ಬಾಗಲಕೋಟೆ: ಐಇಡಿ ಸ್ಫೋಟಗೊಂಡ ಪರಿಣಾಮ ಭಾರತೀಯ ಯೋಧ ಹುತಾತ್ಮರಾಗಿರುವ ಘಟನೆ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ರೆಜೂರಿ ಎಂಬಲ್ಲಿ ನಡೆದಿದೆ.
ಶ್ರೀಶೈಲ್ ರಾಯಪ್ಪ ಬಳಬಟ್ಟಿ (34) ಹುತಾತ್ಮರಾದ ಯೋಧರಾಗಿದ್ದು, ಬಾಗಲಕೋಟೆ ತಾಲೂಕಿನ ಇಲಾಳ ಗ್ರಾಮದ ನಿವಾಸಿಯಾಗಿದ್ದಾರೆ. ಪೂಂಚ್ ಗಡಿ ನಿಯಂತ್ರಣದ ರೇಖೆಯ ಬಳಿ ಐಇಡಿ ಸ್ಫೋಟಗೊಂಡಿರುವ ಪರಿಣಾಮ ಯೋಧ ರಾಯಪ್ಪ ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಕುಟುಂಬಸ್ಥರಿಗೆ ಲಭಿಸಿದೆ. 12 ವರ್ಷದಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಯಪ್ಪ ಅವರು, 12ನೇ ಮದ್ರಾಸ್ ಇನ್ ಪೆಂಟ್ರಿ ರೆಜಿಮೆಂಟ್‍ನಲ್ಲಿ ಯೋಧರಾಗಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
Advertisement
Jammu & Kashmir: One security personnel has lost his life and seven injured in IED blast in Mendhar area along the Line of Control in Poonch sector. pic.twitter.com/TiiSmG1JU4
— ANI (@ANI) May 22, 2019
Advertisement
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣದ ರೇಖೆಯ ಬಳಿ ಐಇಡಿ ಸ್ಫೋಟಗೊಂಡಿದ್ದು, ಈ ಘಟನೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದರೆ 7 ಜನ ಗಂಭೀರವಾಗಿ ಗಾಯಗೊಂಡಿದ್ದರು. ಗುರುವಾರ ಚುನಾವಣಾ ಫಲಿತಾಂಶ ಹೊರ ಬರಲಿದ್ದು, ಎಕ್ಸಿಟ್ ಪೋಲ್ ಗಳು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆಂಬ ಭವಿಷ್ಯ ನುಡಿದಿವೆ. ಈ ಸಂಬಂಧ ಫಲಿತಾಂಶಕ್ಕೂ ಮುನ್ನ ದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಿಸಲು ಉಗ್ರರು ಐಇಡಿ ಸ್ಫೋಟಿಸಿರಬಹುದು ಎಂದು ಶಂಕಿಸಲಾಗಿದೆ. ಐಇಡಿ ಸ್ಫೋಟಕ್ಕೂ ಮುನ್ನ ಬುಧವಾರ ಬೆಳಗ್ಗೆ ಕುಲಗಾಮ್ ಜಿಲ್ಲೆಯಲ್ಲಿ ಉಗ್ರರು ಮತ್ತು ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಹಿಜ್ಬುಲ್ ಮುಜಾಹಿದೀನ ಸಂಘಟನೆಯ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರಳಿಸಿದ್ದರು.
Advertisement
Jammu & Kashmir:Defence Ministry Spokesperson clarifies "it wasn't an IED blast, but a training-related incident. no fatal casualties but one soldier seriously injured while many other suffered minor injuries in the incident that took place along Line of Control in Poonch sector" https://t.co/ngPqLg6q9U
— ANI (@ANI) May 22, 2019