ಬೆಂಗಳೂರು: ಪತ್ರಕರ್ತೆ ಗೌರಿ ಹತ್ಯಗೆ ಇಡೀ ದೇಶ ಬೆಚ್ಚಿಬಿದ್ದಿದೆ. ಇದರ ಬೆನ್ನಲ್ಲೇ ಈ ಸ್ಫೋಟಕ ಪತ್ರ ರಾಜ್ಯವನ್ನು ಬೆಚ್ಚಿಬೀಳಿಸಲಿದೆ.
ಗೌರಿ ಹತ್ಯೆಯ ಬಳಿಕ ಹತ್ಯೆಕೋರರ ಹಿಟ್ ಲಿಸ್ಟ್ ನಲ್ಲಿದ್ದ ರಾಜ್ಯದ ವಿಚಾರವಾದಿಗಳಿಗೆ ಹಿಂದಿನ ಕೈ ಸರ್ಕಾರ ಹಾಗೂ ಈಗಿನ ಸಮ್ಮಿಶ್ರ ಸರ್ಕಾರ ವೈಫಲ್ಯವಾಗಿದೆ ಅಂತಾ ಗರಂ ಆಗಿದ್ದಾರೆ.
ವಿಚಾರವಾದಿ, ಮಾಜಿ ಹಿಂದುಳಿದ ಆಯೋಗದ ಅಧ್ಯಕ್ಷ ಹಾಗೂ ದ್ವಾರಕನಾಥ್ ಹಾಗೂ ಬಿಟಿ ಲಲಿತಾ ನಾಯ್ಕ್, ಶಸ್ತ್ರಾಸ್ತ್ರ ಹೊಂದಿರುವ ಭದ್ರತಾ ಸಿಬ್ಬಂದಿಯನ್ನು ನೀಡಿ ಅಂತಾ ಪದೇ ಪದೇ ಪತ್ರ ಬರೆದ್ರೂ ಸರ್ಕಾರ ಕ್ಯಾರೆ ಅಂದಿಲ್ಲ.
ಈಗ ಮತ್ತೆ ಕುಮಾರಸ್ವಾಮಿಗೆ ಹಾಗೂ ಗೃಹಸಚಿವರಿಗೆ ಪತ್ರ ಬರೆದಿರುವ ದ್ವಾರಕನಾಥ್, ಗೌರಿ ಅಂಗರಕ್ಷಕರಿಲ್ಲದೇ ಇರೋದ್ರಿಂದ ಹತ್ಯೆಯಾಗಿದ್ರು. ಇನ್ನೋರ್ವ ವಿಚಾರವಾದಿ ಭಗವಾನ್ ಅಂಗರಕ್ಷಕರು ಇದ್ದಿದ್ರಿಂದ ಸೇಫ್ ಆದ್ರು. ಈ ವಿಚಾರವನ್ನು ಹತ್ಯೆಕೋರರು ಖುದ್ದು ಎಸ್‍ಐಟಿ ಮುಂದೆ ಬಾಯ್ಬಿಟ್ರು. ಹೀಗಾಗಿ ಸರ್ಕಾರ ನನಗ್ಯಾಕೆ ಅಂಗರಕ್ಷಕರನ್ನು ನೀಡುತ್ತಿಲ್ಲ ಅಂತಾ ದ್ವಾರಕನಾಥ್ ಪತ್ರ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೌರಿ ಹಂತಕ ಟಾರ್ಗೆಟ್ ಲಿಸ್ಟ್ ಗುಪ್ತಚರ ಇಲಾಖೆಯಿಂದ ಸರ್ಕಾರಕ್ಕೆ ರವಾನೆಯಾಗಿದ್ದು, ಈ ಹೆಸರುಗಳು ಕೂಡ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ದಿನೇಶ್ ಅಮಿನ್ ಮಟ್ಟು, ಗಿರೀಶ್ ಕಾರ್ನಡ್ , ಮರುಳ ಸಿದ್ದಪ್ಪ, ನಿಡುಮಾಮಿಡಿ ಶ್ರೀ, ಬರಗೂರು ರಾಮಚಂದ್ರಪ್ಪ, ಹೆಚ್ ಎಸ್ ದೊರೆಸ್ವಾಮಿ ,ಚಂದ್ರಶೇಖರ್ ಕಂಬಾರ್, ಬಿಟಿ ಲಲಿತಾ ನಾಯಕ್ ಡಾ ಸಿದ್ದಲಿಂಗಯ್ಯ, ಟಿ ಎನ್ ಸೀತಾರಂ , ವಿಮಲಾ , ಎಸ್ ಎಂ ಜಮದಾರ್ ನವರಿಗೆ ಭದ್ರತೆ ಕೊಡುವಂತೆ ಗುಪ್ತಚರ ಇಲಾಖೆಯಿಂದಲೇ ಸೂಚನೆ ಸಿಕ್ಕಿದೆ. ಆದ್ರೆ ಸರ್ಕಾರ ನಮಗೆ ಭದ್ರತೆ ಕೊಡೋದ್ರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಅಂತಾ ವಿಚಾರವಾದಿಗಳು ಇದೀಗ ಗರಂ ಆಗಿದ್ದಾರೆ.