ಮಂಡ್ಯ: ನಾನು ತಪ್ಪು ಅಥವಾ ಮೋಸ ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ. ಇಲ್ಲ ಅಂದ್ರೆ ತನ್ನ ವಿರುದ್ಧ ಅಪಪ್ರಚಾರ ಮಾಡಿದವರ ವಂಶ ನಿರ್ನಾಮವಾಗಲಿ ಎಂದು ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ಕ್ಷೇತ್ರದ ಬಿಜೆಪಿ (BJP) ಪರಾಜಿತ ಅಭ್ಯರ್ಥಿ ಮುನಿರಾಜು (Muniraju) ದೇವಸ್ಥಾನದ ಎದುರು ಕರ್ಪೂರ ಹಚ್ಚಿ ತೆಂಗಿನಕಾಯಿ ಒಡೆದಿದ್ದಾರೆ.
ಮಳವಳ್ಳಿಯ ಬಿಜೆಪಿ ಅಭ್ಯರ್ಥಿಯಾಗಿದ್ದ ಮುನಿರಾಜು ಮತದಾನಕ್ಕೆ 3 ದಿನ ಇರುವಾಗ ಕೊನೆ ಕ್ಷಣದಲ್ಲಿ ಕ್ಷೇತ್ರದ ಜನರ ಕೈಗೆ ಸಿಗಲಿಲ್ಲ ಎಂದು ಕೆಲವರು ಸುದ್ದಿ ಹರಡಿಸಿದ್ದರು. ಅಲ್ಲದೇ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಮುನಿರಾಜು ಮೇಲೆ ಆರೋಪಗಳು ಕೇಳಿಬಂದಿತ್ತು. ಹೀಗಾಗಿ ಮುನಿರಾಜು ಕೇವಲ 24 ಸಾವಿರ ಮತಗಳಷ್ಟೇ ಗಳಿಸಲು ಶಕ್ತರಾದರು ಎನ್ನಲಾಗಿದೆ.
Advertisement
Advertisement
ಇದೀಗ ಅಪಪ್ರಚಾರದ ವಿರುದ್ಧ ಸಿಡಿದೆದ್ದಿರುವ ಮುನಿರಾಜು ದೇವರ ಮೊರೆ ಹೋಗಿದ್ದು, ಮಳವಳ್ಳಿಯ ಮಾರೇಹಳ್ಳಿ ಲಕ್ಷ್ಮಿ ನರಸಿಂಹಸ್ವಾಮಿ ಮುಂದೆ ಅಪಪ್ರಚಾರ ಗೈದವರಿಗೆ ಶಿಕ್ಷೆ ನೀಡುವಂತೆ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ತೆಂಗಿನ ಕಾಯಿಯ ಮೇಲೆ ಕರ್ಪೂರ ಹಚ್ಚಿ, ಈಡುಗಾಯಿ ಹೊಡೆದು ದೇವರೇ ಶಿಕ್ಷೆ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯ ಪಾತ್ರ ನಿರಾಕರಿಸಲು ಸಾಧ್ಯವೇ: ಸುಧಾಕರ್ ಬಾಂಬ್
Advertisement
Advertisement
ನಾನು ಯಾವುದೇ ತಪ್ಪು, ಮೋಸ ಮಾಡಿಲ್ಲ. ಹಾಗೇನಾದ್ರು ತಪ್ಪು ಮಾಡಿದ್ದರೆ ನನ್ನ ವಂಶ ನಿರ್ವಂಶವಾಗಲಿ. ಇಲ್ಲ ನನ್ನ ವಿರುದ್ಧ ಅಪಪ್ರಚಾರ ಮಾಡಿದವರಿಗೆ ದೇವರೇ ಶಿಕ್ಷೆ ಕೊಡಲಿ ಎಂದು ಕಾಯಿ ಒಡೆದಿದ್ದಾರೆ. ಇದನ್ನೂ ಓದಿ: ಸಿಎಂ ರೇಸ್ ಫೈಟ್ – ಹೈಕಮಾಂಡ್ ನಾಯಕರಲ್ಲಿ ಯಾರು ಯಾರ ಪರ?