ತಮಿಳುನಾಡಿಗೆ ನೀರು ಬಿಟ್ಟರೆ ಬೆಂಗಳೂರಿಗೆ ಸಂಕಷ್ಟ

Public TV
1 Min Read
KRS MANDYA 1

ಮಂಡ್ಯ: ಮುಂದಿನ ಹದಿನೈದು ದಿನ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ (Tamil Nadu) ಬಿಟ್ಟರೆ 7 ಟಿಎಂಸಿ ನೀರು ಕೆಆರ್‍ಎಸ್‍ನಿಂದ (KRS) ಖಾಲಿಯಾಗಲಿದೆ. ಈ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ಪಾಲಿಸಿದರೆ ಸಂಕಷ್ಟ ಎದುರಾಗುವ ಭೀತಿ ಶುರುವಾಗಿದೆ.

ಸದ್ಯ ಡ್ಯಾಂನಲ್ಲಿ 24 ಟಿಎಂಸಿ ನೀರು ಮಾತ್ರ ಶೇಖರಣೆ ಇದೆ. ನೀರು ಬಿಟ್ಟರೆ ಅದು 17 ಟಿಎಂಸಿಗೆ ಇಳಿಯಲಿದೆ. 17 ಟಿಎಂಸಿಯಲ್ಲಿ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಲಿದೆ. ಈ 5 ಟಿಎಂಸಿ ನೀರನ್ನ ಬಳಿಕೆ ಮಾಡಲು ಸಾಧ್ಯವಾಗುವುದಿಲ್ಲ. ಆಗ ಬಳಕೆಗೆ ಉಳಿಯುವುದು ಕೇವಲ 13 ಟಿಎಂಸಿ ನೀರು ಮಾತ್ರ. ಅಷ್ಟು ನೀರಿನಲ್ಲಿ ಕುಡಿಯಲೂ ಸಹ ನೀರು ಕೊಡುವುದು ಕಷ್ಟವಾಗಲಿದೆ. ಕಾವೇರಿ ನೀರನ್ನೇ ಅವಲಂಬಿಸಿರುವ ಸಿಲಿಕಾನ್ ಸಿಟಿ (Bengaluru) ಜನರಿಗೆ ಡಿಸೆಂಬರ್ ಕೊನೆಯ ವಾರದಲ್ಲೇ ನೀರಿನ ಸಮಸ್ಯೆ ಕಾಡಲಿದೆ.

ಡ್ಯಾಂನ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ- 124.80 ಅಡಿ
ಇಂದಿನ ಮಟ್ಟ- 101.82 ಅಡಿ
ಒಳ ಹರಿವು – 1891 ಕ್ಯೂಸೆಕ್
ಹೊರ ಹರಿವು – 2342 ಕ್ಯೂಸೆಕ್
ಗರಿಷ್ಠ ಸಂಗ್ರಹ ಸಾಮಥ್ರ್ಯ- 49.452 ಟಿಎಂಸಿ
ಇಂದು ಸಂಗ್ರಹ ಇರುವ ನೀರು- 24.270 ಟಿಎಂಸಿ

Web Stories

Share This Article