ನವದೆಹಲಿ: ಮಾರುತಿ ಸುಜುಕಿ(Maruti suzuki) ಕಂಪನಿಯು ತನ್ನ 800ಸಿಸಿ (800cc) ಎಂಜಿನ್‌ಗೆ ಈ ಆರ್ಥಿಕ ವರ್ಷದ ಕೊನೆಯಲ್ಲಿ(ಮಾರ್ಚ್ 2023) ಗುಡ್ ಬೈ ಹೇಳಲಿದೆ.
ಮಾರುತಿ 800 ಕಾರಿನ ಮುಖಾಂತರ 1983ರಲ್ಲಿ ಈ ಎಂಜಿನನ್ನು ಪರಿಚಯಿಸಲಾಗಿತ್ತು. ನಾಲ್ಕು ದಶಕಗಳ ಕಾಲದ ಎಂಜಿನ್‌ಗೆ ಈಗ ವಿದಾಯ ಹೇಳುವ ಸಮಯ ಬಂದಿದೆ. ಮುಂಬರುವ ಇಂಧನ ಹೊರಸೂಸುವಿಕೆ ಮಾನದಂಡಗಳು ಮತ್ತು ಈ ಎಂಜಿನ್‌ಗೆ ಅಷ್ಟಾಗಿ ಬೇಡಿಕೆ ಇಲ್ಲದಿರುವುದರಿಂದ ಕಂಪನಿ ಗುಡ್ ಬೈ ಹೇಳಲು ಮುಂದಾಗಿದೆ.
Advertisement
Advertisement
800ಸಿಸಿ ಎಂಜಿನ್ ಭಾರತಕ್ಕೆ ಬಂದಿದ್ದು 1983ರಲ್ಲಿ. ಇದನ್ನು F8B ಎಂಬ ಕೋಡ್‌ನಿಂದ ಕರೆಯಲಾಗುತ್ತಿತ್ತು. ಈ ಎಂಜಿನ್ 39hp ಶಕ್ತಿ ಮತ್ತು 59Nm ಟಾರ್ಕ್ ಉತ್ಪಾದಿಸುತ್ತಿತ್ತು. 2000ನೇ ಇಸವಿಯಲ್ಲಿ ಇದನ್ನು ಮೇಲ್ದರ್ಜೆಗೆ ಏರಿಸಲಾಯ್ತು. ಇದನ್ನು F8D ಎಂದು ಕರೆಯಲಾಯ್ತು. ಮೇಲ್ದರ್ಜೆಗೆ ಏರಿಸಿದ ನಂತರ ಈ ಎಂಜಿನ್‌ನ ಸಾಮರ್ಥ್ಯ ಮತ್ತಷ್ಟು ಹೆಚ್ಚಾಯ್ತು. ಫ್ಯೂಯಲ್ ಇಂಜೆಕ್ಷನ್ ಮತ್ತು ಪ್ರತಿ ಸಿಲಿಂಡರ್‌ಗೆ ನಾಲ್ಕು ವಾಲ್ವ್‌ಗಳನ್ನು ಸೇರಿಸಿದ್ದರಿಂದ ಇದು ಆಗಿನ BS2 ಮಾನದಂಡಕ್ಕೆ ಮಾತ್ರವಲ್ಲ, 2020ರ BS6 ಮಾನದಂಡಕ್ಕೂ ಅನುಗುಣವಾಗುವಾಗಿತ್ತು. ಇದನ್ನೂ ಓದಿ: ಹಾಸ್ಟೆಲ್‍ನ ಕಿಟಕಿ ರಾಡ್ ಮುರಿದು ಮೂವರು ವಿದ್ಯಾರ್ಥಿನಿಯರು ಪರಾರಿ
Advertisement
ಈ ಎಂಜಿನನ್ನು ಮಾರುತಿ 800 ಓಮ್ನಿ(Maruti Omni) ಮತ್ತು ಆಲ್ಟೋ ಕಾರುಗಳಲ್ಲಿ(Alto Car) ಉಪಯೋಗಿಸಲಾಗಿದೆ. ಇದು ಅತ್ಯಂತ ಇಂಧನ ದಕ್ಷತೆ ಹೊಂದಿದ್ದ ಎಂಜಿನ್. ಈಗಿರುವ ಆಲ್ಟೋ 800 ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ನೀಡುವ ಮೈಲೇಜ್ 24.5 ಕಿ.ಮೀ. (ARAI). F8B ಎಂಜಿನ್ 4-ಸ್ಪೀಡ್ ಗೇರ್‌ಬಾಕ್ಸ್‌ನಲ್ಲಿ ಲಭ್ಯವಿತ್ತು. ಮೇಲ್ದರ್ಜೆಗೆ ಏರಿಸಿದ ನಂತರ 5-ಸ್ಪೀಡ್ ಗೇರ್‌ಬಾಕ್ಸ್‌ನಲ್ಲಿ ಲಭ್ಯವಾಯಿತು. ಸ್ವಲ್ಪ ಸಮಯಗಳ ಕಾಲ 3-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನಲ್ಲಿ ಕೂಡ ಈ ಎಂಜಿನ್ ಲಭ್ಯವಿತ್ತು.