Connect with us

ಬಿಜೆಪಿಯವ್ರು ಮನೆಯಲ್ಲಿದ್ರೆ ರಾಜ್ಯ ಶಾಂತವಾಗಿರುತ್ತೆ – ಸಿಎಂ

ಬಿಜೆಪಿಯವ್ರು ಮನೆಯಲ್ಲಿದ್ರೆ ರಾಜ್ಯ ಶಾಂತವಾಗಿರುತ್ತೆ – ಸಿಎಂ

ಬೀದರ್: ಕಾರವಾರ ಗಲಾಟೆಗೆ ಬಿಜೆಪಿಯವರೇ ಕಾರಣ. ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ಇವತ್ತು ಹತ್ಯೆಗಳಾಗಬೇಕಾದರೆ ಕೋಮು ಗಲಭೇಯಾಗಬೇಕಾದರೆ ಬಿಜೆಪಿಯವರೇ ಕಾರಣ. ಬಿಜೆಪಿಯವರು ಮೆನಯಲ್ಲಿಯಲ್ಲಿದ್ದರೆ ಕಾನೂನು ಸುವವ್ಯಸ್ಥೆ ಚನ್ನಾಗಿ ಇರುತ್ತೆ ಅಂತ ಸಿಎಂ ಸಿದ್ದರಾಮಯ್ಯ ಕಮಲ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪರೇಶ್ ಮೇಸ್ತಾ ಹತ್ಯೆ ಪ್ರಕರಣದ ಬಗ್ಗೆ ಬೀದರ್‍ನ ಬಸವಕಲ್ಯಾಣದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ಬಿಜೆಪಿ ನಾಯಕರು ಜನರನ್ನ ಭಾವನಾತ್ಮಕವಾಗಿ ಕೇರಳಿಸುವುದನ್ನ ಬಿಟ್ಟರೆ ಶಾಂತವಾಗಿ ಇರುತ್ತದೆ. ಬೆಂಕಿ ಹಚ್ಚೋರು ಅವರೇ, ಕೋಮು ಗಲಭೇ ಸೃಷ್ಠಿ ಮಾಡೋರು ಅವರೇನೆ ಅಂತ ಹೇಳಿದ್ರು.

ಬಸವಕಲ್ಯಾಣದ ಥೇರು ಮೈದಾನದಲ್ಲಿ ನಡೆದ ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್, ಸಮಾಜ ಕಲ್ಯಾಣ ಸಚಿವ ಎಂ ಆಂಜನೇಯ, ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ, ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ, ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್, ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

Advertisement
Advertisement