ಮೈಸೂರು: ಹೈಕಮಾಂಡ್ ದಲಿತರನ್ನು ಸಿಎಂ ಮಾಡುತ್ತೇವೆ ಎನ್ನುವ ನಿರ್ಧಾರ ತೆಗೆದುಕೊಂಡ್ರೇ ತಗೊಳ್ಳಿ. ಇದ್ರಲ್ಲಿ ನನ್ನದೇನೂ ತಕರಾರು ಇಲ್ಲ. ಎಲ್ಲಾ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್‍ಗೆ ದಲಿತ ಸಿಎಂ ಕೂಗು ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಏನಾದ್ರೂ ದಲಿತ ಸಿಎಂ ಅಂತಾ ಕೇಳಿದ್ರೆ, ನಾನು ಬಿಟ್ಟು ಕೊಡಲು ಸಿದ್ಧ ಎಂದು ಉತ್ತರಿಸಿದ್ದಾರೆ.
Advertisement
ಕರ್ನಾಟಕದ ಈ ಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಲೋಕಸಭೆಗೂ ಮುನ್ನ ಎರಡು ರಾಜ್ಯದ ಚುನಾವಣೆ ಬರುತ್ತೆ. ಅಲ್ಲಿಯೂ ನಾವೇ ಗೆಲ್ಲುತ್ತೇವೆ. ಅದರ ಜೊತೆ ಲೋಕಸಭೆಯಲ್ಲಿಯೂ ನಾವೇ ಗೆಲ್ಲುತ್ತೇವೆ ಅಂತ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ರು.
Advertisement
Advertisement
ನಾನೂ ಬದುಕಿರುವವರೆಗೆ ಜಾತಿವಾದಿಗಳು, ಮತೀಯವಾದಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೇನೆ. ಚುನಾವಣಾ ರಾಜಕೀಯ ನನಗೆ ಸಾಕಾಗಿದೆ. ಆದ್ರೆ ಸಕ್ರೀಯ ರಾಜಕಾರಣದಲ್ಲಿ ಇರುತ್ತೇನೆ. ನನ್ನ ಜೊತೆಗಿರುವವರಿಗೆ ಬೆಂಬಲವಾಗಿ ಇರುತ್ತೇನೆ ಅಂದ್ರು.
Advertisement
ಇದೇ ವೇಳೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ಸ್ವಲ್ಪ ಮಟ್ಟಿನ ಸತ್ಯ. ಅದು ಪೂರ್ಣ ಪ್ರಮಾಣದ ಸತ್ಯ ಅಲ್ಲ ಅಂತ ಮತದಾನೋತ್ತರ ಸಮೀಕ್ಷೆ ಕುರಿತು ಸಿಎಂ ಅಚ್ಚರಿ ಹೇಳಿಕೆ ನೀಡಿದ್ದಾರೆ.
Dear People of Karnataka,
Thank you for exercising your franchise today.
I thank all the officers & staff connected with conducting the Election for their hard work & sincerity.
And finally, to all the workers of the Congress party – I am indebted to you for all your efforts.
— Siddaramaiah (@siddaramaiah) May 12, 2018
ಚಾಮುಂಡೇಶ್ವರಿ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ. ಆದ್ರೆ ಅಂತರ ಕಡಿಮೆಯಾಗಬಹುದು. ಜೆಡಿಎಸ್ ವಿಪರೀತ ಹಣ ಹಂಚಿದ್ರು. ಹಣದಿಂದಲೇ ಚುನಾವಣೆ ಗೆಲ್ಲುತ್ತೇವೆ ಎಂದು ಅವರು ಅಂದ್ಕೊಂಡಿದ್ದಾರೆ ಅದು ಸಾಧ್ಯವಿಲ್ಲ. ಅವರ ಹಣದಿಂದ ನನ್ನ ಗೆಲುವಿನ ಅಂತರ ಕಡಿಮೆಯಾಗಬಹುದು ಅಷ್ಟೇ ಅಂದ್ರು.
ಒಟ್ಟಿನಲ್ಲಿ ಎಲೆಕ್ಷನ್ ಅಖಾಡದ ಕಾರ್ಯ ಮುಗಿಸಿ ಸಿಎಂ ಸಿದ್ದರಾಮಯ್ಯ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಶನಿವಾರ ವೋಟ್ ಮಾಡಿದ ಬಳಿಕ ಮೈಸೂರಿನ ನಿವಾಸದಲ್ಲಿ ರಿಲ್ಯಾಕ್ಸ್ ಮೂಡ್‍ನಲ್ಲಿರುವ ಸಿಎಂ, ಟ್ವೀಟ್ ಮೇಲೆ ಟ್ವೀಟ್ ಮಾಡ್ತಿದ್ದಾರೆ. ಬೆಂಬಲಿಗರೇ, ಕಾರ್ಯಕರ್ತರೇ, ಹಿತೈಷಿಗಳೇ ನಿರಾಳರಾಗಿರಿ. ನಿಮಗೆ ಇನ್ನೆರಡು ದಿನಗಳ ಕಾಲ ಚುನಾವಣೋತ್ತರ ಸಮೀಕ್ಷೆ ಮನೋರಂಜನೆ ನೀಡಲಿದೆ. ಎಕ್ಸಿಟ್ ಪೋಲ್‍ಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.. ಗೆಲ್ಲೋದು ನಾವೇ. ವೀಕೆಂಡ್‍ನ್ನು ಎಂಜಾಯ್ ಮಾಡಿ ಎಂದು ಟ್ವಿಟ್ಟರ್‍ನಲ್ಲಿ ಸಿಎಂ ಸಿದ್ದರಾಮಯ್ಯ ಸಂದೇಶ ನೀಡಿದ್ದಾರೆ. ಇದರೊಂದಿಗೆ 6+4+2= 4 ಅಂತ ಮಾರ್ಮಿಕವಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.
We have fought this election on the plank of our 5 year performance, and our vision for the state.
I am confident the people of Karnataka will bless us to continue serving them. #KarnatakaWithCongress
— Siddaramaiah (@siddaramaiah) May 12, 2018
ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ದಲಿತರನ್ನು ಕಡೆಗಣಿಸುತ್ತಿದೆ. ಈ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿತ್ತು ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ಬೆಂಗಳೂರಿನ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಮೂವರು ಒಟ್ಟಿಗೆ ಪ್ರಚಾರ ನಡೆಸಲಿ ನೋಡೋಣ ಎಂದು ಸವಾಲು ಎಸೆದಿದ್ದರು. ಮತಗಟ್ಟೆ ಸಮೀಕ್ಷೆಯಲ್ಲಿ ಕೆಲವು ಈ ಬಾರಿ ರಾಜ್ಯದ ಅತಂತ್ರ ಪರಿಸ್ಥಿತಿ ನಿರ್ಮಾಣವವಾಗಲಿದೆ ಎಂದು ಭವಿಷ್ಯ ನುಡಿದ ಬೆನ್ನಲ್ಲೇ ಸಿಎಂ ದಲಿತ ಸಿಎಂ ವಿಚಾರದ ಬಗ್ಗೆ ತಮ್ಮ ನಿಲುವನ್ನು ತಿಳಿಸಿದ್ದು ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
https://www.youtube.com/watch?v=h_B_PDUG2Yk
https://www.youtube.com/watch?v=pFR9WyP41KU
ಪ್ರೀತಿಯ ಕನ್ನಡಿಗರೇ,
ತಾವು ಮತದಾನದ ಮೂಲಕ ತಮ್ಮ ಕರ್ತವ್ಯ ಮೆರದುದ್ದಕ್ಕಾಗಿ ಧನ್ಯವಾದಗಳು.
ತಮ್ಮಪ್ರಾಮಾಣಿಕ ಹಾಗೂ ಪರಿಶ್ರಮದ ಮೂಲಕ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೂ ಧನ್ಯವಾದಗಳು.
ಸತತ ಪರಿಶ್ರಮದೊಂದಿಗೆ ನಮ್ಮೊಂದಿಗೆ ದುಡಿದ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರಿಗೂ ನಾನು ಚಿರಋಣಿ.
— Siddaramaiah (@siddaramaiah) May 12, 2018
ಕಳೆದ 5 ವರ್ಷಗಳ ನಮ್ಮ ಅಭಿವೃದ್ಧಿಪರ ಆಡಳಿತ ಹಾಗೂ ರಾಜ್ಯದ ಬಗೆಗಿನ ನಮ್ಮ ಮುನ್ನೋಟದ ಮೇಲೆ ನಾವು ಈ ಬಾರಿಯ ಚುನಾವಣೆಯನ್ನು ಎದುರಿಸಿದ್ದೇವೆ. ರಾಜ್ಯದ ಜನತೆ ಮತ್ತೊಮ್ಮೆ ತಮ್ಮ ಸೇವೆ ಮಾಡುವ ಭಾಗ್ಯ ನೀಡಲಿದ್ದಾರೆ ಎಂಬ ಭರವಸೆಯಿದೆ. #KarnatakaWithCongress
— Siddaramaiah (@siddaramaiah) May 12, 2018
Exit opinion polls are entertainment for the next 2 days
Relying on poll of polls is like a person who can’t swim crossing a river on foot relying on a statistician who told him the average depth of the river is 4 feet
Please note average of 6+4+2 is 4. At 6 feet you drown! 1/2
— Siddaramaiah (@siddaramaiah) May 13, 2018
So, Dear party workers, supporters & well wishers, don’t worry about exit polls. Relax & enjoy your weekend.
We are coming back. 2/2
— Siddaramaiah (@siddaramaiah) May 13, 2018
ಕಾಂಗ್ರೆಸ್ ಪಕ್ಷದ ಪ್ರೀತಿಯ ಕಾರ್ಯಕರ್ತರೆ ಮತ್ತು ಹಿತಚಿಂಕರೆ,ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನೀವು ನನ್ನಂತೆಯೇ ದಣಿದಿದ್ದೀರಿ ಎಂದು ಗೊತ್ತು. Exit Poll ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಆರಾಮವಾಗಿರಿ, ಕುಟುಂಬದ ಜತೆ ಕಾಲ ಕಳೆಯಿರಿ. ಮೇ ೧೫ರಂದು ಸಿಗೋಣ. ಹಿರಿಯರ ಆಶೀರ್ವಾದ ಮತ್ತು ಕಿರಿಯರ ಹಾರೈಕೆಯಿಂದ ಒಳ್ಳೆಯದೇ ಆಗುತ್ತದೆ.
— Siddaramaiah (@siddaramaiah) May 13, 2018