ಮುಂಬೈ: ನಯನತಾರಾ ಜತೆಗಿನ ತಮ್ಮ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಸಂಭ್ರಮ ಹೆಚ್ಚಿಸಿದ್ದಾರೆ ದಕ್ಷಿಣದ ಖ್ಯಾತ ತಾರೆ ಸಮಂತಾ ರುತ್ ಪ್ರಭು. ಇಬ್ಬರು ಖ್ಯಾತ ನಟಿಯರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗಿರುವ ಈ ಸಂದರ್ಭದಲ್ಲಿ ಸಮಂತಾ ಶೇರ್ ಮಾಡಿರುವ ಫೋಟೋ ವೈರಲ್ ಆಗಿದೆ. ಕುಚಿಕು ಸ್ನೇಹಕ್ಕೆ ಮುನ್ನುಡಿ ಬರೆದಿದೆ.
ನಯನತಾರಾ ಮತ್ತು ಸಮಂತಾ ಇಬ್ಬರೂ ಟಾಲಿವುಡ್ ಸೂಪರ್ ಸ್ಟಾರ್ ನಟಿಯರು. ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅಲ್ಲದೇ, ಈಗ ಇಬ್ಬರು ಒಂದೇ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಫೋಟೋಗೆ ಮತ್ತಷ್ಟು ಮಹತ್ವ ಬಂದಿದೆ. ನಯನತಾರಾ ಜತೆ ನಟಿಸುತ್ತಿರುವ ಕುರಿತು ಸಮಂತಾ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಮಂತಾ ಅವರನ್ನು ನಯನತಾರಾ ತಮ್ಮ ತೋಳುಗಳಿಂದ ಅಪ್ಪಿಕೊಂಡಿರುವ, ಇಬ್ಬರೂ ನಗುತ್ತ ಕ್ಯಾಮರಾಗೆ ಪೋಸ್ ಕೊಟ್ಟಿರುವುದನ್ನು ಕಾಣಬಹುದು. ಈ ಪೋಸ್ಟ್ ಗೆ ಸಮಂತಾ, ೨೦:೦೨. ೨೨.೨.೨೦೨೨ ಇದು ವಿಶೇಷ ದಿನವಾಗಿದೆ ಎಂದೂ ಅವರು ಬರೆದುಕೊಂಡಿದ್ದಾರೆ. ನಯನತಾರಾ ಸೋಶಿಯಲ್ ಮೀಡಿಯಾದಲ್ಲಿ ಇಲ್ಲ. ಆದರೂ ಅವರು ನಿಮಗೆ ತಮ್ಮ ಪ್ರೀತಿಯನ್ನು ಕಳುಹಿಸುತ್ತಾರೆ ಎಂದು ಬರೆದು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆ ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥಮಾಡಿಕೊಳ್ಳಬೇಕು: ಮಾಧವನ್
View this post on Instagram
ಈ ವಿಶೇಷ ಫೋಟೋ ಕಂಡ ಅಭಿಮಾನಿಗಳು ಸಖತ್ ಖುಷ್ ಆಗಿದ್ದು, ತಮ್ಮ ವಿಶೇಷ ಸ್ಟಾರ್ ನಟಿಯ ಗೆಳೆತನ ನೋಡಿ ತಮ್ಮದೇ ಆದ ರೀತಿಯಲ್ಲಿ ಹಾರೈಸಿದ್ದಾರೆ.
ಇವರಿಬ್ಬರ ಗೆಳೆಯತನಕ್ಕೆ ಸಾಕ್ಷಿ ಎನ್ನುವಂತೆ ಈ ಹಿಂದೆ ಸಿನಿಮಾ ನಿರ್ದೇಶಕ ವಿಘ್ನೇಶ್ ಶಿವನ್ ಚಿತ್ರದ ಸೆಟ್‌ನ ತೆರೆಮರೆಯ ವೀಡಿಯೋವನ್ನು ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ ನಯನಾ ಮತ್ತು ಸಮಂತಾ ಒಂದೇ ರೀತಿಯ ಉಡುಪು ಧರಿಸಿದ್ದರು.
View this post on Instagram
ಈ ಇಬ್ಬರು ನಟಿಯರು ‘ಕಾತುವಾಕುಲ ರೆಂಡು ಕಾದಲ್’ ಸಿನಿಮಾದಲ್ಲಿ ಒಂದಾಗಿದ್ದು, ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರದ ವಿಶೇಷ ಅಂದರೆ ಬಹುತೇಕ ಸ್ಟಾರ್ ನಟ-ನಟಿಯರೆ ತಾರಾಗಣದಲ್ಲಿ ಇದ್ದಾರೆ. ಹಾಗಾಗಿ ಸಿನಿಮಾ ಬಿಡುಗಡೆಗೂ ಮುನ್ನ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ವೈರಲ್ ಆಯ್ತು ಶಾರೂಖ್ ನ್ಯೂಲುಕ್ – ರಿಯಲ್ ಫೋಟೋ ರಿಲೀಸ್!