Bengaluru CityKarnatakaLatestMain Post

ಈದ್ಗಾ ಆಟದ ಮೈದವಾಗಿಯೇ ಇರುತ್ತೆ – ನಾನಿರುವವರೆಗೆ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ: ಜಮೀರ್

Advertisements

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ಮೈದಾನವಾಗಿಯೂ ಇರುತ್ತೆ. ಆಟದ ಮೈದವಾಗಿಯೂ ಇರುತ್ತೆ. ನಾನಿರುವವರೆಗೆ ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಅಂತ ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.

ಈದ್ಗಾ ಮೈದಾನ ಹಾಗೂ ಆಟದ ಮೈದಾನ ವಿವಾದದ ಬಗ್ಗೆ ಸ್ಪಷ್ಟಿಕರಣ ನೀಡಿರುವ ಜಮೀರ್, ನಾನು ಶಾಸಕನಾಗಿರುವವರೆಗೆ ಇದನ್ನ ಬದಲಿಸಲು ಯಾರಿಂದಲು ಸಾಧ್ಯವಿಲ್ಲ. ನಿನ್ನೆ ಸಭೆ ಮಾಡಿದ್ದಾರೆ ಅಂತ ಗೊತ್ತಾಯ್ತು. ಸಭೆಯ ಉದ್ದೇಶ ಏನು ಅಂತ ಅರ್ಥ ಆಗ್ತಿಲ್ಲ. ಆಟದ ಮೈದಾನ ಉಳಿಸಿ ಅಂತ ಸಭೆ, ಅಲ್ಲದೇ ಜುಲೈ 12ಕ್ಕೆ ಚಾಮರಾಜಪೇಟೆ ಬಂದ್ ಅಂತಿದ್ದಾರೆ. ಆಟದ ಮೈದಾನ ತೆಗೀತಾರೆ ಅಂತ ಯಾರು ಹೇಳಿದ್ದು? 2005ರವರೆಗೆ ಚಾಮರಾಜಪೇಟೆಯಲ್ಲಿ ಹಿಂದೂ, ಮುಸ್ಲಿಂ ಗಲಾಟೆ ಆಗುತಿತ್ತು. ನಾನು ಶಾಸಕನಾದ ಮೇಲೆ ಚಾಮರಾಜಪೇಟೆಯಲ್ಲಿ ಗಲಾಟೆ ಇಲ್ಲ. ಹಿಂದೂ, ಮುಸ್ಲಿಂ ಎಲ್ಲಾ ಶಾಂತಿಯಿಂದ ನೆಮ್ಮದಿಯಾಗಿ ಬದುಕುತ್ತಿದ್ದೇವೆ ಎಂದರು.  ಇದನ್ನೂ ಓದಿ: ಕಾಳಿಗೆ ಅವಮಾನ – ಸಾಕ್ಷ್ಯಚಿತ್ರ ಪ್ರದರ್ಶನ ಮಾಡದಂತೆ ಸೂಚನೆ

ಈ ನಡುವೆ ಕಳೆದೊಂದು ತಿಂಗಳಿನಿಂದ ಈದ್ಗಾ ವಿವಾದಕ್ಕೆ ಹೊಸ ಹೊಸ ಟ್ವಿಸ್ಟ್ ಗಳು ಸಿಗುತ್ತಿದೆ. ಚಾಮರಾಜಪೇಟೆ ಆಟದ ಮೈದಾನ ಮುಸ್ಲಿಮರಿಗೆ ಸೇರಿಲ್ಲ. ಇದು ನಮ್ಮ ಸ್ವತ್ತು ಅಂತ ಸ್ಥಳೀಯರು, ಸಂಘಟನೆಗಳು ಕಿಡಿಕಾರಿವೆ. ಚಾಮರಾಜಪೇಟೆ ಆಟದ ಮೈದಾನ ಉಳಿವಿಗಾಗಿ ಇದೇ 12ಕ್ಕೆ ಚಾಮರಾಜಪೇಟೆ ಬಂದ್‍ಗೆ ಕರೆ ಕೊಟ್ಟಿವೆ. ಬೆಳಗ್ಗೆ 6 ರಿಂದ ಸಂಜೆ 6 ಘಂಟೆಯ ತನಕ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಸಂಪೂರ್ಣ ಸ್ಥಬ್ದಗೊಳ್ಳಲಿದೆ. ಆದ್ರೆ ಇದಕ್ಕೆ ಸೊಪ್ಪು ಹಾಕದ ಮುಸ್ಲಿಂ, ವ್ಯಾಪಾರಿಗಳು, ಬಂದ್‍ಗೆ ನಮ್ಮ ಬೆಂಬಲವಿಲ್ಲ. ನಮ್ಮ ಅಂಗಡಿಗಳನ್ನು ಯಾವ್ದೇ ಕಾರಣಕ್ಕೂ ಮುಚ್ಚಲ್ಲ. ಎಂದಿನಂತೆ ವ್ಯಾಪಾರ ಮಾಡ್ತೇವೆ. ಬಂದ್ ನಿಂದ ಲಾಸ್ ಆದ್ರೆ ಇವ್ರೇನು ತಂದು ಕೊಡ್ತಾರಾ ಅಂತ ಬಂದ್‌ಗೆ, ಟಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬದಲಾಗುತ್ತಾ ಈದ್ಗಾ ಮೈದಾನದ ಹೆಸರು?

ಬಿಬಿಎಂಪಿ ಕಮಿಷನರ್ ಇದು ಪಾಲಿಕೆಯ ಸ್ವತ್ತಲ್ಲ ಎಂದಿದ್ರು. ವಕ್ಫ್ ಬೋರ್ಡ್, ಇದು ನಮ್ಮ ಜಾಗ ಎಂದು ವಾದ ಮಾಡಿತ್ತು. ಹೀಗೆ ಗೊಂದಲಗಳಲ್ಲಿದ್ದ, ಕ್ಷೇತ್ರದ ಜನ, ನಿನ್ನೆ ಈದ್ಗಾ ಮೈದಾನ ಸಮೀಪದ ಜಂಗಮ ಮಂಟಪದಲ್ಲಿ ಸಭೆ ನಡೆಸಿ, ಬಂದ್‍ಗೆ ತೀರ್ಮಾನಿಸಿದ್ದಾರೆ.

Live Tv

Leave a Reply

Your email address will not be published.

Back to top button