Connect with us

Dakshina Kannada

`ಗ್ರೇಟ್ ಇಂಡಿಯನ್ ಐಸ್‍ಕ್ರೀಂ’ ಪ್ರಶಸ್ತಿ ಮುಡಿಗೇರಿಸಿಕೊಂಡ ಮಂಗ್ಳೂರು ಐಡಿಯಲ್ ಐಸ್‍ಕ್ರೀಂ!

Published

on

ಮಂಗಳೂರು: ನಗರಕ್ಕೆ ಭೇಟಿ ಕೊಟ್ಟ ಎಲ್ಲರೂ ಒಂದು ಬಾರಿ ಐಡಿಯಲ್ ಐಸ್ ಕ್ರೀಂ ಸವಿಯದೇ ಹಿಂದಿರುಗುವುದಿಲ್ಲ. ತನ್ನ ರುಚಿಯಿಂದಲೇ ಐಡಿಯಲ್ ಐಸ್ ಕ್ರೀಂ ದೇಶಾದ್ಯಂತ ಹೆಸರುವಾಸಿಯಾಗಿದ್ದು, ಇದೀಗ `ಗ್ರೇಟ್ ಇಂಡಿಯನ್ ಐಸ್ ಕ್ರೀಂ’ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.

ಹೌದು. ಕಳೆದ ಗುರುವಾರ ಹರಿಯಾಣದ ಗುರುಗ್ರಾಮದಲ್ಲಿ ನಡೆದ ಗ್ರೇಟ್ ಇಂಡಿಯನ್ ಐಸ್‍ಕ್ರೀಂ ಹಾಗೂ ಫ್ರೋಜನ್ ಡೆಸಾರ್ಟ್ ಸೀಸನ್ 6ರ ಸ್ಪರ್ಧೆಯಲ್ಲಿ ಮಂಗಳೂರು ಐಡಿಯಲ್ ಐಸ್ ಕ್ರೀಂ 8 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಸುಮಾರು 103 ಐಸ್ ಕ್ರೀಂ ತಯಾರಿಕಾ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇದರಲ್ಲಿ ಐಡಿಯಲ್ ಐಸ್ ಕ್ರೀಂ 3 ಬೆಸ್ಟ್ ಇನ್ ಇಂಡಿಯಾ ಅವಾರ್ಡ್ಸ್ ಜೊತೆ 4 ಚಿನ್ನ ಹಾಗೂ 1 ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ ಅಂತ ಐಡಿಯಲ್ ಐಸ್ ಕ್ರೀಂ ಸಂಸ್ಥೆಯ ಮಾಲಕ ಮುಕುಂದ್ ಕಾಮತ್ ಹೇಳಿದ್ದಾರೆ.

ಐಡಿಯಲ್ ಐಸ್ ಕ್ರೀಂ ತಯಾರಿಕಾ ತಂಡದ ಸತತ ಪರಿಶ್ರಮದಿಂದ ಮತ್ತು ಗ್ರಾಹಕರ ಪ್ರೀತಿ ಹಾಗೂ ಸಹಕಾರದಿಂದಾಗಿ ನಮಗೆ ಇಂದು ಈ ಪ್ರಶಸ್ತಿ ಲಭಿಸಿದೆ. ಈ ಹಿಂದೆ ಅಂದರೆ 2013ರಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಐಡಿಯಲ್ ಐಸ್ ಕ್ರೀಂ ನ ವೆನಿಲ್ಲಾ ಫ್ಲೇವರ್ 3 ಪ್ರಶಸ್ತಿಗಳನ್ನು ಗೆದ್ದಿತ್ತು. ನಾವು ಪ್ರತೀ ಬಾರಿ ಗ್ರಾಹಕರ ಐಡಿಯಾ ಹಾಗೂ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಂಡು ಅತ್ಯುತ್ತಮ ಗುಣಮಟ್ಟದ ಐಸ್ ಕ್ರೀಂಗಳನ್ನು ಗ್ರಾಹಕರಿಗೆ ತೃಪ್ತಿಯಾಗುವಂತೆ ನೀಡುತ್ತಾ ಬಂದಿದ್ದೇವೆ. ನಮ್ಮ ಸಂಸ್ಥೆ ಇಂದು ಈ ಮಟ್ಟಕ್ಕೆ ಯಶಸ್ವಿಯಾಗಲು ಗ್ರಾಹಕರು, ಗೆಳೆಯರು, ಸಂಸ್ಥೆಯ ಸಹೋದ್ಯೋಗಿಗಳು, ಮಾರ್ಕೆಟಿಂಗ್ ವಿಭಾಗದವರಿಂದ ಸಾಧ್ಯವಾಯಿತು. ಒಟ್ಟಿನಲ್ಲಿ ಸಂಸ್ಥೆಯ ಬೆಳವಣಿಗೆಗಾಗಿ ದುಡಿಯುತ್ತಿರುವ ಪ್ರತಿಯೊಬ್ಬರ ಶ್ರಮದಿಂದಾಗಿ ನಾವು ಇಂದು ಈ ಸ್ಥಾನದಲ್ಲಿ ನಿಂತಿದ್ದೇವೆ. ಹೀಗಾಗಿ ಈ ಪ್ರಶಸ್ತಿಯನ್ನು ನಾನು ಈ ಸಂದರ್ಭದಲ್ಲಿ ಇವರೆಲ್ಲರಿಗೂ ಅರ್ಪಿಸುತ್ತಿದ್ದೇನೆ ಅಂತ ಹೇಳಿದ್ರು.

ಐಡಿಯಲ್ ಐಸ್‍ಕ್ರೀಂ ಈ ಸ್ಪರ್ಧೆಗಾಗಿ ಆವಿಷ್ಕರಿಸಿದ ಮ್ಯಾಂಗೊ ಸೊರ್ಬೆಟ್, ಮರ್ಝಿ ಪಾನ್, ವೆನಿಲ್ಲಾ ಫ್ರೋಝನ್ ಡೆಸರ್ಟ್ ಐಸ್‍ಕ್ರೀಂ ಗಳು ಚಿನ್ನದ ಪದಕಗಳೊಂದಿಗೆ `ಬೆಸ್ಟ್ ಇನ್ ಕ್ಲಾಸ್’ ಕೆಟಗರಿಯಲ್ಲಿ ಪ್ರಶಸ್ತಿ ಪಡೆದಿವೆ.

Click to comment

Leave a Reply

Your email address will not be published. Required fields are marked *