ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant), ತನ್ನ ಪತಿ ಆದಿಲ್ ಖಾನ್ (Adil Khan) ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಅವನು ಜೈಲಿಂದ (Jail) ಮಸೇಜ್ ಮಾಡಿರುವ ಕುರಿತು ಮಾತನಾಡಿದ್ದರು. ಇದೀಗ ಆತನನ್ನು ಕ್ಷಮಿಸಿದರೆ ಬಹುಶಃ ನನ್ನನ್ನು ಅವನು ಕೊಲ್ಲಬಹುದು ಎಂದು ಹೇಳಿಕೆ ನೀಡಿದ್ದಾರೆ. ಜೈಲಿನಿಂದ ಕಳುಹಿಸಿರುವ ಸಂದೇಶದಲ್ಲಿ ‘ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡಿದ್ದಾನೆ ಎಂದೂ ರಾಖಿ ತಿಳಿಸಿದ್ದಾರೆ.
ನಿನ್ನೆಯಷ್ಟೇ ಪತಿ ಆದಿಲ್ ಕುರಿತಾಗಿ ಮತ್ತಷ್ಟು ಆರೋಪಗಳನ್ನೂ ಮಾಡಿದ್ದು, ಮತ್ತೆಂದೂ ತಾವು ಮದುವೆ ಆಗುವುದಿಲ್ಲ ಎಂದು ಘೋಷಿಸಿದ್ದಾರೆ. ಆದಿಲ್ ಗೆ ಬುದ್ಧಿ ಕಲಿಸದೇ ತಾವು ಬಿಡುವುದಿಲ್ಲ ಎಂದಿದ್ದಾರೆ ರಾಖಿ. ಸದ್ಯ ಆದಿಲ್ ಮೈಸೂರು ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ರಾಖಿಗೆ ಸಂದೇಶವನ್ನೂ ಕಳುಹಿಸಿದ್ದಾನಂತೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ರಾಖಿ, ‘ನನ್ನಿಂದ ತಪ್ಪಾಗಿದೆ. ಮತ್ತೆ ನಾನು ನಿನ್ನೊಂದಿಗೆ ಬದುಕುವೆ. ನನ್ನ ಮೇಲಿನ ದೂರನ್ನು ವಾಪಸ್ಸು ತಗೆದುಕೊ. ಒಟ್ಟಿಗೆ ಖುಷಿಯಾಗಿ ಬದುಕೋಣ’ ಅಂತ ಆದಿಲ್ ಮಸೇಜ್ ಕಳುಹಿಸಿದ್ದಾನಂತೆ. ಆದರೆ, ಆದಿಲ್ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದಿದ್ದಾರೆ ರಾಖಿ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ʻಜೋಶ್ʼ ನಟಿ ಸ್ನೇಹಾ ಆಚಾರ್ಯ
- Advertisement
- Advertisement
‘ನಾನು ಆದಿಲ್ ಗೆ ಡಿವೋರ್ಸ್ ಕೊಡುವುದಿಲ್ಲ. ಅವನು ನನ್ನಂತೆ ಇನ್ನ್ಯಾರಿಗೂ ಮೋಸ ಮಾಡಬಾರದು. ನಾನೂ ಕೂಡ ಮದುವೆಯಾಗಲಾರೆ. ಮತ್ತೆ ಅವನು ನನ್ನೊಂದಿಗೆ ಬದುಕುತ್ತೇನೆ ಎನ್ನುತ್ತಾನೆ. ಬಹುಶಃ, ಅವನು ನನ್ನನ್ನು ಸಾಯಿಸೋದಕ್ಕೆ ಪ್ಲ್ಯಾನ್ ಮಾಡಿರಬಹುದು. ಹಾಗಾಗಿ ಅವನು ನನ್ನ ಜೊತೆ ಇರುತ್ತೇನೆ ಎಂದು ಹೇಳುತ್ತಿದ್ದಾನೆ. ಆದರೆ, ಅವನನ್ನು ನಾನು ನಂಬುವುದಿಲ್ಲ. ಮತ್ತೆ ಒಟ್ಟಿಗೆ ಬದುಕುವುದಿಲ್ಲ’ ಎನ್ನುತ್ತಾರೆ ರಾಖಿ.
ಆದಿಲ್ ಜೊತೆ ಬೇರೆ ಯಾರೂ ಮದುವೆ ಆಗಬಾರದು ಎನ್ನುವ ಕಾರಣಕ್ಕಾಗಿ ಡಿವೋರ್ಸ್ ನೀಡುವುದಿಲ್ಲ ಎಂದೂ ರಾಖಿ ಘೋಷಣೆ ಮಾಡಿದ್ದಾರೆ. ಡಿವೋರ್ಸ್ ನೀಡಿದರೆ ಅವನು ಮತ್ತೊಂದು ಮದುವೆ ಆಗುತ್ತಾನೆ. ಮತ್ತೆ ಅವನ ಬಾಳಲ್ಲಿ ಯಾವ ಹುಡುಗಿಯೂ ಬರುವುದು ಬೇಡ ಎನ್ನುವುದು ರಾಖಿ ಸಾವಂತ್ ಮಾತು.