ಬೆಂಗಳೂರು: ರದ್ದಾಗಿರುವ ರೇಷನ್ ಕಾರ್ಡ್‌ಗಳನ್ನು ಸರ್ಕಾರ ವಾಪಸ್ ಕೊಡದೇ ಹೋದರೆ ಹಳ್ಳಿಹಳ್ಳಿಗಳಲ್ಲಿ ಹೋರಾಟದ ಮೂಲಕ ಬಿಜೆಪಿ ಜಾಗೃತಿ ಮೂಡಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಮಾಜಿ ಸಚಿವ ರೇಣುಕಾಚಾರ್ಯ (Renukacharya) ಎಚ್ಚರಿಕೆ ಕೊಟ್ಟಿದ್ದಾರೆ.
ರೇಷನ್ ಕಾರ್ಡ್ (Ration Card) ರದ್ದಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಪೂರ್ವದಲ್ಲಿ ಯಾವುದೇ ಷರತ್ತು ವಿಧಿಸದೇ ಎಲ್ಲರಿಗೂ ಉಚಿತ ಎಂದು ಗ್ಯಾರಂಟಿ ಘೋಷಿಸಿದ್ದೀರಿ. ಈಗ ಬಿಪಿಎಲ್ ರದ್ದುಪಡಿಸಿದ್ದೀರಿ. ಸಿಎಂ, ಆಹಾರ ಸಚಿವರು ಈಗ ಉತ್ತರ ಕೊಡಿ ಎಂದು ಆಗ್ರಹಿಸಿದರು.ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿಕೆ
Advertisement
Advertisement
ಜನರು ಕೇಂದ್ರದ, ರಾಜ್ಯದ ಸವಲತ್ತು ಪಡೆಯಲು ಬಿಪಿಎಲ್ ಕಾರ್ಡ್ ಬೇಕೇಬೇಕು. ಒಬ್ಬ ಬಡವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಯುಷ್ಮಾನ್ ಕಾರ್ಡ್ ನೀಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ 2 ಸಾವಿರ ರೂ. ಕೊಡುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ. ಇವತ್ತಿಗೂ ಯುವನಿಧಿ ಸಿಕ್ಕಿಲ್ಲ. ಅನ್ನಭಾಗ್ಯ 10 ಕೆ.ಜಿ. ಎಂದು ಬೊಬ್ಬೆ ಹೊಡೆದರು. ಆದರೆ ಕೊಟ್ಟಿದ್ದು ಐದು ಕೆ.ಜಿ. ಮಾತ್ರ. ಚುನಾವಣೆ ಮುನ್ನ ಬೊಬ್ಬೆ ಹೊಡೆಯುವುದು ಅಷ್ಟೇ. ಮಹಾರಾಷ್ಟ್ರ ಚುನಾವಣೆ ಮುಗಿಯುತ್ತಿದ್ದಂತೆ ಬಿಪಿಎಲ್ ರದ್ದು ಮಾಡಲು ಹೊರಟಿದ್ದೀರಿ. ಒಂದೇ ಒಂದು ಬಿಪಿಎಲ್ ಕಾರ್ಡ್ ಕೂಡಾ ರದ್ದು ಮಾಡಬಾರದು. ಮಾಡಿದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದರು.
Advertisement
ವಕ್ಫ್ ವಿಚಾರವಾಗಿ ಮಾತನಾಡಿದ ಅವರು, ವಕ್ಫ್ ಅಲ್ಲೋಲಕಲ್ಲೋಲ ಲಾಗಿದೆ. ಬಿಜೆಪಿ (BJP) ಹೋರಾಟದ ನಂತರ ವಾಪಸ್ ಮಾಡುವುದಾಗಿ ಹೇಳಿದ್ದೀರಿ. ಆದರೆ ಕಲಂ 11ರಲ್ಲಿ ಬದಲಾವಣೆ ಆಯ್ತಾ? ಎಸ್‌ಸಿ, ಎಸ್‌ಟಿಗಳ 27 ಸಾವಿರ ಕೋಟಿ ರೂ. ಹಣ ವಾಪಸ್ ಪಡೆದಿದ್ದೀರಿ ಯಾಕೆ? ಸುಳ್ಳಿಗೆ, ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್. ಒಬ್ಬ ಬಡವ ಆಸ್ಪತ್ರೆಗೆ ಹೋದರೆ ಬಿಪಿಎಲ್ ಕಾರ್ಡ್ ಕೇಳುತ್ತಾರೆ. ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇನೆ. ಹಳ್ಳಿಹಳ್ಳಿಯಲ್ಲೂ ಜಾಗೃತಿ ಮೂಡಿಸುತ್ತೇವೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಪ್ರಧಾನಿ ಮೋದಿಗೆ ಗಯಾನಾದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ