ದಾವಣಗೆರೆ: ಚುನಾವಣೆಗೆ ಸ್ಪರ್ಧಿಸಿ ಗೆದ್ದರೆ ಖಂಡಿತಾ ನಾನು ಸಿನಿಮಾ ಬಿಡ್ತೀನಿ. ಯಾಕಂದ್ರೆ ಅವತ್ತಿನಿಂದ ನಾನು ಪ್ರಜೆಗಳ ಕಾರ್ಮಿಕ ಎಂದು ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಿವೆ. ಅಲ್ಲದೇ ಈಗಾಗಲೇ ಕೆಲ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ. ಒಂದು ವೇಳೆ ಎಲೆಕ್ಷನ್ ಗೆ ನಿಂತು ಗೆದ್ದರೆ ನನಗೆ ಸಿನಿಮಾ ಮಾಡೋದಿಕೆ ಆಗಲ್ಲ. ನನ್ನ ಸಂಪಾದನೆ, ನನ್ನ ಕೆಲಸ ಎಲ್ಲವೂ ಇಲ್ಲಿರುತ್ತದೆ. ಹೀಗಾಗಿ ಆ ಸಂದರ್ಭದಲ್ಲಿ ಸಿನಿಮಾ ಕೈ ಬಿಡ್ತೀನಿ ಎಂದು ಹೇಳಿದ್ರು.
Advertisement
Advertisement
ಪ್ರಜಾಕೀಯದಿಂದ ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಅಂದುಕೊಂಡಿದ್ದೆವು. ಆದ್ರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಈಗ ನಮ್ಮದೇ ಆದ ಉತ್ತಮ ಪ್ರಜಾಕೀಯ ಪಕ್ಷದ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಗೆ 28 ಕ್ಷೇತ್ರಗಳಿಂದ ಸ್ಪರ್ಧಿಸಬೇಕು ಎಂದು ತುಂಬಾ ಮಂದಿ ಕೇಳಿದ್ದರು. ಹೀಗಾಗಿ ಆ ಕಾರ್ಯದಲ್ಲಿದ್ದೇವೆ ಎಂದು ಅವರು ತಿಳಿಸಿದ್ರು. ಇದನ್ನೂ ಓದಿ: ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್, ಪ್ರಮೋಷನ್ ಎಲ್ಲ ನಿಮ್ಮದೇ: ಉಪೇಂದ್ರ
Advertisement
ಈಗಿರುವ ರಾಜಕೀಯ ವ್ಯವಸ್ಥೆ ಸಂಪೂರ್ಣ ತೆಗೆದು ಹಾಕಿ ನಿಜವಾದ ಪ್ರಜಾಪ್ರಭುತ್ವ ಬರಬೇಕು ಎಂದು 5 ತತ್ವಗಳ ಮೇಲೆ ಈ ಪ್ರಜಾಕೀಯ ಪಕ್ಷವನ್ನು ಕಟ್ಟಿದ್ದೇವೆ. ಈ ಚುನಾವಣಾ ಪ್ರಕ್ರಿಯೆ ಹೇಗಿರಬೇಕೆಂದರೆ ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್ ಹಾಗೂ ಪ್ರಮೋಷನ್ ತತ್ವದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ನಾವು ಯಾವ ಪಕ್ಷದ ಓಟುಗಳನ್ನ ಕೀಳೋದಿಲ್ಲ. ಅಧಿಕಾರಕ್ಕೋಸ್ಕರ ನಾವು ಯಾರ ಜೊತೆನೂ ಸಪೋರ್ಟ್ ಮಾಡಲ್ಲ. ಹೊಸ ವಿಚಾರಕ್ಕೆ ನಮ್ಮ ದೇಶದ ಸಂವಿಧಾನ ಉತ್ತಮವಾಗಿದೆ ಎಂದರು.
Advertisement
ಹೀಗಾಗಿ ಪ್ರಣಾಳಿಕೆಯನ್ನು ಎರಡು ಭಾಗವಾಗಿ ಮಾಡಿಕೊಂಡಿದ್ದೇವೆ. ಸಾಮಾನ್ಯವಾಗಿ ಪ್ರಣಾಳಿಕೆಯನ್ನು ಸಾಕಷ್ಟು ಭರವಸೆ, ಆಶ್ವಾಸನೆಗಳನ್ನು ಕೊಡುತ್ತಾರೆ. ಅಲ್ಲದೇ ಏನೇನೋ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ವಾಸ್ತವವಾಗಿ ಜನರಿಗೆ ಏನು ಬೇಕು ಅನ್ನೋದು ಗೊತ್ತಿದೆ. ಹೀಗಾಗಿ ಒಂದು ಪ್ರಣಾಳಿಕೆಯನ್ನು ನೀವು ಇಟ್ಟುಕೊಳ್ಳಿ. ಇನ್ನು 2ನೇ ಪ್ರಣಾಳಿಕೆಯನ್ನು ನಮ್ಮ ಅಭ್ಯರ್ಥಿಗಳು ತೆಗೆದುಕೊಂಡು ಬರಬೇಕು. ಯಾಕಂದ್ರೆ ಪ್ರತಿಯೊಬ್ಬ ಅಭ್ಯರ್ಥಿಯೂ ಜನಗಳ ಧ್ವನಿಯಾಗಿರುತ್ತಾರೆ. ಒಟ್ಟಿನಲ್ಲಿ ಒಂದು ಅದ್ಭುತವಾದ ಆಡಳಿತಾತ್ಮಕ ರಚನೆಯನ್ನು ಒಳಗೊಂಡಿದೆ. ಅಲ್ಲಿ ತಜ್ಞರ ಸಮಿತಿ ಇರುತ್ತದೆ. ಹಾಗೆಯೇ ಐಎಎಸ್, ಕೆಎಎಸ್ ಓದಿರೋರು ಇರುತ್ತಾರೆ. ನಿಜವಾದ ಸಮಾಜ ಸೇವೆ ಅಂದರೆ ನನ್ನ ಪ್ರಕಾರ ಪಾಲಿಟಿಕ್ಸ್. ರಾಜಕೀಯ ಇರುವುದೇ ಸಮಾಜ ಸೇವೆಗೋಸ್ಕರವಾಗಿದ್ದು, ಪ್ರತಿಯೊಬ್ಬರು ಸಮಾಜ ಸೇವೆ ಮಾಡುತ್ತಾರೆ ಎಂದು ಅವರು ವಿವರಿಸಿದ್ರು. ಇದನ್ನೂ ಓದಿ: ನಮ್ಮ ಪಕ್ಷದಿಂದ ರಾಜ್ಯದ 28 ಕ್ಷೇತ್ರಗಳಿಂದ ಸ್ಪರ್ಧೆ: ಉಪೇಂದ್ರ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv