ನವದೆಹಲಿ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಆರೋಪಗಳನ್ನು ಮಾಡುವುದು ಬಿಟ್ಟು ಲೋಕಾಯುಕ್ತಕ್ಕೆ ಯಾಕೆ ದೂರು ನೀಡುತ್ತಿಲ್ಲ. ಕಾನೂನತ್ಮಾಕ ಹೋರಾಟ ಮಾಡುತ್ತಿಲ್ಲ ಎಂದು ಸಚಿವ ಮುನಿರತ್ನ ಪ್ರಶ್ನಿಸಿದ್ದಾರೆ.
Advertisement
ತಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮನೆಗೆ ಹೋಗಿ ಒಂದೂವರೆ ಗಂಟೆಗಳ ಕಾಲ ಚರ್ಚೆ ಮಾಡಿ ಬಳಿಕ ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೆಲ್ಲ ಸಿದ್ದರಾಮಯ್ಯ ಮಾರ್ಗದರ್ಶನದಂತೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡರು ಮನೆಯಲ್ಲಿ ಡ್ರಾಫ್ಟ್ ರೆಡಿ ಮಾಡಿ, ಮೋದಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ: ರೇಣುಕಾಚಾರ್ಯ
Advertisement
Advertisement
ಯಾರಿಗಾದ್ರು ತೊಂದರೆಯಾದ್ರೆ ಕೋರ್ಟ್‍ಗೆ, ಲೋಕಾಯುಕ್ತಕ್ಕೆ ಹೋಗಿರೋದು ನೋಡಿದ್ದೆನೆ. ಆದರೆ ಇವರು ಸಿದ್ದರಾಮಯ್ಯ ಬಳಿ ಹೋಗಿದ್ದಾರೆ. ಯಾರಿಗೆ ಎಷ್ಟು ಅನ್ಯಾಯವಾಗಿದೆ, ಹೇಗೆ ಅನ್ಯಾಯವಾಗಿದೆ, ಯಾವ ಅಧಿಕಾರಿಗಳು ಕಮಿಷನ್ ಪಡೆದಿದ್ದಾರೆ. ದಾಖಲೆ ಸಹಿತ ಹೇಳಬೇಕು, 12 ತಿಂಗಳಿನಿಂದ ಸುಳ್ಳು ಆರೋಪ ಮಾಡೊದು, ಗಾಳಿಯಲ್ಲಿ ಗುಂಡು ಹೊಡೆಯೋದೆ ಆಗಿದೆ ಎಂದು ಮುನಿರತ್ನ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ಜೀವನದಲ್ಲಿ ನೋಡಿದ ಅತ್ಯಂತ ಭ್ರಷ್ಟ ಸರ್ಕಾರ ಇದು: ಕೆಂಪಣ್ಣ
Advertisement
ವಿರೋಧ ಪಕ್ಷದ ಕೈಗೊಂಬೆಯಾಗಿ ಗುತ್ತಿಗೆದಾರರ ಸಂಘ ಕೆಲಸ ಮಾಡುತ್ತಿದೆ. ನಿಜಕ್ಕೂ ಅವರಿಗೆ ಅನ್ಯಾಯವಾಗಿದ್ದರೆ ನಾನು ಅವರ ಜೊತೆ ಇರುತ್ತೇನೆ. ಸುಖಾಸುಮ್ಮನೆ ಹೇಳಿದ ಕೆಂಪಣ್ಣ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ, ನಾನು ನಮ್ಮ ವಕೀಲರ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವ ಯೋಚನೆ ಮಾಡಿದರೆ ಬಡವರ ಹಸಿವಿನ ಬೆಂಕಿಯಲ್ಲಿ ಬೆಂದು ಹೋಗುತ್ತೀರಿ: ಸಿದ್ದು ಕಿಡಿ
ಸಿದ್ದರಾಮಯ್ಯನವರೇ ಅಂಕಿ ಅಂಶ ಪಡೆದು ದಾಖಲೆ ಕಲೆಹಾಕಬೇಕಿತ್ತು. ನಾನು ವಿಧಾನಸೌಧದಲ್ಲಿ ಮಾತಾಡುತ್ತೇನೆ ಎಂದು ಹೇಳಬೇಕಿತ್ತು. ಸಿದ್ದರಾಮಯ್ಯನವರು ದಾಖಲೆ ಬಿಡುಗಡೆ ಮಾಡುತ್ತಿಲ್ಲ. ದಾಖಲೆ ಸಹಿತ ವಿಧಾನಸಭೆಯಲ್ಲಿ ಮಾತಮಾಡಬೇಕಿತ್ತು.? ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡಬೇಕು ಅಂದುಕೊಂಡಿದ್ದಾರೆ. ಹೀಗಾಗಿ ಉಸ್ತುವಾರಿ ಸಚಿವನಾಗಿರುವ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.