ಬೆಂಗಳೂರು: ದಿನದಿಂದ ದಿನಕ್ಕೆ ಈದ್ಗಾ ಮೈದಾನದ ವಿವಾದ ತಾರಕಕ್ಕೇರುತ್ತಿದೆ. ಇದೀಗ ಈದ್ಗಾ ಮೈದಾನದ ಹೆಸರು ಬದಲಾವಣೆ ಬಗ್ಗೆ ಚರ್ಚೆ ಎದ್ದಿದೆ.
ಈದ್ಗಾ ಮೈದಾನದ ಹೆಸರನ್ನು ಜಯಚಾಮರಾಜೇಂದ್ರ ಒಡೆಯರ್ ಆಟದ ಮೈದಾನ ಎಂದು ಮರುನಾಮಕರಣ ಮಾಡಲು ನಾಗರಿಕರ ಒಕ್ಕೂಟ ನಿರ್ಧಾರ ಮಾಡಿದೆ. ಮೈಸೂರು ಸಂಸ್ಥಾನದ ನೆನಪಿಗೋಸ್ಕರ ಜಯಚಾಮರಾಜೇಂದ್ರ ಹೆಸರಿಡಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಜುಲೈ 12ಕ್ಕೆ ಚಾಮರಾಜಪೇಟೆ ಬಂದ್ – ಬೆಂಬಲ ನೀಡಲು ಮುಸ್ಲಿಂ ವ್ಯಾಪಾರಿಗಳು ನಿರಾಕರಣೆ
Advertisement
Advertisement
ಈದ್ಗಾ ಮೈದಾನ ಬಿಬಿಎಂಪಿಗೆ ಸೇರಬೇಕೋ ಅಥವಾ ವಕ್ಫ್ ಬೋರ್ಡ್‌ಗೆ ಸೇರಬೇಕೋ ಎಂಬ ಗೊಂದಲ ಇನ್ನೂ ಬಗೆಹರಿಯದ ನಡುವೆಯೇ ಇದೀಗ ಸ್ಥಳೀಯರು ಮರು ನಾಮಕರಣಕ್ಕೆ ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಕಳಸ, ಹೊರನಾಡು ಸಂಪರ್ಕ ಕಡಿತ – ಬೆಳ್ತಂಗಡಿ ಶಾಲಾ, ಕಾಲೇಜುಗಳಿಗೆ ರಜೆ
Advertisement
ಈದ್ಗಾ ಆಟದ ಮೈದಾನದ ಉಳಿವಿಗಾಗಿ ಚಾಮರಾಜಪೇಟೆಯ ಒಕ್ಕೂಟ ಹಾಗೂ 50ಕ್ಕೂ ಹೆಚ್ಚು ಸಂಘಟನೆಗಳು ಸೇರಿ ಜುಲೈ 12ರಂದು ಬಂದ್‌ಗೆ ಕರೆ ನೀಡಿದೆ. ಜುಲೈ 12ರಂದು ಚಾಮರಾಜಪೇಟೆಯನ್ನು ಸಂಪೂರ್ಣ ಬಂದ್ ಮಾಡಲು ಕ್ಷೇತ್ರದ ಜನ ನಿರ್ಧರಿಸಿದ್ದಾರೆ. ಮನೆ-ಮನೆಗೆ ಭಿತ್ತಿಪತ್ರಗಳನ್ನು ಹಂಚಲು ತೀರ್ಮಾನಿಸಿ ಈದ್ಗಾ ಆಟದ ಮೈದಾನವಾಗಿಯೇ ಉಳಿಯಬೇಕೆಂದು ಸ್ಥಳೀಯರು ನಿರ್ಧಾರಕ್ಕೆ ಬಂದಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]