಿರಂತರವಾಗಿದೆ. ಅವರ ಜೀವನ ಕಳೆದಿರುವುದು ರಾಜ್ಯದ ನೀರಾವರಿ ಯೋಜನೆಗಳಿಗೆ ಅಷ್ಟೇ ಅಲ್ಲ. ಪ್ರಧಾನಿಯಾಗಿ ನರ್ಮದಾ ನದಿ ನೀರು ಹಂಚಿಕೆಗಾಗಿ, ಅಲ್ಲಿಂದ ಬಾಂಗ್ಲಾದೇಶ, ಪಶ್ಚಿಮ ಬಂಗಾಳದ ನದಿ ನೀರು ಹಂಚಿಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಅದರಿಂದ ರಾಜ್ಯದ ಹಲವಾರು ನೀರಾವರಿ ಸಮಸ್ಯೆಗಳಿಗೆ ಈ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜೊತೆ ಸೌಹಾರ್ದಯುತ ಸಂಬಂಧ ಇಲ್ಲ. ಪ್ರತಿನಿತ್ಯ ಕೇಂದ್ರ ಸರ್ಕಾರ ಜೊತೆ ಕಾಲು ಕೆರೆದು ಜಗಳ ಮಾಡುತ್ತಾರೆ. ಅವರ ನಡುವಳಿಕೆಗಳನ್ನ ನೋಡುತ್ತಿದ್ದಿರಲ್ಲ. ಇವರು ಎಲ್ಲಿಂದ ರಾಜ್ಯ ಅಭಿವೃದ್ಧಿ ಮಾಡುತ್ತಾರೆ. ಅಂತಿಮವಾಗಿ ಬಿಜೆಪಿ, ಜೆಡಿಎಸ್ ನಾಯಕರೇ ಇದಕ್ಕೆ ಪರಿಹಾರ ತರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ:ಹ್ಯಾಪಿ ಬರ್ತ್‌ಡೇ ಗೊಲ್ಲು: ಸಹೋದರನಿಗೆ ರಾಧಿಕಾ ಪಂಡಿತ್ ಲವ್ಲಿ ವಿಶ್