ಬೆಂಗಳೂರು: ನಾನು ವಿಪಕ್ಷ ನಾಯಕನಾಗಿ 20 ದಿನಗಳು ಕಳೆದಿವೆ. ನನಗೆ ಇನ್ನೂ ಕಾರು ಬಂದಿಲ್ಲ, ಗನ್ ಮ್ಯಾನ್ ಕೊಟ್ಟಿಲ್ಲ ಎಂದು ಪರಿಷತ್‍ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ (Vidhana Soudha) ಮಾತನಾಡಿದ ಅವರು, ಇರುವ ಒಬ್ಬ ಗನ್ ಮ್ಯಾನ್ ಸಹ ಇಂದು ಸಂಜೆ ವಾಪಸು ಕಳಿಸ್ತೀನಿ. ನನಗೆ ಯಾವುದೇ ಸಮಸ್ಯೆ ಆದರೂ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ. ಮೂವರು ಗನ್ ಮ್ಯಾನ್‍ಗಳು ಬರಬೇಕು. ಎಸ್ಕಾರ್ಟ್ ಕೊಡಬೇಕು ಕೊಡಲಿಲ್ಲ. ನನ್ನ ಮನೆಗೆ ರಕ್ಷಣೆ ಕೊಡಬೇಕು. ಪ್ರೋಟೋಕಾಲ್ ಪ್ರಕಾರ ಕೊಡಬೇಕು. ನನ್ನ ಹೆಸರೇ ಛಲವಾದಿ ನಾರಾಯಣಸ್ವಾಮಿ. ನನಗೆ ಯಾವುದೇ ಭಯ ಇಲ್ಲ. ಆದರೆ ಇದು ನನ್ನ ಹಕ್ಕು ನನಗೆ ಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಸಿಎಂ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿದ ಅವರು, ಸಿದ್ದರಾಮಯ್ಯ ದಲಿತರ ಚರ್ಮ ತೆಗೆದು ಚಪ್ಪಲಿ ಮಾಡಿಕೊಂಡು ಓಡಾಡುತ್ತಿದ್ದಾರೆ. ಕನಕಪುರದಲ್ಲಿ ದಲಿತನ ಕೈ ಕತ್ತರಿಸಿದ್ದಾರೆ. ಈ ಕೃತ್ಯ ಮಾಡಿದ್ದು ಸಹ ಕಾಂಗ್ರೆಸ್‍ನವರೇ ಎನ್ನುವ ಮಾಹಿತಿ ಇದೆ. ಸರ್ಕಾರ ಕೂಡಲೇ ತನಿಖೆ ಮಾಡಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪೋಕ್ಸೊ ಕೇಸ್‍ಲ್ಲಿ ಜಾಮೀನು ಕೊಟ್ಟಿದ್ದು ತಪ್ಪು ಎಂದು ಈಗ ಪರಮೇಶ್ವರ್ ಹೇಳಿದ್ದಾರೆ. ದೂರು ಕೊಟ್ಟ ದಿನ ಯಡಿಯೂರಪ್ಪಗೆ 82 ವರ್ಷ, ಅದೆಲ್ಲ ನಂಬಲು ಸಾಧ್ಯವಿಲ್ಲ ಎಂದು, ಇವತ್ತು ನಿಮ್ಮ ವಿರುದ್ಧ ಪಾದಯಾತ್ರೆ ಮಾಡಿದ ತಕ್ಷಣ ಪೋಕ್ಸೊ ಕಾಯ್ದೆ ಅಂತಿದ್ದಾರೆ. ಜಾಮೀನು ಕೊಟ್ಟಿದ್ದೆ ತಪ್ಪು ಎಂದು ಹೇಳ್ತಿದ್ದಾರೆ. ಇದು ರಾಜಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.