* ಶಬ್ಬೀರ್ ನಿಡಗುಂದಿ
ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅಬ್ಬರದ ಪ್ರಚಾರ ಶುರುವಾಗಿದೆ. ಕಳೆದೊಂದು ವರ್ಷದಿಂದ ಚುನಾವಣೆಗೆ ಸಿದ್ಧವಾಗುತ್ತಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಒಂದು ವೇಳೆ ಬಿಜೆಪಿ ಉತ್ತರ ಪ್ರದೇಶದಲ್ಲಿ ಗದ್ದುಗೆ ಏರಿದರೆ, ಯೋಗಿ ಆದಿತ್ಯನಾಥ್ ಸಿಎಂ ಆಗಿ ಮತ್ತೆ ಆಯ್ಕೆಯಾದರೆ ನಾಲ್ಕು ದಾಖಲೆಗಳು ಉತ್ತರದಲ್ಲಿ ದಾಖಲಾಗಲಿವೆ.
Advertisement
Advertisement
ಘೋರಖ್‍ಪುರ (ನಗರ) ಕ್ಷೇತ್ರದಿಂದ ಯೋಗಿ ಆದಿತ್ಯನಾಥ್‍ಗೆ ಟಿಕೆಟ್ ನೀಡಲಾಗಿದೆ. ಇದೇ ಕ್ಷೇತ್ರದಿಂದ ಲೋಕಸಭೆಗೆ ಐದು ಬಾರಿ ಅವರು ಆಯ್ಕೆಯಾಗಿದ್ದರು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಕಷ್ಟವಲ್ಲ ಎಂದು ವಿಶ್ಲೇಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್‍ಗೆ ಸುಲಭವಾಗಿ ನಾಲ್ಕು ದಾಖಲೆಗಳು ಬರೆಯುವ ಅವಕಾಶಗಳಿದೆ.
Advertisement
Advertisement
ಅಧಿಕಾರಾವಧಿ ಪೂರ್ಣಗೊಳಿಸಿದ ಮೂರನೇ ಮುಖ್ಯಮಂತ್ರಿ:
ಯೋಗಿ ಆದಿತ್ಯನಾಥ್ ಈಗಾಗಲೇ ತಮ್ಮ ಹೆಸರಿಗೆ ದಾಖಲೆಯೊಂದನ್ನು ನೋಂದಾಯಿಸಿಕೊಂಡಿದ್ದಾರೆ. 1952ರ ಮೇ 20 ರಂದು ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದ ಮೊದಲ ಅಸೆಂಬ್ಲಿಯನ್ನು ರಚಿಸಿದಾಗಿನಿಂದ ಇಲ್ಲಿಯವರೆಗೆ, ಯುಪಿ ಸುಮಾರು 70 ವರ್ಷಗಳಲ್ಲಿ 21 ಸಿಎಂಗಳನ್ನು ಕಂಡಿದೆ. ಆದರೆ ಕೇವಲ ಮೂವರು ಮಾತ್ರ ಐದು ವರ್ಷಗಳ ಸಂಪೂರ್ಣ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ.
ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ಅಧಿನಾಯಕಿ ಮಾಯಾವತಿ 2007-2012ರಲ್ಲಿ ಮೊದಲ ಬಾರಿಗೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ 2012-2017ರ ಅವಧಿಯಲ್ಲಿ ಅಧಿಕಾರ ಪೂರ್ಣಗೊಳಿಸಿದ್ದರು. ಇದಾದ ಬಳಿಕ ಯೋಗಿ ಆದಿತ್ಯನಾಥ್ ಅವರು ಪೂರ್ಣಾವಧಿಯನ್ನು ಪೂರ್ಣಗೊಳಿಸಿದ ಮೂರನೇ ಮುಖ್ಯ ಮಂತ್ರಿಯಾಗಲಿದ್ದಾರೆ.
15 ವರ್ಷಗಳಲ್ಲಿ ಮೊದಲ ಶಾಸಕ ಸಿಎಂ:
ಈ ಬಾರಿ ಘೋರಖ್‍ಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಯೋಗಿ ಆದಿತ್ಯನಾಥ್ ಗೆದ್ದು, ಮುಖ್ಯಮಂತ್ರಿಯಾಗಿ ಆಯ್ಕೆಯಾದರೆ 15 ವರ್ಷದ ಬಳಿಕ ವಿಧಾನಸಭೆಯಿಂದ ಆಯ್ಕೆಯಾದ ಶಾಸಕರೊಬ್ಬರು ಸಿಎಂ ಆದಂತಾಗಲಿದೆ. 2007-2012ರಲ್ಲಿ ಸಿಎಂ ಆಗಿದ್ದ ಮಾಯಾವತಿ, 2012-2017ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್ ಎಂಎಲ್‍ಸಿಯಾಗಿ ಮುಖ್ಯಮಂತ್ರಿ ಗಾದಿಗೇರಿದ್ದರು.
ಕಳೆದ 2017 ರ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆಗಿ ಆಯ್ಕೆಯಾದರು. ಅದಕ್ಕೂ ಮುನ್ನ ಅವರು ಘೋರಖ್‍ಪುರ ಕ್ಷೇತ್ರದ ಸಂಸದರಾಗಿದ್ದರು. ಸಿಎಂ ಆದ ಬಳಿಕ ಅವರು ಆರು ತಿಂಗಳಲ್ಲಿ ಶಾಸಕರಾಗಬೇಕಿತ್ತು. ಅದಕ್ಕಾಗಿ ಅವರೂ ವಿಧಾನಸಭೆ ಮೊರೆ ಹೋಗದೇ ಪರಿಷತ್ ಮೂಲಕ ಆಯ್ಕೆಯಾಗಿದ್ದರು. ಹೀಗಾಗಿ ಕಳೆದ ಹದಿನೈದು ವರ್ಷದಿಂದ ಎಂಎಲ್‍ಸಿಯಿಂದ ಆಯ್ಕೆಯಾಗಿ ಸಿಎಂಗಳಾಗುತ್ತಿದ್ದು, ಯೋಗಿ ಮತ್ತೊಮ್ಮೆ ಸಿಎಂ ಆದರೆ ಹೊಸ ದಾಖಲೆಯಾಗಲಿದೆ.
37 ವರ್ಷಗಳಲ್ಲಿ ಅಧಿಕಾರ ಉಳಿಸಿಕೊಂಡ ಮೊದಲ ಮುಖ್ಯಮಂತ್ರಿ:
ಈವರೆಗೂ ಉತ್ತರ ಪ್ರದೇಶದಲ್ಲಿ ನಾಲ್ಕು ಮಂದಿ ಮುಖ್ಯಮಂತ್ರಿಗಳು ಎರಡನೇ ಅವಧಿಗೆ ಆ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅವಿಭಜಿತ ಉತ್ತರ ಪ್ರದೇಶ ಸಮಯದಲ್ಲಿ 1985 ರಲ್ಲಿ ಕಾಂಗ್ರೆಸ್‍ನ ನಾರಾಯಣ ದತ್ತ ತಿವಾರಿ ಅಧಿಕಾರ ಉಳಿಸಿಕೊಂಡ ಕಡೆಯ ಸಿಎಂ. ಇದಕ್ಕೂ ಮೊದಲು 1957 ರಲ್ಲಿ ಸಂಪೂರ್ಣನಂದ, 1962 ಚಂದ್ರಭಾನು ಗುಪ್ತಾ, 1974 ರಲ್ಲಿ ಹೇಮಾವತಿ ನಂದನ್ ಬಹುಗುಣ ಅಧಿಕಾರ ಎರಡನೇ ಬಾರಿಗೆ ಉಳಿಸಿಕೊಂಡಿದ್ದರು. ಈಗ ಯೋಗಿ ಆದಿತ್ಯನಾಥ್ ಅದನ್ನು ಉಳಿಸಿಕೊಂಡರೇ 37 ವರ್ಷಗಳಲ್ಲಿ ಅಧಿಕಾರ ಉಳಿಸಿಕೊಂಡ ಮೊದಲ ಮುಖ್ಯಮಂತ್ರಿ ಹಾಗೂ ಉತ್ತರ ಪ್ರದೇಶದ ಇತಿಹಾಸದಲ್ಲಿ ಐದನೇ ಸಿಎಂ ಅಗಮತ್ತೆ ಅಧಿಕಾರಕ್ಕೆ ಬಂದ ಮೊದಲ ಸಿಎಂ.
ಬಿಜೆಪಿ ಈವರೆಗೂ ಉತ್ತರ ಪ್ರದೇಶದಲ್ಲಿಪ್ರದೇಶದಲ್ಲಿ ನಾಲ್ಕು ಸಿಎಂಗಳನ್ನು ಕಂಡಿದೆ. ಯೋಗಿ ಆದಿತ್ಯನಾಥ್‍ಗೂ ಮುನ್ನ ಕಲ್ಯಾಣ್ ಸಿಂಗ್, ರಾಮ್ ಪ್ರಕಾಶ್ ಗುಪ್ತಾ, ಹಾಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್. ಈ ಮೂವರು ನಾಯಕರು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಿಲ್ಲ. ಒಂದು ವೇಳೆ ಯೋಗಿ ಆದಿತ್ಯನಾಥ್ ಪಕ್ಷವನ್ನು ಎರಡನೇ ಬಾರಿ ಅಧಿಕಾರಕ್ಕೆ ತಂದರೇ ಬಿಜೆಪಿಯನ್ನು ಎರಡನೇ ಬಾರಿ ಅಧಿಕಾರಕ್ಕೆ ತಂದ ಮೊದಲ ಸಿಎಂ ಆಗಲಿದ್ದಾರೆ. ಇದನ್ನೂ ಓದಿ: ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಒಂದೇ ಪಕ್ಷದಿಂದ ಟಿಕೆಟ್‌ಗಾಗಿ ಪತಿ-ಪತ್ನಿ ಫೈಟ್!
ನೊಯ್ಡಾ ಭೇಟಿ ಬಳಿಕ ಅಧಿಕಾರ ಉಳಿಸಿಕೊಂಡ ಸಿಎಂ:
ನೊಯ್ಡಾಗೆ ಭೇಟಿಗೆ ನೀಡಿದ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಉತ್ತರ ಪ್ರದೇಶದ ರಾಜಕೀಯದಲ್ಲಿದೆ. ಈ ಕಾರಣಕ್ಕೆ ಹಿಂದ ಅಖಿಲೇಶ್ ಯಾದವ್ ಸೇರಿದಂತೆ ಹಲವು ಸಿಎಂಗಳು ನೊಯ್ಡಾಗೆ ತಮ್ಮ ಅಧಿಕಾರದ ಅವಧಿಯಲ್ಲಿ ಭೇಟಿ ನೀಡಿಲ್ಲ. ಆದರೆ ಯೋಗಿ ಆದಿತ್ಯನಾಥ್ ತಮ್ಮ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ. ಮೊದಲ ಬಾರಿ ಅವರು ಮೆಟ್ರೋ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಭೇಟಿ ನೀಡಿದ್ದರು. ಇದಾದ ಬಳಿಕ ಅಖಿಲೇಶ್ ಯಾದವ್ ಈ ಇಬ್ಬರು ಮುಂದೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಆದರೆ 2019 ರಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಈಗ ಯೋಗಿ ಈ ಮಾತನ್ನು ಸುಳ್ಳು ಮಾಡಿ ಹೊಸ ದಾಖಲೆ ಬರೆಯಬೇಕಿದೆ. ಇದನ್ನೂ ಓದಿ: Goa Election: ಅಮಿತ್ ಪಾಲೇಕರ್ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ
1988 ರ ಜೂನ್‍ನಲ್ಲಿ ಆಗಿನ ಯುಪಿ ಸಿಎಂ ವೀರ್ ಬಹದ್ದೂರ್ ಸಿಂಗ್ ಅವರು ನೋಯ್ಡಾದಿಂದ ಹಿಂತಿರುಗಿದ ಕೆಲವು ದಿನಗಳ ನಂತರ ಕಚೇರಿಯನ್ನು ತ್ಯಜಿಸಿದ ನಂತರ ನೋಯ್ಡಾ ಜಿಂಕ್ಸ್ ಜನಪ್ರಿಯವಾಯಿತು. ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್, ಕಲ್ಯಾಣ್ ಸಿಂಗ್ ಮತ್ತು ರಾಜನಾಥ್ ಸಿಂಗ್ ಅವರು ಯುಪಿ ಸಿಎಂ ಆಗಿದ್ದಾಗ ನೋಯ್ಡಾಕ್ಕೆ ಭೇಟಿ ನೀಡಿರಲಿಲ್ಲ. ಇದನ್ನೂ ಓದಿ: ಮೋದಿ, ಯೋಗಿ ಆದಿತ್ಯನಾಥ್ ಭಾವಚಿತ್ರದ ಸೀರೆ- ಫೋಟೋ ವೈರಲ್