– ಸಿಎಂ ಸಿದ್ದು ಆರೋಪಕ್ಕೆ ಬೊಮ್ಮಾಯಿ ಕೌಂಟರ್
– ಎಫ್‌ಸಿಐ ಮೇಲೆ ರಾಜ್ಯ ಸರ್ಕಾರ ಅವಲಂಬನೆ ಸರಿಯಲ್ಲ
– ನಮ್ಮ ಸರ್ಕಾರದ ಕಾಮಗಾರಿ, ಟೆಂಡರ್‌ನಂತೆ ವಿದ್ಯುತ್ ದರ ಏರಿಕೆಯನ್ನೂ ನಿಲ್ಲಿಸಲಿ
ಬೆಂಗಳೂರು: ಜುಲೈ 1 ರಿಂದ 10 ಕೆಜಿ ಉಚಿತ ಅಕ್ಕಿ ಕೊಡದಿದ್ರೆ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ (Congress) ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಎಚ್ಚರಿಕೆ ನೀಡಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮಾಡಿದ ಆರೋಪಗಳನ್ನು ಅಲ್ಲಗಳೆದರು.
Advertisement
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ (Ranadeep Surjewala) ಗೌಪ್ಯ ಸಭೆ, ಅಕ್ಕಿ ಯೋಜನೆ ವಿಚಾರವಾಗಿ ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಗೆ ಕೇಂದ್ರ ಅಕ್ಕಿ ಕೊಡ್ತಿಲ್ಲ ಅಂತ ಆರೋಪಿಸಿದ್ದಾರೆ. ಇದನ್ನು ನೋಡ್ತಿದ್ರೆ ರಾಜ್ಯ ಸರ್ಕಾರ ಅಕ್ಕಿ ಕೊಡ್ತೀವಿ ಅಂತ ಹೇಳಿ, ರಾಜ್ಯದ ಜನರಿಗೆ ಮೋಸ ಮಾಡ್ತಿದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದರೂ ಅಕ್ಕಿ ಗ್ಯಾರಂಟಿ: ಸಿದ್ದರಾಮಯ್ಯ
Advertisement
Advertisement
ರಾಜ್ಯ ಸರ್ಕಾರವು ಭಾರತೀಯ ಆಹಾರ ಆಯೋಗದ (ಎಫ್‌ಸಿಐ) ಮೇಲೆ ಅವಲಂಬನೆ ಆಗಬಾರದು. ನಾನು ಇದ್ದಾಗಲೂ ಅಧಿಕಾರಿಗಳಿಗೆ ಈ ಸೂಚನೆ ಕೊಟ್ಟಿದ್ದೆ. ಸಿದ್ದರಾಮಯ್ಯ ರಾಜಕೀಯ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ರಾಜಕೀಯ ಮಾಡ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲಿ. ಮಾತು ಕೊಟ್ಟಂತೆ ಜುಲೈ 1 ರಂದು ಅಕ್ಕಿ ಕೊಡಲಿ. ಸಮಯಕ್ಕೆ ಸರಿಯಾಗಿ ಉಚಿತ ಅಕ್ಕಿ ಕೊಡದಿದ್ರೆ, ಅಷ್ಟು ಪ್ರಮಾಣದ ಹಣ ಪಲಾನುಭವಿಗಳಿಗೆ ಕೊಡಲಿ. ಇದು ಗ್ಯಾರಂಟಿ ಅಲ್ಲ, ದೋಖಾ ಸೀರಿಸ್ ಅಂತ ಜನ ಮಾತಾಡ್ತಿದ್ದಾರೆ. ಜುಲೈ 1 ರಿಂದ ಹತ್ತು ಕೆಜಿ ಉಚಿತ ಅಕ್ಕಿ ಕೊಡದಿದ್ರೆ ಜನರನ್ನು ಸಂಘಟಿಸಿ ಬಿಜೆಪಿ ಹೋರಾಟ ಮಾಡಲಿದೆ ಎಂದು ತಿಳಿಸಿದರು.
Advertisement
ಇನ್ನೊಂದು ಕಡೆ ತಮ್ಮ ದೋಖಾ ಮುಚ್ಚಿಕೊಳ್ಳಲು, ರೈತರಿಗೆ, ಜನರಿಗೆ ಕೊಟ್ಟ ಮಾತಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ರಾಜಕಾರಣ ಮಾಡ್ತಿದೆ. ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಬಂದ ಮೇಲೆ ಎಲ್ಲರಿಗೂ ಐದು ಕೆಜಿ ಅಕ್ಕಿ ಕೊಡ್ತಾ ಬರ್ತಿದೆ. ಯಾವುದೇ ಖರ್ಚಿಲ್ಲದೇ ಐದು ಕೆಜಿ ಅಕ್ಕಿ ತಲಾ ವ್ಯಕ್ತಿಗೆ ಕೇಂದ್ರ ಕೊಡ್ತಿದೆ. ಸಾಗಣೆ ವೆಚ್ಚ, ನಿರ್ವಹಣಾ ವೆಚ್ಚಗಳನ್ನು ಕೇಂದ್ರವೇ ಭರಿಸುತ್ತಿದೆ. ಸತ್ಯ ಹೇಳಬೇಕಂದ್ರೆ ರಾಜ್ಯ ಸರ್ಕಾರ ಹತ್ತು ಕೆಜಿ ಹೆಚ್ಚುವರಿ ಅಕ್ಕಿ ಕೊಡಬೇಕು. ರಾಜ್ಯವು ಕೇಂದ್ರದ ಅಕ್ಕಿ ಸೇರಿ ಹದಿನೈದು ಕೆಜಿ ಕೊಡಬೇಕು. ಆದರೆ ಈಗ ಕೇಂದ್ರದ ಐದು ಕೆಜಿ + ಇವರ ಐದು ಕೆಜಿ ಸೇರಿಸಿ ಹತ್ತು ಕೆಜಿ ಕೊಡೋದಾಗಿ ಹೇಳ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು, ಕೇಂದ್ರ ಕೊಡಲ್ಲ ಅಂತಾ ಹೇಳ್ತಿದೆ – ಸಿಎಂ ಕಿಡಿ
ವಿದ್ಯುತ್ ದರ ಹೆಚ್ಚಳ ಬಗ್ಗೆ ಮಾತನಾಡಿದ ಅವರು, ಮಾರ್ಚ್ 13 ರಂದು ಕೆಇಆರ್‌ಸಿ ವಿದ್ಯುತ್ ದರ ಹೆಚ್ಚಿಸಿದಾಗ ನಮ್ಮ ಸರ್ಕಾರ ಒಪ್ಪಿರಲಿಲ್ಲ. ಮೇ 12 ರಂದು ಕೆಇಆರ್‌ಸಿ ಯವರು ದರ ಹೆಚ್ಚಳದ ನೋಟಿಫಿಕೇಷನ್ ಮಾಡಿದ್ರು. ಆಗ ಚುನಾವಣಾ ನೀತಿ ಸಂಹಿತೆ ಇತ್ತು. ನೀತಿ ಸಂಹಿತೆ ಬಂದಾಗ ಯಾವ ಸರ್ಕಾರವೂ ಏನೂ ಮಾಡಲು ಬರಲ್ಲ. ನಂತರ ಜೂನ್ 2 ರಂದು ಕೆಇಆರ್‌ಸಿ ದರ ಹೆಚ್ಚಳ ಆದೇಶ ಹೊರಡಿಸಿದ್ರು. ಜೂನ್ 2ರಲ್ಲಿ ಯಾರ ಸರ್ಕಾರ ಇತ್ತು? ಈ ರಾಜ್ಯ ಸರ್ಕಾರ ಸುಳ್ಳನ್ನ ಹೇಳೋ ಮೂಲಕ ರಾಜ್ಯದ ಜನತೆ ಇಟ್ಟ ನಂಬಿಕೆ ಹುಸಿಗೊಳಿಸಿದೆ. ಇದನ್ನ ನಾನು ಖಂಡಿಸ್ತೇನೆ. ಇವರ ಸರ್ಕಾರ ಬಂದ ಮೇಲೆ ವಿದ್ಯುತ್ ದರ ಹೆಚ್ಚಳ ಆದೇಶ ಜಾರಿಯಾಗಿದೆ ಎಂದು ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಅನುದಾನ ನಿಲ್ಲಿಸೋದಾಗಿ ಬಿಜೆಪಿಯವ್ರು ಹೇಳಿದ್ರು ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಬೊಮ್ಮಾಯಿ ನಿರಾಕರಿಸಿದರು. ಯಾರೂ ಹಾಗೆ ಹೇಳಿರಲಿಲ್ಲ. ಜವಾಬ್ದಾರಿ ಇದ್ದವರು ಹಾಗೆ ಹೇಳಿಲ್ಲ. ನಾನು ಹೇಳಿಲ್ಲ, ನಮ್ಮ ಸಚಿವರು ಹೇಳಿಲ್ಲ ಎಂದರು. ಇದನ್ನೂ ಓದಿ: ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ಖಚಿತ, ಸಾಲ ನಿಶ್ಚಿತ, ಬೆಲೆ ಏರಿಕೆ ಖಂಡಿತ – ಸುನೀಲ್ ಕುಮಾರ್ ಲೇವಡಿ
ನಮ್ಮ ಸರ್ಕಾರದ ಹಲವು ಕಾಮಗಾರಿ, ಟೆಂಡರ್‌ಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ಈಗ ವಿದ್ಯುತ್ ದರವನ್ನೂ ಇವರ ಸರ್ಕಾರ ನಿಲ್ಲಿಸಲಿ ಅಂತ ಬೊಮ್ಮಾಯಿ ಸವಾಲು ಹಾಕಿದರು.
ಬೆಂಗಳೂರು ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ ಭಾಗಿಯಾದ ವಿಚಾರ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ನಲ್ಲಿ ಈ ಸಂಸ್ಕೃತಿ ಇದೆ. ಹಿಂದೆ ಬೆಂಗಳೂರು ಉಸ್ತುವಾರಿ ಇದ್ದಂತಹವರು ಒಂದು ಸಭೆ ಮಾಡಿದಾಗ ಇದೇ ರೀತಿಯ ಪ್ರಶ್ನೆ ಎದ್ದಿತ್ತು. ಈ ವಿಷಯದಲ್ಲಿ ಬಹಳ ಸ್ಪಷ್ಟವಾದ ರೂಲ್ಸ್ ಇದೆ. ಸರ್ಕಾರಿ ಸಭೆಗಳಲ್ಲಿ ಇಂತಹ ವ್ಯಕ್ತಿ ಭಾಗವಹಿಸಬಾರದು ಅಂತ ನಿಯಮ ಇದೆ. ಆದರೆ ಈ ಸಭೆಯಲ್ಲಿ ಇದು ಉಲ್ಲಂಘನೆ ಆಗಿದೆ. ಬಿಬಿಎಂಪಿ ಸಭೆ ಬಗ್ಗೆ ಶಿವಕುಮಾರ್ ಏನು ಬೇಕಾದರೂ ಹೇಳಬಹುದು. ಶಿವಕುಮಾರ್ ಜೊತೆ ಸುರ್ಜೇವಾಲ ಕೂತು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿರೋದು ಸ್ಪಷ್ಟವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಹಿಡಿತ ಸಾಧಿಸಲು ಹೊರಟಿದೆ ಅನ್ಸುತ್ತೆ. ಕಾಂಗ್ರೆಸ್‌ನವ್ರು ಯಾವಾಗಲೂ ಕಾನೂನು ಉಲ್ಲಂಘನೆ ಮಾಡ್ತಾರೆ. ಹೀಗಾಗಿ ಈ ಉಲ್ಲಂಘನೆ ಬಗ್ಗೆ ಡಾ. ಹೆಚ್.ಸಿ.ಮಹದೇವಪ್ಪರಿಗೆ ರೆಫರ್ ಮಾಡಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದ ಪಿಸಿ ಮೋಹನ್, ಎಂಎಲ್‌ಸಿ ರವಿಕುಮಾರ್ ಇದ್ದರು.