ಕಾರವಾರ: ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಸಿಬಿಯಲ್ಲಿ ಪೂರ್ಣ ತನಿಖೆಯಾಗದೇ ಉಳಿದಿರುವ ಎಲ್ಲಾ ಪ್ರಕರಣಗಳ ಮರು ತನಿಖೆ ಮಾಡಿ ತಕ್ಕ ಶಾಸ್ತಿ ಮಾಡುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭಟ್ಕಳದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ರಾಜ್ಯ ಸರ್ಕಾರ ಜನರು ಕೊಟ್ಟ ತೆರಿಗೆ ಹಣವನ್ನ ಲೂಟಿ ಮಾಡಿ ಲೋಕಾಯುಕ್ತ ಸಂಸ್ಥೆಯ ಶಕ್ತಿಯನ್ನ ಹಾಳುಮಾಡಿ ಎಸಿಬಿ ಎಂಬ ಸಂಸ್ಥೆಯನ್ನು ಕಟ್ಟಿಕೊಂಡಿದೆ. ನಿಮ್ಮ ಕುಟುಂಬದವರು ಹಾಗೂ ಮಂತ್ರಿಮಂಡಲದ ಶಾಸಕರು ಮಾಡಿದ ಹಗಲು ದರೋಡೆಯನ್ನ ಕುಲಾಫೆ ಮಾಡಿಸಿಕೊಳ್ಳಲು ಎಸಿಬಿ ಎಂಬ ಸಂಸ್ಥೆ ಕಟ್ಟಿಕೊಳ್ಳಲಾಗಿದೆ. ಕರ್ನಾಟಕದ ಕಾಂಗ್ರೆಸ್ ನ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ಒಬ್ಬ ಅತ್ಯಾಚಾರಿ. ಸಿದ್ದರಾಮಯ್ಯ ಒಬ್ಬ ಭ್ರಷ್ಟ. ಭ್ರಷ್ಟಾಚಾರಿ-ಅತ್ಯಾಚಾರಿ ಸೇರಿ ಸರ್ಕಾರ ನಡೆಸುತ್ತಿದ್ದಾರೆ. ಐಎನ್‍ಎ ವರದಿ ನೀಡಿದರೂ ಪಿಎಫ್‍ಐ ತಲೆಎತ್ತಲು ಸಿದ್ದರಾಮಯ್ಯನವರೇ ಕಾರಣರಾಗಿದ್ದಾರೆ. ಸಿದ್ದರಾಮಯ್ಯನವರು ಸಮುದಾಯಗಳ ನಡುವೆ ಜಾತಿಯ ವಿಷಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Advertisement
Advertisement
ಭಟ್ಕಳ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿರುವ ಈ ಊರಿನ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಶಾಂತವಾಗಿದ್ದ ಕರಾವಳಿ ಉಗ್ರರ ತಾಂಡವಾಗಿದೆ. ಶಾಂತಿ ಕದಡಲು ಹೊರಟಿರುವ ಈ ಭಟ್ಕಳವನ್ನ ರಕ್ಷಣೆ ಮಾಡಬೇಕಿದೆ. ಕೋಮುವಾದವನ್ನ ಹತ್ತಿಕ್ಕಬೇಕಾದ ಸರ್ಕಾರ ಒಂದು ಕೋಮಿಗೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
Advertisement
ಭಟ್ಕಳದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶ್ರೀರಾಮುಲು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
Advertisement
ಕುಂದಾಪುರದಲ್ಲಿ ಹಾದು ಹೋಗುವ ಹೆದ್ದಾರಿ ಅಗಲವಾಗುತ್ತಿದೆ. ರೈಲ್ವೆ ಅಭಿವೃದ್ಧಿ ಪಡಿಸಲಾಗುತ್ತಿದೆ. ದೇಶದ ಹಿತಕ್ಕಾಗಿ ದುಡಿಯುತ್ತಿರುವ ಪ್ರಧಾನಿ ಮೋದಿ ಅವರನ್ನು ನಾವೆಲ್ಲ ಬೆಂಬಲಿಸುವ ಮೂಲಕ ಶಕ್ತಿ ತುಂಬಬೇಕಿದೆ. ನಾವೆಲ್ಲ ಅವರ ಜೊತೆಗಿದ್ದೇವೆ ಎಂಬುದನ್ನು ತೋರಿಸಬೇಕಿದೆ.#ParivartanaYatre #Kundapur pic.twitter.com/MR1hRBkndH
— B.S.Yediyurappa (@BSYBJP) November 13, 2017
ತಮಗೆ ಬೇಕಾದ ಪ್ರಕರಣಕ್ಕೆ ಎಸಿಬಿ, ಸಿಐಡಿಯಿಂದ ಕ್ಲೀನ್ ಚಿಟ್ ಪಡೆದಿದ್ದಾರೆ. ನಾವು ಅಧಿಕಾರಕ್ಕೆ ಬಂದ ನಂತರ ಆ ಪ್ರಕರಣಗಳ ಮರುತನಿಖೆ ಮಾಡಿಸುತ್ತೇವೆ.#ParivartanaYatre #Hebri #Karkala
— B.S.Yediyurappa (@BSYBJP) November 12, 2017
ನನ್ನ ಮೇಲೆ ಒಂದೇ ಒಂದು ಕಪ್ಪುಚುಕ್ಕೆಇಲ್ಲ ಎಂದು ಮುಖ್ಯಮಂತ್ರಿ ಹೇಳ್ತಾರೆ. ಆದರೆ ಹಗರಣಗಳ ಕೊಳಕಿನಲ್ಲೇ ಮುಳುಗಿರುವವರ ಒದೊಂದು ಕಪ್ಪುಚುಕ್ಕೆ ಎಲ್ಲಿಂದ ಹುಡುಕುವುದು?#ParivartanaYatre #Hebri #Karkala pic.twitter.com/RoJctmPVrd
— B.S.Yediyurappa (@BSYBJP) November 12, 2017
ಭಟ್ಕಳದಲ್ಲಿ ನನ್ನ ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದಾರೆ. ಡಾ. ಯು. ಚಿತ್ತರಂಜನ್ ಶಾಸಕರಾಗಿ, ವೈದ್ಯರಾಗಿ, ಹೋರಾಟಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಕೊಲೆಯಾದರು. ಅದರ ನಂತರ ಭಟ್ಕಳದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಇಂದಿಗೂ ಚಿತ್ತರಂಜನ್ ನಮ್ಮ ನೆನಪಿನಲ್ಲಿದ್ದಾರೆ.#ParivartanaYatre #Bhatkal pic.twitter.com/pmL73LSkFF
— B.S.Yediyurappa (@BSYBJP) November 13, 2017
STUNNING response in Bhatkal to #ParivartanaYatre led by Sri. @BSYBJP. pic.twitter.com/kgDGAxDfFf
— BJP Karnataka (@BJP4Karnataka) November 13, 2017
ಕೇಂದ್ರದಲ್ಲಿ ಮೋದಿ ಸರ್ಕಾರ, ಇಲ್ಲಿ ಬಿಜೆಪಿ ಸರ್ಕಾರ ಇದ್ದರೆ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲಿದೆ. ಅದನ್ನು ನಾವು ಮಾಡಿತೋರಿಸುತ್ತೇವೆ. ಭಟ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ಡಾ. ಚಿತ್ತರಂಜನ್ ಅವರ ಕನಸು ನನಸು ಮಾಡಲು ಸಹಕರಿಸಿ.#ParivartanaYatre #Bhatkal
— B.S.Yediyurappa (@BSYBJP) November 13, 2017
ನಮ್ಮ ಸರ್ಕಾರ ಇದ್ದಾಗ ಬೈಂದೂರು ಕ್ಷೇತ್ರಕ್ಕೆ 580 ಕೋಟಿ ರು. ನೀಡಿದ್ದೆವು. ಈಗಿರುವ ಶಾಸಕರು 100 ಕೋಟಿ ರು. ತಂದಿದ್ದಾರಾ ಕೇಳಿ. ಏನಾಗಿದೆ ಈ ಸರ್ಕಾರಕ್ಕೆ? ರಾಜ್ಯದ ಅಭಿವೃದ್ಧಿಯ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ತಮಗೆ ಬೇಕಾದವರ ಪ್ರಕರಣಗಳಿಗೆ ಕ್ಲೀನ್ ಚಿಟ್ ಕೊಡಿಸುವುದಷ್ಟೇ ಅವರ ಆಸಕ್ತಿ.#ParivartanaYatre #Baindur
— B.S.Yediyurappa (@BSYBJP) November 13, 2017
ನನ್ನದೇ ಆದ ಅನೇಕ ಕನಸುಗಳಿವೆ. ಅದನ್ನು ಜ.28ರಂದು ಯಾತ್ರೆ ಮುಗಿಸುವ ದಿವಸ ವಿವರಿಸುತ್ತೇನೆ. ಕೇಂದ್ರ ಸರ್ಕಾರ ಜನೆರಿಕ್ ಔಷಧಿಗಳನ್ನು ನೀಡುವ ಯೋಜನೆ ಜಾರಿ ಮಾಡಿದೆ. ಅತ್ಯಂತ ಕಡಿಮೆ ದರದಲ್ಲಿ ಔಷಧಿ ನಿಮಗೆ ಅಲ್ಲಿ ದೊರೆಯುತ್ತದೆ.#ParivartanaYatre #Baindur
— B.S.Yediyurappa (@BSYBJP) November 13, 2017
ಈ ದೇಶದ ಹೆಚ್ಚು ಮತ ಪಡೆದು ಗೆದ್ದ ಸಂಸದರಲ್ಲಿ ಒಬ್ಬ ಎಂಬ ಕೀರ್ತಿಕೊಟ್ಟಿದ್ದು ಬೈಂದೂರು. ಆದ್ದರಿಂದ ಬೈಂದೂರನ್ನು ಮರೆಯುವ ಪ್ರಶ್ನೆಯಿಲ್ಲ. ನಮ್ಮ ಸರ್ಕಾರ ಬಂದ ನಂತರ ಈ ಕ್ಷೇತ್ರವನ್ನು ದತ್ತುಪಡೆದು, ಅಭಿವೃದ್ಧಿಪಡಿಸುತ್ತೇನೆ. ಕ್ಷೇತ್ರದ ಯಾರು ಬೇಕಾದರೂ ಬಂದು ನನ್ನನ್ನು ಭೇಟಿಮಾಡಬಹುದು.#ParivartanaYatre #Baindur pic.twitter.com/SjHJUsbsOc
— B.S.Yediyurappa (@BSYBJP) November 13, 2017