ಬೆಂಗಳೂರು: ಇದು ಸ್ವತಂತ್ರ ಭಾರತ. ಇಲ್ಲಿ ಪಾಳೇಗಾರಿಕೆ ನಡೆಸಲು ಜಮೀರ್ ಸಾದಿಕ್ ಅವರ ಪ್ರೋತ್ಸಾಹ ಇದೆಯೇ ಎಂದು ಮಾಜಿ ಸಚಿವ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಮೀರ್, ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಇಲ್ಲ. ಆದರೆ ಸ್ವಾತಂತ್ರ್ಯೋತ್ಸವವನ್ನು ನಾವೇ ಅದ್ಧೂರಿಯಾಗಿ ಆಚರಿಸುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ: ಬಳ್ಳಾರಿಯಲ್ಲಿ ಶುರುವಾಗುತ್ತಾ ಮೈನಿಂಗ್ ಚಾಪ್ಟರ್ 2? – ಅನುಮತಿ ಕೇಳಿದ ರೆಡ್ಡಿ
ಜಮೀರ್ ಅವರ ಈ ಹೇಳಿಕೆ ವಿರುದ್ಧ ಟ್ವೀಟ್ ಮಾಡುವ ಮೂಲಕ ಬಿಜೆಪಿ ವಾಗ್ದಾಳಿ ನಡೆಸಿದೆ. ಈದ್ಗಾ ಮೈದಾನದಲ್ಲಿ ಇಷ್ಟು ದಿನ ಧ್ವಜಾರೋಹಣ ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ ಜಮೀರ್ ಅಹ್ಮದ್ ಖಾನ್ ಈಗ ಗಣೇಶೋತ್ಸವಕ್ಕೆ ವಿರೋಧಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕೃಪಾಶೀರ್ವಾದದಿಂದ ಚಾಮರಾಜಪೇಟೆಯ ಈದ್ಗಾ ಮೈದಾನ ಅಂದಿನ ಲಾಲ್‍ಚೌಕ್ ಆಗಿ ಪರಿವರ್ತನೆ ಆಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ರಿಪಬ್ಲಿಕ್ ಆಫ್ ಕನಕಪುರದ ಮಾದರಿಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ರಿಪಬ್ಲಿಕ್ ಆಫ್ ಚಾಮರಾಜಪೇಟೆ ಕಟ್ಟಿಕೊಂಡಿದ್ದಾರಾ?
ಇದು ಸ್ವತಂತ್ರ ಭಾರತ. ಇಲ್ಲಿ ಪಾಳೆಗಾರಿಕೆ ನಡೆಸಲು ಮೀರ್ ಸಾದಿಕ್ ಅವರ ಪ್ರೋತ್ಸಾಹ ಇದೆಯೇ?#ರಿಪಬ್ಲಿಕ್‌ಆಫ್‌ಚಾಮರಾಜಪೇಟೆ pic.twitter.com/P836kM3kFq
— BJP Karnataka (@BJP4Karnataka) August 9, 2022
ಗಣೇಶ ಹಬ್ಬ ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ. ಗಣೇಶೋತ್ಸವದ ಮೂಲಕ ತಿಲಕರು ಸ್ವಾತಂತ್ರ್ಯ ಕಿಚ್ಚು ಹಚ್ಚಿದ್ದರು. ರಾಷ್ಟ್ರೀಯ ಜೋಡಣೆಗೆ ಬಹುಮುಖ್ಯ ಪಾತ್ರ ವಹಿಸಿದ ಗಣೇಶ ಉತ್ಸವವನ್ನು ಮಾಡುವುದು ಬೇಡ ಎನ್ನಲು ಕಾಂಗ್ರೆಸ್ ನಾಯಕರು ಯಾರು ಎಂದು ಹರಿಹಾಯ್ದಿದ್ದಾರೆ.
ಗಣೇಶ ಹಬ್ಬ ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ. ಗಣೇಶೋತ್ಸವದ ಮೂಲಕ ತಿಲಕರು ಸ್ವಾತಂತ್ರ್ಯ ಕಿಚ್ಚು ಹಚ್ಚಿದ್ದರು.
ರಾಷ್ಟ್ರೀಯ ಜೋಡಣೆಗೆ ಬಹುಮುಖ್ಯ ಪಾತ್ರ ವಹಿಸಿದ ಗಣೇಶ ಉತ್ಸವವನ್ನು ಮಾಡುವುದು ಬೇಡ ಎನ್ನಲು ಕಾಂಗ್ರೆಸ್ ನಾಯಕರು ಯಾರು?#ರಿಪಬ್ಲಿಕ್‌ಆಫ್‌ಚಾಮರಾಜಪೇಟೆ
— BJP Karnataka (@BJP4Karnataka) August 9, 2022
ರಿಪಬ್ಲಿಕ್ ಆಫ್ ಕನಕಪುರದ ಮಾದರಿಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ರಿಪಬ್ಲಿಕ್ ಆಫ್ ಚಾಮರಾಜಪೇಟೆ ಕಟ್ಟಿಕೊಂಡಿದ್ದಾರಾ? ಇದು ಸ್ವತಂತ್ರ ಭಾರತ. ಇಲ್ಲಿ ಪಾಳೇಗಾರಿಕೆ ನಡೆಸಲು ಮೀರ್ ಸಾದಿಕ್ ಅವರ ಪ್ರೋತ್ಸಾಹ ಇದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲಿವ್ ಇನ್ ರಿಲೇಶನ್ ಶಿಪ್‍ನಲ್ಲಿದ್ದು, ಮದುವೆಗೆ ನೋ ಅಂದ – ಪ್ರಿಯಕರನ ಕತ್ತು ಸೀಳಿ ಸೂಟ್‍ಕೇಸ್‍ನಲ್ಲಿ ತುಂಬಿದ್ಲು
ಮತ್ತೊಂದೆಡೆ ಜಮೀರ್ ಅವರ ಈ ಹೇಳಿಕೆ ಪ್ರಕಟವಾದ ಬೆನ್ನಲ್ಲೇ ಶ್ರೀರಾಮ ಸೇನೆ, ಅದು ಈದ್ಗಾ ಮೈದಾನವಲ್ಲ. ಅಲ್ಲಿರುವುದು ಬಿಬಿಎಂಪಿ ಆಟದ ಮೈದಾನ. ಗಣೇಶೋತ್ಸವವನ್ನು ಅಲ್ಲೇ ಮಾಡುತ್ತೇವೆ. ತಾಕತ್ತಿದ್ದರೆ ತಡೀರಿ ಎಂದು ಪೋಸ್ಟರ್ ಹಾಕಿದೆ. ಜಮೀರ್ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈಗ ಈ ವಿಚಾರದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ.