ಭಯೋತ್ಪಾದಕರನ್ನು ಬಿಡಲ್ಲ, ಪಾಕಿಸ್ತಾನಕ್ಕೆ ನುಗ್ಗಿ ಕೊಲ್ಲುತ್ತೇವೆ: ರಾಜನಾಥ್‌ ಸಿಂಗ್‌ ಎಚ್ಚರಿಕೆ

Public TV
1 Min Read
Rajnath Singh

ನವದೆಹಲಿ: ಭಯೋತ್ಪಾದಕರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ. ಪಾಕಿಸ್ತಾನಕ್ಕೆ ನುಗ್ಗಿಯಾದರೂ ಸರಿ ಅವರನ್ನು ಕೊಲ್ಲುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಎಚ್ಚರಿಕೆ ನೀಡಿದ್ದಾರೆ.

ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಕ್ಷಣಾ ಸಚಿವರು, ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನಿಸಿದ ನಂತರ ಗಡಿಯಾಚೆ ಪಲಾಯನ ಮಾಡುವವರನ್ನು ನಿರ್ಮೂಲನೆ ಮಾಡಲು ಭಾರತವು ಪಾಕಿಸ್ತಾನದೊಳಗೆ (India- Pakistan) ಪ್ರವೇಶಿಸಲಿದೆ. ಯಾವುದೇ ಭಯೋತ್ಪಾದಕನನ್ನು ಬಿಡುವುದಿಲ್ಲ, ಮನೆಗೆ ನುಗ್ಗಿ ಅವನನ್ನು ಕೊಲ್ಲುತ್ತೇವೆ. ದೇಶದ ಶಾಂತಿ ಕದಡಲು ಯತ್ನಿಸಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಏಳೆಂಟು ದಿನದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ : ರಾಜನಾಥ್‌ ಸಿಂಗ್‌

ಭಾರತವು ತನ್ನ ನೆರೆಹೊರೆಯವರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುತ್ತದೆ. ನಮ್ಮ ಇತಿಹಾಸವನ್ನು ನೋಡಿ. ನಾವು ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ ಅಥವಾ ಯಾವುದೇ ದೇಶದ ಭೂಪ್ರದೇಶದ ಒಂದು ಇಂಚು ಕೂಡ ಆಕ್ರಮಿಸಿಕೊಂಡಿಲ್ಲ. ಇದು ಭಾರತದ ಲಕ್ಷಣವಾಗಿದೆ. ಆದರೆ ಯಾರಾದರೂ ನಮ್ಮ ನೆಲದಲ್ಲಿ ಭಯೋತ್ಪಾದನೆಯನ್ನು ಹರಡುವ ಮೂಲಕ ಭಾರತವನ್ನು ಹೆದರಿಸಲು ಪ್ರಯತ್ನಿಸಿದರೆ, ಅವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಸಿಂಗ್‌ ಎಚ್ಚರಿಕೆ ನೀಡಿದರು.

ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಪ್ರತಿಕ್ರಿಯಿಸಿ, ಪಿಒಕೆ ಜನರು ಭಾರತದೊಂದಿಗೆ ಇರಬೇಕೆಂದು ಒತ್ತಾಯಿಸುತ್ತಾರೆ. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಕಾಶ್ಮೀರದಲ್ಲಿ ಸಹಜ ಸ್ಥಿತಿ ಮರಳಿದೆ ಮತ್ತು ಅಭಿವೃದ್ಧಿಯು ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರು.

Share This Article