ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಮನೆ ವಸತಿ ಯೋಜನೆಯಡಿ ಕೊಟ್ಟಿಲ್ಲ. ಒಂದು ವೇಳೆ ಬಿಜೆಪಿ ಅವರು ವಸತಿ ಹಂಚಿಕೆ ಮಾಡಿರುವ ದಾಖಲಾತಿ ಕೊಟ್ಟರೆ ನಾನು ರಾಜಕೀಯ ನಿವೃತ್ತಿ ಪಡೆಯೋದಾಗಿ ವಿಧಾನ ಪರಿಷತ್‌ನಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed) ಬಿಜೆಪಿ ಸದಸ್ಯರಿಗೆ ಸವಾಲ್ ಹಾಕಿದ್ರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ನವೀನ್, ವಸತಿ ಯೋಜನೆ (Housing Project) ಬಗ್ಗೆ ಪ್ರಶ್ನೆ ಮಾಡಿದರು. ಕಾಂಗ್ರೆಸ್ ಸರ್ಕಾರ ವಸತಿ ಯೋಜನೆ ಅಡಿ ಮನೆ ಸರಿಯಾಗಿ ನಿರ್ಮಾಣ ಮಾಡುತ್ತಿಲ್ಲ ಎಂದು ಆರೋಪ ಮಾಡಿದರು. ಸಚಿವರು ಸದನಕ್ಕೆ ತೃಪ್ತಿಪಡಿಸಲು ಮಾತ್ರ ಉತ್ತರ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: ಚುನಾವಣೆ ವೇಳೆ ಅಭ್ಯರ್ಥಿ ಮೇಲೆ ಹಲ್ಲೆ ಕೇಸ್ – ಸಚಿವ ಮುನಿಯಪ್ಪಗೆ ಜಾಮೀನು
ಇದರಲ್ಲಿ ರಾಜಕೀಯ ಮಾಡಬೇಡಿ. ಬಿಜೆಪಿ ಅವಧಿಯಲ್ಲಿ ಒಂದೇ ಒಂದು ಮನೆ ಕೊಟ್ಟಿಲ್ಲ. ಮನೆ ಕೊಟ್ಟಿರೋದು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಬಿಜೆಪಿ ಸದಸ್ಯರಿಗೆ ಎರಡು ಬಾರಿ ಸವಾಲ್ ಹಾಕಿದರು. ಇದನ್ನೂ ಓದಿ: ವಸತಿ ಯೋಜನೆಗಳ ಸಹಾಯಧನ ಹೆಚ್ಚಳಕ್ಕೆ ಕ್ರಮ: ಸಚಿವ ಜಮೀರ್