Bengaluru CityDistrictsKarnatakaLatestMain Post

ತಪ್ಪು ಮಾಡಿದ್ದರೆ ನಾವು ಯಾರನ್ನು ರಕ್ಷಣೆ ಮಾಡುವುದಿಲ್ಲ : ಡಿಕೆ. ಶಿವಕುಮಾರ್

ಬೆಂಗಳೂರು: ಎಲೆಕ್ಷನ್ ಟೈಂನಲ್ಲಿ ಹೀಗೆ ಹೆದರಿಸುವುದಕ್ಕೆ ಯಾವುದೋ ಆಡಿಯೋ ಬಿಡುಗಡೆ ಮಾಡಿ ಹೆದರಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ಆಗಲಿ. ತಪ್ಪು ಮಾಡಿದ್ದರೆ ನಾವು ಯಾರನ್ನು ರಕ್ಷಣೆ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಶಾಸಕ ಎಸ್. ಆರ್ ವಿಶ್ವನಾಥ್ ಕೊಲೆಗೆ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣರಿಂದ ಯತ್ನ ನಡೆದಿದೆ ಎಂಬ ಆರೋಪದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲೆಕ್ಷನ್ ಟೈಂನಲ್ಲಿ ಹೀಗೆ ಹೆದರಿಸುವುದಕ್ಕೆ ಯಾವುದೋ ಆಡಿಯೋ ಬಿಡುಗಡೆ ಮಾಡಿ ಹೆದರಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ಆಗಲಿ. ತಪ್ಪು ಮಾಡಿದ್ದರೆ ನಾವು ಯಾರನ್ನು ರಕ್ಷಣೆ ಮಾಡುವುದಿಲ್ಲ. ಚುನಾವಣೆಯಲ್ಲಿ ಅವರ ವಿರುದ್ಧ ಹೋದವರನ್ನು ಹೆದರಿಸುವ ಕೆಲಸ ಆಗುತ್ತಿದೆ. ತನಿಖೆ ಆಗಲಿ ಎಲ್ಲಾ ಗೊತ್ತಾಗುತ್ತದೆ. ನಮ್ಮ ಪಕ್ಷದಲ್ಲಿ ಯಾರು ಅಂತಹ ಕೆಲಸ ಮಾಡುವವರು ಇಲ್ಲ. ರಾಜಕೀಯವಾಗಿ ಅವರನ್ನು ಹೆದರಿಸುವುದಕ್ಕೆ ಇಂತಹ ಆರೋಪ ಮಾಡಿರಬಹುದು ಎಂದು ಗೋಪಾಲಕೃಷ್ಣ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಸ್ಯಾಂಪಲ್‌ ಕಳುಹಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸರ್ಕಾರಿ ಅಧಿಕಾರಿಗಳು ಮತಯಾಚನೆ ಮಾಡುತ್ತಿದ್ದಾರೆ ಎಂಬ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಸೇರಿದಂತೆ ಅನೇಕ ಕಡೆ ಇದೇ ಆಗುತ್ತಿದೆ. ಸರ್ಕಾರ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸರ್ಕಾರಿ ಅಧಿಕಾರಿಗಳೇ ಅನೇಕ ಕಡೆ ಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್‌ – ಸುಪಾರಿ ಕೊಡ್ತಿರೋ ವೀಡಿಯೋ, ಆಡಿಯೋ ವೈರಲ್‌

ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ಕಾಂಗ್ರೆಸ್‍ನಲ್ಲಿ ಟಿಕೆಟ್ ಕೊಟ್ಟಿದ್ದಾರೆ ಎಂಬ ಸಹಕಾರ ಸಚಿವ ಸೋಮಶೇಖರ್ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸೋಮಶೇಖರ್ ಯಾರನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಎಂತ, ಎಂತ ಆರೋಪ ಇರುವವರು ಅವರ ಜೊತೆ ಇದ್ದಾರೆ ಅಂತ ಎಲ್ಲಾ ಗೊತ್ತಿದೆ. ಮೊದಲು ಅವರ ತಟ್ಟೆ ಕ್ಲೀನ್ ಮಾಡಿಕೊಳ್ಳಲಿ ಆಮೇಲೆ ನಮ್ಮ ಬಗ್ಗೆ ಮಾತಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಿಂದ ಇಸ್ರೋ ಸಂಸ್ಥೆ ಗುಜರಾತ್‍ಗೆ ಶಿಫ್ಟ್ ಮಾಡುತ್ತಿರುವ ಬಗ್ಗೆ, ಕೇಂದ್ರ ಸರ್ಕಾರ ಈ ನಿರ್ಧಾರ ಬದಲಿಸಬೇಕು. ಗುಜರಾತ್‍ಗೆ ಬೇಕಿದ್ದರೆ ಬೇರೊಂದು ಪ್ರಾಜೆಕ್ಟ್ ನೀಡಲಿ. ಆದರೆ ಇದು ನಮ್ಮ ರಾಜ್ಯದ ಹೆಮ್ಮೆಯ ವಿಚಾರ. ಕೇಂದ್ರ ಸರ್ಕಾರ ಈ ತೀರ್ಮಾನ ಕೈಬಿಡಬೇಕು. ಇದು ನಮ್ಮ ಕಾಂಗ್ರೆಸ್ ಹಾಗೂ ರಾಜ್ಯದ ಜನರ ಒತ್ತಾಯವಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button