ಇವರಿಬ್ಬರೂ ಒಂದೊಂದು ಕಾರಣಕ್ಕೆ ಗೋಳಾಡುತ್ತಿದ್ದಾರೆ. ಒಬ್ಬಾಕೆದ್ದು ಡ್ರಗ್ಸ್ (Drugs) ಸಮಸ್ಯೆ, ಇನ್ನೊಬ್ಬ ನಟಿಯದ್ದು ಕಿಸ್ಸಿನ (Kiss) ಕಾಂಟ್ರವರ್ಸಿ. ನಾನು ಹಾಗಿರಲಿಲ್ಲ ಎನ್ನುವುದೇ ಇಬ್ಬರ ಒನ್ ಲೈನ್ ಸಿನಿಮಾ. ಯಾವ ಕಾರಣಕ್ಕೆ ಇಬ್ಬರು ನಟಿಯರು ಹೀಗೆ ಒದ್ದಾಡುತ್ತಿದ್ದಾರೆ? ಏನಿದರ ಹಿಂದಿನ ಅಸಲಿಯತ್ತು?
ಅಶು ರೆಡ್ಡಿ(Ashu Reddy), ಈಕೆ ಕಾಲಿವುಡ್ ನಟಿ. ಸ್ಟಾರ್ ಪಟ್ಟ ದಕ್ಕಿಲ್ಲ. ಅದಕ್ಕಾಗಿ ಸಕಲ ರೀತಿ ಹೋರಾಟ ಮಾಡುತ್ತಿದ್ದಾರೆ. ತುಣುಕು ಪಾತ್ರ ಸಿಕ್ಕರೂ ಕೇಕೆ ಹಾಕುತ್ತಾರೆ. ರಜನಿಯ ಕಬಾಲಿ ಚಿತ್ರದಲ್ಲೂ ಹಿಂಗೆ ಬಂದು ಹಂಗೆ ಹೋಗಿದ್ದರು. ಈಗ ಅದೇ ಸಿನಿಮಾ ನಿರ್ಮಾಪಕ ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆತನ ಹೆಸರು ಕೆಪಿ ಚೌಧರಿ. ಇದೇ ಚೌಧರಿ ಜೊತೆ ಗಂಟೆಗಟ್ಟಲೆ ಚಾಟಿಂಗು, ನೂರು ಸಾರಿ ಫೋನ್ ಕಾಲಿಂಗು ಅಶು ರೆಡ್ಡಿ ಮಾಡಿದ್ದಾರಂತೆ. ಇದನ್ನು ಖಾಕಿ ಬಹಿರಂಗಗೊಳಿಸಿದೆ. ಮಾಧ್ಯಮ ಬರೆದಿವೆ. ಅಶು ರಣಚಂಡಿ ಅವತಾರ.
`ನಾನು ಡ್ರಗ್ಸ್ ತೊಗೊಂಡಿಲ್ರಪ್ಪಾ. ನನ್ನ ಮೊಬೈಲ್ ನಂಬರ್ ಲೀಕ್ ಮಾಡಿದ್ದಾರೆ. ಸಾವಿರಾರು ಫೋನ್ ಬರುತ್ತಿವೆ. ನಾನೆಲ್ಲಿಗೆ ಹೋಗಲಿ? ಮೀಡಿಯಾ ಮೇಲೆ ಕೇಸ್ ಹಾಕುತ್ತೇನೆ.’ ಹೀಗಂತ ಟೊಂಕಕ್ಕೆ ಸೀರೆ ಸಿಕ್ಕಿಸಿಕೊಂಡು ಗುಡುಗಿದ್ದಾರೆ ಚಿನ್ನಾರಿ ಅಶು. `ಹಾಗಿದ್ದರೆ ನೂರು ಸಾರಿ ಚೌಧರಿಗೆ ಫೋನ್ ಯಾಕೆ ಮಾಡಿದ್ದೆ?’ ಇದಕ್ಕೆ ಉತ್ತರ ಮಾತ್ರ ಅಶು ರೆಡ್ಡಿ ನಾಲಿಗೆಯಿಂದ ಈಚೆ ಬೀಳುತ್ತಿಲ್ಲ. ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದರೆ ಮೂರು ಮತ್ತೊಂದು ಅಂತಿದ್ದಾರಾ ಅಶು? ಇದನ್ನೂ ಓದಿ:ಕಿಚ್ಚನ ಮುಂದಿನ ಚಿತ್ರಕ್ಕೆ ಹೊಸ ನಿರ್ದೇಶಕ: ಅವರನ್ನ ಬಿಟ್ಟು ಇವರಾರು?
ದಶಕಗಳ ನಂತರ ಬಾಲಿವುಡ್ ಹಿರಿಯ ನಟಿ ಲಿಪ್‌ಲಾಕ್ ದೃಶ್ಯ ನೆನಪಿಸಿಕೊಂಡಿದ್ದಾರೆ. ಬೋಲ್ಡ್ ದೃಶ್ಯಗಳಲ್ಲಿ ನಟಿಸಿ, ಹೆಂಗೆ ಡೆಟಾಲ್ ಹಾಕಿ ಬಾಯಿ ತೊಳಕೊಂಡೆ ಎನ್ನುವುದನ್ನು ಇಂಚಿಂಚಾಗಿ ಹರವಿಟ್ಟಿದ್ದಾರೆ. ಆ ನಟಿಯ ಹೆಸರು ನೀನಾ ಗುಪ್ತಾ (Neena Gupta). ಪೋಷಕ ನಟಿ ಕಮ್ ಬೋಲ್ಡ್ ಆಕ್ಟರೀಸ್ ಗದ್ದುಗೆ ಏರಿದ್ದರು ಈಕೆ ದಶಕಗಳ ಹಿಂದೆ. ತೊಂಬತ್ತರ ದಶಕದ ದಿಲ್ಲಗಿ ಸೀರಿಯಲ್‌ನಲ್ಲಿ ಮೊದಲ ಬಾರಿ ಲಿಪ್‌ಲಾಕ್ ದೃಶ್ಯಕ್ಕೆ ಒಪ್ಪಿದ್ದರು. ಧಾರಾವಾಹಿ ಲೋಕ ಬೆಚ್ಚಿತ್ತು. ಕಾರಣ ಅಲ್ಲಿವರೆಗೆ ಸೀರಿಯಲ್ ಮಡಿ ಮಡಿಲಾಗಿದ್ದವು.
ದಿಲೀಪ್ ಧವನ್ ಜೊತೆ ತುಟಿಗೆ ಮುತ್ತಿಟ್ಟ ನೀನಾ ಇಡೀ ರಾತ್ರಿ ನಿದ್ದೆ ಮಾಡಲಿಲ್ಲವಂತೆ. ಇಷ್ಟ ಇಲ್ಲದ ನಟನ ಜೊತೆ ಕಿಸ್ ಮಾಡಿದ್ದಕ್ಕೆ ಫುಲ್ ಬಾಟಲ್ ಡೆಟಾಲ್‌ನಿಂದ ಬಾಯಿ ತೊಳೆದುಕೊಂಡಿದ್ದರಂತೆ. ಅದೃಷ್ಟವೋ ದುರದೃಷ್ಟವೋ? ಜನರು ರೊಚ್ಚೆಗೆದ್ದು ರಾಡಿ ನೀರು ಎರಚಬಾರದೆಂದು ನಿರ್ದೇಶಕ ಆ ದೃಶ್ಯಕ್ಕೆ ಕತ್ತರಿ ಹಾಕಿಬಿಟ್ಟ. ಅದನ್ನು ಇಷ್ಟು ವರ್ಷಗಳ ನಂತರ ನೆನೆದಿದ್ದಾರೆ ನೀನಾ. ಈಕೆ ಬೇರೆ ಯಾರೂ ಅಲ್ಲ, ವೆಸ್ಟ್ ಇಂಡೀಸ್ ಮಾಜಿ ಸ್ಟಾರ್ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಮಗುವಿನ ತಾಯಿ.
Web Stories