ನವದೆಹಲಿ: ಕೊವಾಕ್ಸಿನ್ ಲಸಿಕೆಯ (Covaxin Vaccine) ಅಡ್ಡ ಪರಿಣಾಮಗಳ ಬಗ್ಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU) ನಡೆಸಿದ ಸಂಶೋಧನೆ ಕಳಪೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೇಳಿದೆ.
ಸಂಶೋಧನೆಗೆ ಯಾವುದೇ ಆರ್ಥಿಕ ಅಥವಾ ತಾಂತ್ರಿಕ ಬೆಂಬಲವನ್ನು ಒದಗಿಸಿಲ್ಲ. ಈ ಸಂಶೋಧನೆಯನ್ನು ಕಳಪೆಯಾಗಿ ತಯಾರಿಸಲಾಗಿದೆ ಎಂದು ಐಸಿಎಂಆರ್ ಡೈರೆಕ್ಟರ್ ಜನರಲ್ ರಾಜೀವ್ ಬಹ್ಲ್ ಹೇಳಿದ್ದಾರೆ. ಅಧ್ಯಯನ ವರದಿಯಲ್ಲಿ ಐಸಿಎಂಆರ್ ಹೆಸರನ್ನು ಬಳಸಿದ್ದನ್ನು ಕೂಡಲೇ ತೆಗೆದು ಹಾಕುವಂತೆ ಬಿಹೆಚ್‌ಯು ಸೂಚಿಸಿದೆ. ಇದನ್ನೂ ಓದಿ: ಅಪ್ರಾಪ್ತನ ಹುಚ್ಚಾಟಕ್ಕೆ ಇಬ್ಬರು ಟೆಕ್ಕಿಗಳು ಬಲಿ – ಅಪಘಾತದ ಬಗ್ಗೆ ಪ್ರಬಂಧ ಬರೆಯುವಂತೆ ಸೂಚಿಸಿದ ಕೋರ್ಟ್
Advertisement
Advertisement
ಭಾರತ್ ಬಯೋಟೆಕ್ (Bharat Biotech) ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯ ಪಡೆದುಕೊಂಡಿರುವ ಮೂರನೇ ಒಂದರಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡಪರಿಣಾಮಗಳು ಕಾಣಿಸಿಕೊಂಡಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಅಧ್ಯಯನ ತಿಳಿಸಿತ್ತು. ಇದರ ಜೊತೆ ಜೊತೆಗೆ ಅಧ್ಯಯನದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಹೆಸರನ್ನು ಬಳಸಲಾಗಿತ್ತು.
Advertisement