– ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಸಾವಿರಾರು ಕೋಟಿ ದುಡ್ಡು ತಿಂದಿದ್ದಾರೆ ಎಂದ ಶಾಸಕ
ವಿಜಯಪುರ: ಬಿಎಸ್‌ವೈ ಸಿಎಂ ಆಗಿದ್ದಾಗ ಸಾವಿರಾರು ಕೋಟಿ ತಿಂದಿದ್ದಾರೆ. ಈ ಕರ್ನಾಟಕದಲ್ಲಿ ಬಿಜೆಪಿ ಉಳಿಯಬೇಕಾದ್ರೆ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರನನ್ನ (BY Vijayendra) ತೆರವುಗೊಳಿಸಬೇಕು. ಬಿ.ಎಸ್ ಯಡಿಯೂರಪ್ಪ (BS Yediyurappa) ಅವರನ್ನ ಯಾವುದೇ ವೇದಿಕೆಗಳಲ್ಲಿ ಕೂರಿಸಬಾರದು ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಬಾಂಬ್ ಸಿಡಿಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ನನ್ನನ್ನು ಸ್ಟಾರ್ ಮಾಡುವ ಅವಶ್ಯಕತೆಯಿಲ್ಲ. ಈ ರಾಜ್ಯದ ಜನ ನಮ್ಮನ್ನು ಒಪ್ಪಿಕೊಂಡಿದ್ದಾರೆ. ನೀವು ಹೀರೋ ಆಗಬೇಕು ಅಂದರೆ ಖರ್ಚು ಮಾಡಿ. `ಬಿಜೆಪಿ ಕರ್ನಾಟಕ’ ಎಂದು ಒಂದು ಎಕ್ಸ್ ಖಾತೆ ಇದೆ. ಅದನ್ನು `ಬಿವೈವಿ ಕರ್ನಾಟಕ’ ಮಾಡಿದರೆ ಒಳ್ಳೆಯದು. ಯಾಕಂದರೆ ಅದರಲ್ಲಿ ಯಡಿಯೂರಪ್ಪನವರ ಗುಣಗಾನ ಬಿಟ್ಟರೆ ಏನು ಇಲ್ಲ. ಅಭ್ಯರ್ಥಿಗಳಿಗೆ ಹಿಂದೂಗಳ ವೋಟು ಎಂದು ಕರೆಯಲಿ ಆದರೆ ಸಾಬ್ರೂ ನಿಮಗೆ ವೋಟು ಹಾಕುತ್ತಾರೆ ಎಂದು ಮಾತ್ರ ಹೇಳಬೇಡಿ ಎಂದರು.ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ
ಬಿಎಸ್‌ವೈ ಸಿಎಂ ಇದ್ದಾಗ ಮಂತ್ರಿಯಾಗು ಎಂದಿದ್ದರು ಆದರೆ ನಾನು ಆಗಿರಲಿಲ್ಲ. ಅವರು ಸಿಎಂ ಇದ್ದಾಗ ಸಾಕಷ್ಟು 1,000 ಕೋಟಿ ರೂ. ಹಣ ತಿಂದಿದ್ದಾರೆ. ಭ್ರಷ್ಟ ಸಿಎಂ ಮಂತ್ರಿಮAಡಲದಲ್ಲಿ ನಾನು ಇರಲ್ಲ ಎಂದು ತಿರಸ್ಕರಿಸಿದ್ದೇನೆ. ಪ್ರತಿ ನಿತ್ಯ ಅಪ್ಪ, ಮಗ ನಡ್ಡಾ ಅವರ ಬಳಿ ಹೋಗಿ, ಯತ್ನಾಳ್ ಅವರನ್ನು ತೆಗೆಯಿರಿ. ವಿಜಯೇಂದ್ರನನ್ನು ಸಿಎಂ ಮಾಡಿ ಎಂದು ಗೋಳಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಶಕ್ತಿ ಯೋಜನೆ ಪರಿಷ್ಕರಣೆ ವಿಚಾರ:
ಸಿದ್ದರಾಮಯ್ಯ (CM Siddaramaiah) ಸರ್ಕಾರದ ಗ್ಯಾರಂಟಿ ಮುಗಿದಿದೆ. ಇನ್ನಾರು ತಿಂಗಳಲ್ಲಿ ನೌಕಕರಿಗೆ ಕೊಡಲು ಹಣವಿರುವುದಿಲ್ಲ. ರಾಮಲಿಂಗಾರೆಡ್ಡಿ (Ramalinga Reddy) ಅವರು ಸಾರಿಗೆ ಇಲಾಖೆ ಲಾಭದಲ್ಲಿದೆ ಎಂದು ಹೇಳುತ್ತಾರೆ. ಎಲ್ಲಿದೆ? ಸುಮ್ಮನೇ ಬೋಗಸ್ ಯೋಜನೆಗಳನ್ನು ಘೋಷಣೆ ಮಾಡಬೇಡಿ. ನಿಮ್ಮ ಬಜೆಟ್ ಎಷ್ಟಿದೆ? ಅಷ್ಟನ್ನು ಮಾತ್ರ ಘೋಷಣೆ ಮಾಡಿ. ಇಲ್ಲವಾದರೆ ಜನರು ಹೊಡಿಯುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ದೀಪಾವಳಿ ಆಚರಣೆ ವೇಳೆ ಎರಡು ಗುಂಪಿನ ನಡುವೆ ಘರ್ಷಣೆ- ಒಂದೇ ಕುಟುಂಬದ ಮೂವರು ಬಲಿ