ಬೆಂಗಳೂರು: ಮೆಟ್ರೋದಲ್ಲಿ ಓಡಾಡೋರಿಗೊಂದು ಬ್ಯಾಡ್ ನ್ಯೂಸ್. ಹೈಕೋರ್ಟ್ ವೇತನ ಪರಿಷ್ಕರಣೆ, ಆಡಳಿತಾತ್ಮಕ ತೊಂದರೆಯನ್ನು ಬಗೆಹರಿಸದಿದ್ದರೆ ಸೋಮವಾರ ಮಧ್ಯಾಹ್ನದಿಂದ ಮೆಟ್ರೋ ಬಂದ್ ಮಾಡಲು ಸಿಬ್ಬಂದಿ ಮುಂದಾಗಿದ್ದಾರೆ.
ವೇತನ ಪರಿಷ್ಕರಣೆ, ಆಡಳಿತಾತ್ಮಕ ತೊಂದರೆ ಸೇರಿ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಾಳೆಯಿಂದ ನಮ್ಮ ಮೆಟ್ರೋ ಸಿಬ್ಬಂದಿ ಅನಿರ್ಧಿಷ್ಟಾವಧಿ ಮುಷ್ಕರ ಮಾಡುತ್ತಿದ್ದಾರೆ. ಈ ಹಿಂದೆನೂ ಮೆಟ್ರೋ ಸಿಬ್ಬಂದಿ ಪ್ರತಿಭಟನೆಗೆ ಕರೆ ಕೊಟ್ಟಾಗ ಹೈಕೋರ್ಟ್ ಮಧ್ಯೆ ಪ್ರವೇಶಿಸಿ ಸಿಬ್ಬಂದಿ ಸಮಸ್ಯೆ ಬಗೆಹರಿಸುವಂತೆ ಹೇಳಿತ್ತು.
Advertisement
Advertisement
ಕೋರ್ಟ್ ಕೊಟ್ಟ ಗಡುವು ಮುಗಿದರೂ ಬಿಎಂಆರ್ ಸಿಎಲ್ ಯಾವುದೇ ಮಾತುಕತೆಗೆ ಮುಂದಾಗಿರಲಿಲ್ಲ. ಇದರಿಂದ ನೌಕರರ ಸಂಘ ನಾಳೆ(ಸೋಮವಾರ) ಮತ್ತೆ ಬಂದ್ ಗೆ ಕರೆ ಕೊಟ್ಟಿದೆ. ಆದ್ರೆ ಪ್ರತಿಭಟನೆಗೆ ಭಾಗಿಯಾಗಲ್ಲ ಅಂತ ಶನಿವಾರವೇ ಅಧಿಕಾರಿಗಳು ನೌಕರರಿಂದ ಸಹಿ ಹಾಕಿಸಿಕೊಂಡಿದ್ದರು. ಅಲ್ಲದೇ ಪ್ರತಿಭಟನೆಯಲ್ಲಿ ಭಾಗಿಯಾದರೆ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೂ ಅಧಿಕಾರಿಗಳ ದೌರ್ಜನ್ಯಕ್ಕೆ ನಾವು ಬಗ್ಗಲ್ಲ ನಾಳೆ 900 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಬಂದ್ ನಡೆಸುತ್ತೇವೆ ಅಂತ ನೌಕರರ ಸಂಘ ಹೇಳಿದೆ.
Advertisement
ಈ ಮಧ್ಯೆ ಪ್ರತಿಭಟನೆಗೆ ಇಳಿದರೆ ಅಮಾನತು ಮಾಡುವುದಾಗಿ ಮೆಟ್ರೋ ಸಿಬ್ಬಂದಿಗೆ ಬಿಎಂಆರ್ ಸಿಎಲ್ ಎಚ್ವರಿಕೆ ರವಾನಿಸಿದೆ.
Advertisement
ಬೆಳಗ್ಗೆ ಮೆಟ್ರೋ ಸಂಚಾರವಿದೆ:
ಸೋಮವಾರ ಬೆಳಗ್ಗೆ ಹೈಕೋರ್ಟ್‍ನಲ್ಲಿ ಮೆಟ್ರೋ ಎಸ್ಮಾದ ಕುರಿತು ವಿಚಾರಣೆ ನಡೆಯಲಿದ್ದು, ಪ್ರಕರಣ ವಿಚಾರಣೆ ಮುಗಿದ ಬಳಿಕ ಪ್ರತಿಭಟನೆಗೆ ಮೆಟ್ರೋ ನೌಕಕರ ಸಂಘ ನಿರ್ಧಾರ ಮಾಡಲಿದೆ. ಹಾಗಾಗಿ ನಾಳೆ ಬೆಳಗ್ಗೆ ಮೆಟ್ರೋ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ. ಹೈಕೋರ್ಟ್ ಕೇಸ್ ಮುಗಿದ ಬಳಿಕ ಮಧ್ಯಾಹ್ನ ಪ್ರತಿಭಟನೆ ಮುಂದುವರೆಯಲಿದೆ ಎಂದು ಮೆಟ್ರೋ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯ ನಾರಾಯಣ್ ಹೇಳಿದ್ದಾರೆ.