ಚಿಕ್ಕೋಡಿ: ಬೆಂಗಳೂರಿನ ಈದ್ಗಾ ಮೈದಾನ ಬಿಬಿಎಂಪಿಗೆ ಸೇರಿದ್ದು ಶಾಸಕ ಜಮೀರ್ ಅಹ್ಮದ್ ಖಾನ್ ಈ ಪ್ರಕರಣದಲ್ಲಿ ಕೈಯಾಡಿಸುತ್ತಿದ್ದಾರೆ ಎಂದು ಶ್ರೀ ರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
Advertisement
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿದ ಅವರು, ಜಮೀರ್ ಅವರಿಗೆ ಎಚ್ಚರಿಕೆ ನೀಡುತ್ತೇನೆ, ಆ ಮೈದಾನದಲ್ಲಿ ವರ್ಷಕ್ಕೆ ಒಮ್ಮೆ ಪ್ರಾರ್ಥನೆ ನೀಡಲು ಅವಕಾಶ ನೀಡಲಾಗಿದೆ. ಸುಪ್ರೀಂಕೋರ್ಟ್ ಕೂಡ ಅದು ಬಿಬಿಎಂಪಿಗೆ ಸೇರಿದ್ದು ಎಂದು ಹೇಳಿದೆ. ಜಮೀರ್ ಪ್ರಭಾವದಿಂದ ಅಧಿಕಾರಿಗಳು ದಾರಿ ತಪ್ಪಿಸುತ್ತಿದ್ದಾರೆ. ಶೀಘ್ರವೇ ಬಿಜೆಪಿ ಸರ್ಕಾರ ಮೈದಾನವನ್ನು ಕೈಗೆ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಮತ್ತೆ ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹಿಂದಿನಂತೆ 5 ರೂಪಾಯಿ ಚಿಕಿತ್ಸೆ ಮುಂದುವರಿಸುತ್ತೇನೆ – ಸಂಪೂರ್ಣ ಚೇತರಿಕೆ ಕಂಡ ಡಾ.ಶಂಕರೇಗೌಡ
Advertisement
Advertisement
ಪ್ರಧಾನಿ ಮೋದಿಗೆ ಸುಪ್ರಿಂಕೋರ್ಟ್ ಕ್ಲೀನ್ ಚೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಾಲಾವಧಿಯಲ್ಲಿ ವಿರೋಧಿಗಳನ್ನು ಮಟ್ಟಹಾಕುವ ಪ್ರಯತ್ನ ಆಗಿದೆ. ಮೋದಿಗೆ ಹಾಗೂ ಅಮಿತ್ ಶಾ ಅವರ ಮೇಲೆ ಸಾಕಷ್ಟು ತೊಂದರೆ ನೀಡಿ ಸುಳ್ಳು ಆಪಾದನೆ ಹೊರಿಸಲಾಗಿದೆ. ಸುಳ್ಳು ಆಪಾದನೆಗೆ ಕ್ಲೀನ್ ಚೀಟ್ ನೀಡಲೇಬೇಕು. ಸುಳ್ಳು ಆಪಾದನೆಗಳಿಂದ ನಿರ್ದೋಷಿ ಆಗಿ ಹೊರಬರಲೇಬೇಕು ಎನ್ನುವದನ್ನು ಕೋರ್ಟ್ ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದರು. ಇದನ್ನೂ ಓದಿ: ಪ್ರಭಾವಿ ವ್ಯಕ್ತಿಗಳನ್ನ ಫೇಸ್‍ಬುಕ್‍ನಲ್ಲಿ ಪರಿಚಯ ಮಾಡ್ಕೊಂಡು ಹಣಕ್ಕೆ ಬ್ಲಾಕ್‍ಮೇಲ್ ಮಾಡ್ತಿರೋ ಖರ್ತನಾಕ್ ಲೇಡಿ