International

ಹಿಮ್ಮುಖವಾಗಿ ಹರಿದ ಮಿಸಿಸಿಪ್ಪಿ ನದಿ- ವೀಡಿಯೋ ನೋಡಿ

Published

on

Share this

ವಾಷಿಂಗ್ಟನ್: ಅಮೆರಿಕದ ನ್ಯೂ ಒರ್ಲಿಯನ್ಸ್​ ಕರಾವಳಿ ತೀರದಲ್ಲಿ ಎದ್ದಿರುವ ಇಡಾ ಚಂಡಮಾರುತದ  ಪರಿಣಾಮವಾಗಿ ಮಿಸಿಸಿಪ್ಪಿ ನದಿ ಹಿಮ್ಮುಖವಾಗಿ ಹರಿಯುತ್ತಿದೆ.

ಅಮೆರಿಕದಲ್ಲಿ ಚಂಡಮಾರುತಕ್ಕೆ ಇಡಾ (Hurricane Ida) ಎಂದು ಹೆಸರಿಡಲಾಗಿದೆ. ಚಂಡಮಾರುತ ಅಬ್ಬರದ ಜೊತೆಗೆ ಭೂಕುಸಿತವೂ ಉಂಟಾಗುತ್ತಿದೆ. ಮಿಸಿಸಿಪ್ಪಿ ನದಿ ಹಿಮ್ಮುಖವಾಗಿ ಹರಿಯುತ್ತಿದೆ. ಈ ಬಾರಿ ಎದ್ದಿರುವ ಇಡಾ ಚಂಡಮಾರುತ ಭಾರೀ ಅಪಾಯದಿಂದ ಕೂಡಿದ್ದು, ಮಿಸಿಸಿಪ್ಪಿ ನದಿ ದಕ್ಷಿಣದಿಂದ ಉತ್ತರ ದಿಕ್ಕಿನತ್ತ ಹರಿಯಲಾರಂಭಿಸಿದೆ. ಇದನ್ನೂ ಓದಿ: ಬಿಕಿನಿಯಲ್ಲಿ ಪ್ರಿಯಾಂಕಾ ಚೋಪ್ರಾ – ಚಾಕು ಹಿಡಿದ ನಿಕ್

ಮಿಸಿಸಿಪ್ಪಿ ನದಿ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಮುದ್ರದಲ್ಲಿ ಭೀಕರ ಚಂಡಮಾರುತ ಎದ್ದಿರುವುದರಿಂದ ನದಿ ಹಿಮ್ಮುಖವಾಗಿ ಹರಿಯತೊಡಗಿದೆ. ಅಮೆರಿಕದ ನ್ಯೂ ಒರ್ಲಿಯನ್ಸ್ ಕರಾವಳಿ ತೀರದಲ್ಲಿ ಎದ್ದಿರುವ ಈ ಚಂಡಮಾರುತದಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಅನೇಕ ಮನೆಗಳು ನಾಶವಾಗಿವೆ. ನ್ಯೂ ಒರ್ಲಿಯನ್ಸ್ ಭಾಗದಲ್ಲಿ ಉಂಟಾಗಿರುವ ಇಡಾ ಚಂಡಮಾರುತದಿಂದ ಲೂಸಿಯಾನದ ರಾಜಧಾನಿ ಬ್ರಾಟನ್ ರೂಜ್ ಸುತ್ತಮುತ್ತ ಜನಜೀವನ ಅಸ್ತವ್ಯಸ್ತವಾಗಿದೆ. ಈ ಭಾಗದಲ್ಲಿ ಗಂಟೆಗೆ 240 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.

3,02,000 ಮನೆಗಳು ಹಾಗೂ ಕಾರ್ಖಾನೆ, ಕಂಪನಿಗಳಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡಿದೆ. ಈ ಚಂಡಮಾರುತದ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಉಂಟಾಗಿರುವ ಅತಿ ಪ್ರಬಲ ಚಂಡಮಾರುತ ಇದಾಗಿದೆ. ಇಡಾ ಚಂಡಮಾರುತದ ಅಬ್ಬರ ಮೂರ್ನಾಲ್ಕು ದಿನ ಇರುವ ಸಾಧ್ಯತೆಯಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications