Bengaluru CityKarnatakaLatestLeading NewsMain Post

ಈದ್ಗಾ ಆಟದ ಮೈದಾನವಾಗಿಯೇ ಉಳಿಯಬೇಕು – ರಕ್ತ ಕೊಟ್ಟಾದರೂ ಉಳಿಸಿಕೊಳ್ತೇವೆ

- ಜುಲೈ 12ಕ್ಕೆ ಚಾಮರಾಜಪೇಟೆ ಬಂದ್‌ಗೆ ಕರೆ

Advertisements

ಬೆಂಗಳೂರು: ಈದ್ಗಾ ವಿವಾದದ ಕಿಚ್ಚು ಮತ್ತೆ ಹೆಚ್ಚಾಗುತ್ತಿದೆ. ಜುಲೈ 12ಕ್ಕೆ ಚಾಮರಾಜಪೇಟೆಯನ್ನು ಸಂಪೂರ್ಣ ಬಂದ್ ಮಾಡಲು ಕ್ಷೇತ್ರದ ಜನ ನಿರ್ಧರಿಸಿದ್ದಾರೆ. ಹೀಗಾಗಿ ಮನೆ, ಮನೆಗೆ ಭಿತ್ತಿಪತ್ರಗಳನ್ನು ಹಂಚಲು ತೀರ್ಮಾನಿಸಿ ಈದ್ಗಾ ಆಟದ ಮೈದಾನವಾಗಿಯೇ ಉಳಿಯಬೇಕೆಂಬ ನಿರ್ಧಾರಕ್ಕೆ ಸ್ಥಳೀಯರು ಬಂದಿದ್ದಾರೆ.


ಈದ್ಗಾ ಆಟದ ಮೈದಾನ ವಿವಾದ, ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಮೈದಾನವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲ್ಲ. ರಕ್ತಕೊಟ್ಟಾದ್ರೂ ಚಾಮರಾಜಪೇಟೆ ಆಟದ ಮೈದಾನವನ್ನು ಉಳಿಸಿಕೊಳ್ಳುತ್ತೇವೆ ಎಂದು ಸ್ಥಳೀಯರು ಬಿಗಿ ಪಟ್ಟು ಹಿಡಿದಿದ್ದಾರೆ. ಮೈದಾನ ಉಳಿವಿಗಾಗಿ ಇದೇ ತಿಂಗಳು 12ಕ್ಕೆ ಸಂಪೂರ್ಣ ಚಾಮರಾಜಪೇಟೆ ಬಂದ್‍ಗೆ ಕರೆ ನೀಡಲಾಗಿದೆ. ಇದನ್ನೂ ಓದಿ: ದೇಶಕ್ಕೆ ಮಾತಾಡುವ ರಾಷ್ಟ್ರಪತಿ ಬೇಕು; ನಾನು ಗೆದ್ದರೆ ದೇಶದ್ರೋಹ ಕಾನೂನು ರದ್ದು ಮಾಡ್ತೀನಿ – ಯಶವಂತ್‌ ಸಿನ್ಹಾ

ಈದ್ಗಾ ಆಟದ ಮೈದಾನ ಉಳಿವಿಗಾಗಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಹಾಗೂ 50ಕ್ಕೂ ಹೆಚ್ಚು ಸಂಘಟನೆಗಳು ಸೇರಿ ಬಂದ್‍ಗೆ ಕರೆಯನ್ನು ನೀಡಿದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಸಿರ್ಸಿ ಸರ್ಕಲ್ ನಿಂದ ಈದ್ಗಾ ಮೈದಾನದವರೆಗೆ ಬೃಹತ್ ರ‍್ಯಾಲಿ ನಡೆಸಲು ನಿರ್ಧರಿಸಲಾಗಿದೆ. ಕ್ಷೇತ್ರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಮನವಿ ಪತ್ರ ನೀಡಲಿದ್ದಾರೆ. ಇಂದಿನಿಂದ ಮನೆ ಮನೆಗೆ ತೆರಳಿ ಭಿತ್ತಿಪತ್ರವನ್ನ ನೀಡಿ, ಬಂದ್‍ನಲ್ಲಿ ಭಾಗಿಯಾಗುವಂತೆ ಕರೆ ನೀಡಲು ಸ್ಥಳೀಯರು ಮುಂದಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವ ನಡೆಸುವುದು ತಪ್ಪಲ್ಲ: ಜಿ. ಪರಮೇಶ್ವರ್


ಇಂದು ಚಾಮರಾಜಪೇಟೆಯ ಜಂಗಮ ಮಂಟಪದಲ್ಲಿ ನಡೆದ ಸಭೆಯಲ್ಲಿ ಜಯಕರ್ನಾಟಕ ಸಂಘಟನೆ ಬಂದ್‍ಗೆ ಕರೆ ನೀಡಿತು. ಇದಕ್ಕೆ ಉಳಿದ ಸಂಘಟನೆಗಳು ಕೂಡ ಒಪ್ಪಿಗೆ ಸೂಚಿಸಿದವು. ಬಂದ್ ದಿನ ಜನ ಸ್ವಯಂ ಪ್ರೇರಿತವಾಗಿ ಬರ್ತಾರೆ. ನಮ್ಮ ರ‍್ಯಾಲಿಯನ್ನು ಪೊಲೀಸರು ತಡೆದ್ರೆ, ಸರಿಯಿರಲ್ಲ. ಯಾರೇ ಬಂದ್ರೂ ನಮ್ಮನ್ನು ತಡೆಯೋಕೆ ಆಗಲ್ಲ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ. ಬಿಬಿಎಂಪಿ, ವಕ್ಫ್ ಬೋರ್ಡ್ ಜಟಾಪಟಿ ನಡುವೆ ಸ್ಥಳೀಯರೇ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ.

Live Tv

Leave a Reply

Your email address will not be published.

Back to top button