ಬೆಂಗಳೂರು: ಸರ್ಜನ್‍ಗಳಾಗಿ ಕೆಲಸ ಮಾಡೋಕೆ ನಾವು ರೆಡಿ ಇದ್ದೇವೆ. ಆದ್ರೆ ಸಂಬಳ ಮಾತ್ರ ತಿಂಗಳಿಗೆ ಆರು ಲಕ್ಷ ರುಪಾಯಿ ಕೊಡಿ. ಇದು ಡಾಕ್ಟರ್‍ಗಳು ಸರ್ಕಾರದ ಮುಂದೆ ಇಟ್ಟಿರೋ ಪ್ರಸ್ತಾಪ.
ಆರೋಗ್ಯ ಸಚಿವಾಲಯವು ಗ್ರಾಮೀಣ ಭಾಗಗಳಲ್ಲಿ ತಜ್ಞ ವೈದ್ಯರನ್ನು ತುಂಬಲೇಬೇಕು ಅನ್ನೋ ತೀರ್ಮಾನಕ್ಕೆ ಬಂದಿದೆ. ಇದಕ್ಕಾಗಿ ಆನ್‍ಲೈನ್ ಬಿಡ್ಡಿಂಗ್ ಮೂಲಕ ತಜ್ಞ ವೈದ್ಯರಿಗೆ ಅರ್ಜಿ ಸಲ್ಲಿಸಲು ಸೂಚಿಸಿತು. ಅದರಂತೆ ಸಂಬಳ, ಸೇವೆ ಮಾಡುವ ಸ್ಥಳ ಎಲ್ಲವನ್ನೂ ಪಕ್ಕಾ ಮಾಡಿ ಅಂತ ಹೇಳಿದ 12 ದಿನಗಳಲ್ಲೇ ಬರೋಬ್ಬರಿ 5,200 ಮಂದಿ ಅರ್ಜಿ ಸಲ್ಲಿಸಿದ್ದಾರೆ.
Advertisement
11 ವಿಭಾಗಗಳಲ್ಲಿ ಇರೋ 1,221 ಹುದ್ದೆಗಳು ಖಾಲಿ ಇವೆ. ಕುತೂಹಲಕಾರಿ ವಿಷಯ ಅಂದ್ರೆ 60 ಸಾವಿರದಿಂದ ಆರು ಲಕ್ಷ ರುಪಾಯಿ ತನಕ ವೇತನವನ್ನು ಪ್ರಸ್ತಾಪಿಸಿದ್ದಾರೆ. ಸ್ತ್ರೀ ರೋಗ ತಜ್ಞರು ಆರು ಲಕ್ಷ ರುಪಾಯಿ ವೇತನ ಕೇಳುತ್ತಿದ್ದಾರೆ. ಹಾಗಿದ್ರೆ ಯಾವ್ಯಾವ ತಜ್ಞ ವೈದ್ಯರು ಎಷ್ಟೆಷ್ಟು ಸಂಬಳಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಅನ್ನೋದು ಇಲ್ಲಿದೆ.
Advertisement
ಜನರಲ್ ಸರ್ಜರಿ– 60 ಸಾವಿರದಿಂದ 4 ಲಕ್ಷವರೆಗೂ
ಜನರಲ್ ಮೆಡಿಸನ್ – 65 ಸಾವಿರದಿಂದ 5 ಲಕ್ಷದವರೆಗೆ
ಮನಃಶಾಸ್ತ್ರಜ್ಞರು – 1 ಲಕ್ಷದಿಂದ 2 ಲಕ್ಷ
ಸ್ತ್ರಿರೋಗ ಮತ್ತು ಪ್ರಸೂತಿ ತಜ್ಞರು – 80 ಸಾವಿರದಿಂದ 6 ಲಕ್ಷ ರುಪಾಯಿವರೆಗೆ
ಮಕ್ಕಳ ತಜ್ಞರು – 70 ಸಾವಿರದಿಂದ 4.5 ಲಕ್ಷ ರೂ ತನಕ
ಅರವಳಿಕೆ ತಜ್ಞರು – 80 ಸಾವಿರದಿಂದ 4 ಲಕ್ಷ
ಕಣ್ಣಿನ ತಜ್ಞರು – 95 ಸಾವಿರದಿಂದ 5 ಲಕ್ಷ
ಮೂಳೆ ತಜ್ಞರು – 60 ಸಾವಿರದಿಂದ 5 ಲಕ್ಷ ರುಪಾಯಿ
ಇಎನ್‍ಟಿ-70 ಸಾವಿರದಿಂದ 3.5 ಲಕ್ಷದವರೆಗೆ
ಚರ್ಮರೋಗ ತಜ್ಞರು – 80 ಸಾವಿರದಿಂದ 3 ಲಕ್ಷದವರೆಗೆ
ವಿಕಿರಣ(ಎಕ್ಸ್‍ರೇ)ತಜ್ಞರು – 1.20 ಲಕ್ಷ ರುಪಾಯಿಯಿಂದ 3.5 ಲಕ್ಷದವರೆಗೆ