ಹಾವೇರಿ: ನಾನು ಎಲ್ಲರೊಂದಿಗೆ ಅಡ್ಜಸ್ಟ್ ಆಗಿದ್ದರೆ. ನೀವ್ಯಾರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನಾನೇ ಮುಖ್ಯಮಂತ್ರಿಯಾಗಿರುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಜೀವನದಲ್ಲಿ ಮಂತ್ರಿಯಾಗುವ ಸಲುವಾಗಿ ಬ್ಲಾಕ್ ಮೇಲ್ ಮಾಡಿಲ್ಲ. ನಾನು ಎಲ್ಲರೊಂದಿಗೆ ಅಡ್ಜಸ್ಟ್ ಆಗಿದ್ದರೆ, ನೀವ್ಯಾರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನಾನೇ ಮುಖ್ಯಮಂತ್ರಿ ಆಗಿರುತ್ತಿದ್ದೆ. ಸೋಮವಾರ ಬೊಮ್ಮಾಯಿಯವರು ನಮ್ಮ ಸಮಾಜದ ಸಚಿವ ಸಿ.ಸಿ.ಪಾಟೀಲರನ್ನು ಕರೆದು ಮತ್ತೊಂದು ಅವಕಾಶ ಕೇಳಿದ್ದಾರೆ ಎಂದು ತಿಳಿದ್ದಾರೆ. ಇದನ್ನೂ ಓದಿ: 10 ಭಾಷೆಗಳಲ್ಲಿ ‘ಟಾಪಿಕ್ಸ್’ ವೈಶಿಷ್ಟ್ಯವನ್ನು ಪರಿಚಯಿಸಿದ ಮೊದಲ ಸಾಮಾಜಿಕ ಮಾಧ್ಯಮ ವೇದಿಕೆ ಕೂ
ಧ್ವನಿಯಿಲ್ಲದ ಸಮಾಜಗಳಿಗೆ ನಮ್ಮ ಸ್ವಾಮೀಜಿ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಹೋರಾಟ ಕುರಿತು ಇಂದು ನಿರ್ಣಯ ಮಾಡುತ್ತೇವೆ. ಮುಂದಿನ ಎರಡು ತಿಂಗಳಲ್ಲಿ ಇಪ್ಪತ್ತೈದು ಲಕ್ಷ ಜನರನ್ನು ಸೇರಿಸಿ ನಿರ್ಣಯ ಮಾಡುತ್ತೇವೆ. ಯಾ ಮಗಗ ಬೇಕೈತ್ರಿ ಮಂತ್ರಿಗಿರಿ. ಆರು ತಿಂಗಳಲ್ಲಿ ಏನು ಕಿಸಿದು ಐತ್ರಿ. ನಮ್ಮ ಬಗ್ಗೆ, ಗುರುಗಳ ಬಗ್ಗೆ ಯಾರೂ ಸಂಶಯ ಪಡಬ್ಯಾಡ್ರಿ. ಹಿಂದೊಬ್ಬ ಮುಖ್ಯಮಂತ್ರಿ ನಮಗೆ ಮೋಸ ಮಾಡಿದ ಅಂತಾ ಪರೋಕ್ಷವಾಗಿ ಬಿಎಸ್‍ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರ್ಯಾರು ಮಂತ್ರಿ ಆಗಬೇಕು, ಮಜಾ ಮಾಡಬೇಕು ಅಂತೀರಾ ಇಪ್ಪತ್ತೈದು ಲಕ್ಷ ಜನರು ಸೇರಿದಾಗ ಬನ್ನಿ. ಸಮಾಜಕ್ಕೆ ಮೀಸಲಾತಿ ಕೊಡಿಸಲು ಆಗದಿದ್ದರೆ ನೀವು ಶಾಶ್ವತವಾಗಿ ಮಾಜಿ ಮಂತ್ರಿಗಳು, ಶಾಸಕರಾಗುತ್ತೀರಾ. ಇತ್ತೀಚೆಗೆ ಸಿದ್ದರಾಮಯ್ಯನವರು ಶಕ್ತಿ ಪ್ರದರ್ಶನ ಮಾಡಿದ ಮೇಲೆ ಜಾದೂನೆ ಆಗಿದೆ. ನಾವೂ ಇಪ್ಪತ್ತೈದು ಲಕ್ಷ ಜನರನ್ನು ಸೇರಿಸಿ ಜಾದೂ ಮಾಡೋಣ. ಒಂದು ಕೋಟಿ ಇರುವ ದೊಡ್ಡ ಸಮುದಾಯ ನಮ್ಮದು. ನಾನು ಮೊನ್ನೆ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಆಗಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಲ್ಕಿಸ್ ಬಾನು ಕೇಸ್ – ಅಪರಾಧಿಗಳ ಬಿಡುಗಡೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ
ನಮ್ಮ ಗುರುಗಳು ಬಿ.ಎಲ್.ಸಂತೋಷರನ್ನು ಭೇಟಿಯಾಗಿದ್ದಾರೆ. ಕೇಂದ್ರದವರು ಕೊಡುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ. ಬೊಮ್ಮಾಯಿ ಸಾಹೇಬರು ಯಾಕೆ ತಡ ಮಾಡುತ್ತಿದ್ದಾರೋ ಗೊತ್ತಿಲ್ಲ. ತಿರುಪತಿಯಲ್ಲಿ ಏನಾಗಿದೆಯೋ, ಶಿಮ್ಲಾ ಒಪ್ಪಂದ ಏನಾಗಿದೆಯೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಹೇಳುವೆ. ಪರೋಕ್ಷವಾ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.