ಬೆಂಗಳೂರು: ಚಾಮರಾಜಪೇಟೆ ಈದ್ಗಾ ವಿವಾದ ಬಗೆಹರಿಯದ ಸಮಸ್ಯೆ ಆಗಿದೆ. ಬಿಬಿಎಂಪಿ ಮತ್ತು ವಕ್ಫ್ ಬೋರ್ಡ್ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಈದ್ಗಾ ಮೈದಾನ ನಮ್ಮದೇ ಅಂತಾ ವಕ್ಫ್ ಬೋರ್ಡ್ ಬಿಬಿಎಂಪಿಗೆ ವಾರ್ನಿಂಗ್ ನೀಡಿದೆ.
Advertisement
ಚಾಮರಾಜಪೇಟೆ ಈದ್ಗಾ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ವಿವಾದ ಬಗೆಹರಿಸದ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸಂಘಟನೆಗಳು ಪ್ರತಿಭಟನೆ ಜೊತೆಗೆ ಹೋರಾಟವನ್ನು ಮಾಡ್ತ ಇದ್ದಾರೆ. ಬಿಬಿಎಂಪಿ ಸ್ವತ್ತು ಎಂದು ಹೇಳಿಕೊಂಡಿರುವುದರಿಂದಾಗಿ ಬಿಬಿಎಂಪಿ ಸಮಸ್ಯೆ ಪರಿಹಾರ ಮಾಡುವಲ್ಲಿ ನಿಧಾನ ಮಾಡ್ತಿದೆ. ಒಂದು ಕಡೆ ವಕ್ಫ್ ಬೋರ್ಡ್ ಕೂಡ ನಮ್ಮ ಸ್ವತ್ತು ಸುಪ್ರೀಂ ಕೋರ್ಟ್ ಆದೇಶದಲ್ಲಿ ಉಲ್ಲೇಖ ಆಗಿದೆ ಎಂದು ಬಿಬಿಎಂಪಿಗೆ ವಾರ್ನಿಂಗ್ ಕೊಡ್ತಾ ಇದ್ದಾರೆ ಹೀಗಾಗಿ ಬಿಬಿಎಂಪಿ ಈ ಸಮಸ್ಯೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಮುಂದೆ ಇಟ್ಟಿದೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 13 ವಿದ್ಯಾರ್ಥಿನಿಯರು ಅಸ್ವಸ್ಥ – ಇಬ್ಬರು ಗಂಭೀರ
Advertisement
Advertisement
ತೆರೆಮರೆಯಲ್ಲಿ ಸಿಎಂ ಬಳಿ ಚರ್ಚೆ ಮಾಡ್ತಾ ಇದ್ದು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಬಿಬಿಎಂಪಿ ಸಿಎಂ ಎಂಟ್ರಿಗೆ ಕಸರತ್ತು ಮಾಡುತ್ತಿದ್ದರೆ, ಇತ್ತ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖವನ್ನು ಪ್ರಸ್ತಾಪ ಮಾಡ್ತಾ ಇದೆ. ಇದು ನಮ್ಮ ಸ್ವತ್ತು ಎಂದು ಆದೇಶ ಇದೆ ಬಿಬಿಎಂಪಿ ನಮ್ಮ ಸ್ವತ್ತು ಅಂದರೆ ನ್ಯಾಯಾಂಗ ನಿಂದನೆ ಆಗುತ್ತೆ ಬಿಬಿಎಂಪಿ ಕೇಳಿರೋ ಎಲ್ಲಾ ದಾಖಲಾತಿ ನೀಡಿದ್ದೇವೆ. ಇನ್ನೂ ಸ್ವಲ್ಪ ಕೊಡಬೇಕಿದೆ ಕಾಲಾವಕಾಶವನ್ನು ಕೇಳುತ್ತಿದ್ದೇವೆ ಎನ್ನುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಮೊದಲೇ ಗೊತ್ತಿತ್ತು ವರುಣಾ ರಹಸ್ಯ – ಸಿದ್ದುಗೆ ಗುಟ್ಟು ಬಿಟ್ಟುಕೊಟ್ಟಿದ್ರು ಬಿಎಸ್‍ವೈ
Advertisement
ಇನ್ನೂ ಈದ್ಗಾ ವಿವಾದ ಬಗೆಹರಿಯದ ಹಿನ್ನೆಲೆ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ರಾಜ್ಯಪಾಲರಿಗೆ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಮನವಿ ಮಾಡಿದೆ. ಮುಖ್ಯಮಂತ್ರಿಗಳು ಕೂಡ ಮಧ್ಯ ಪ್ರವೇಶ ಮಾಡ್ತಾರೆ. ಮೈಸೂರು ಮಹಾರಾಜರಿಗೂ ಕೂಡ ಮನವಿ ಮಾಡಿದ್ದೇವೆ. 1974 ರಿಂದಲೂ ಇದು ನಮ್ಮ ಗ್ರೌಂಡ್ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.